ಶಾಪಿತ ಯೋಗ

ಭಚಕ್ರದ ರಾಶಿಗಳು ವಿದ್ಯುತ್- ಚುಂಬಕ ಬೃಹತ್ ಶಕ್ತಿಕೇಂದ್ರಗಳು. ಗ್ರಹಗಳು ರಾಸಾಯನಿಕ ಬೃಹತ್ ಶಕ್ತಿ ಕೇಂದ್ರಗಳು. ಶನಿರಾಹು ಸಮಾಗಮದ ಸಮಯದಲ್ಲಿ ಎಲ್ಲಾ ಗ್ರಹಗಳು ರಾಹುಕೇತುಗಳ ಮಧ್ಯ ಇರುತ್ತವೆ.
ಶನಿರಾಹು ಯುತಿ ತುಲಾರಾಶಿಯಲ್ಲಿ ಡಿಸೆಂಬರ್ 2012ರಲ್ಲಿ ಆರಂಭವಾಗಿ ಸೆಪ್ಟೆಂಬರ್ 2014ರ ವರೆಗೂ ಇರುತ್ತದೆ. ಇದನ್ನು ಶಾಪಿತ ಯೋಗ ಎನ್ನುತ್ತಾರೆ.
ಇದು ಹಿಂಸಾಚಾರ ವಿದ್ರೊಹ, ಕ್ರೌರ್ಯ, ಸಂಘರ್ಷದ ಕಾಲ. ಇದರ ಪ್ರಭಾವ ಎಲ್ಲಾ ದೇಶಗಳಲ್ಲಿ ಪ್ರಕೃತಿ ವಿಕೋಪ ಹಾಗೂ ರಾಜಕಾರಣದಲ್ಲಿ ಬದಲಾವಣೆ ತರುವಂಥದ್ದಾಗಿರುತ್ತದೆ. ಹಿಂಸಾಚಾರ, ಸಾವುನೋವು, ಅಸಹಜ ಸಂಬಂಧ, ತೆರಿಗೆ ಹೆಚ್ಚಳ, ಭವಿಷ್ಯದ ಬಗ್ಗೆ ಭೀತಿ, ಬಂಧನಗಳ ಭಯ ಸೂಚಿಸುವ ಸಮಯ.
ಶಾಪಿತ ಯೋಗದ ಒಂದು ಶುಭ ಫಲವೇನೆಂದರೆ ಅಂದುಕೊಂಡ ಕಾರ್ಯಕ್ಕೆ ಪ್ರಾರಂಭದಲ್ಲಿ ವಿಘ್ನ ಬಂದರೂ, ನಿಧಾನವಾಗಿ ಅದು ಈಡೇರುತ್ತದೆ. ಆದ ಕಾರಣ ರಾಷ್ಟ್ರ ರಾಜಕಾರಣದಲ್ಲಿ ಪ್ರಧಾನಮಂತ್ರಿ ಸ್ಥಾನವೂ ಆಸೆ ಪಟ್ಟವರಿಗೆ ಮೊದಲು ನೋವುಂಟು ಮಾಡಿದರೂ ಕಡೆಯಲ್ಲಿ ಶುಭಫಲ ಕೊಡುವುದು. ಅಥವಾ ಅನಿರೀಕ್ಷಿತ ವ್ಯಕ್ತಿಯೊಬ್ಬರು ಪ್ರಧಾನಿಯಾಗುವ ಸಾಧ್ಯತೆಯೂ ಇದೆ. ದುಷ್ಟ, ಶ್ರೀಮಂತ ವ್ಯಕ್ತಿಗಳಿಗೆ ತೊಂದರೆ ಹಾಗೂ ಸೆಪ್ಟೆಂಬರ್ 2014ರ ನಂತರ ಜನಸಾಮಾನ್ಯರ ಜೀವನ ಹಸನಾಗುವುದು.
ಭಾವಗಳು ಘಟನಾವಳಿಯನ್ನು ಸೂಚಿಸಿದರೆ, ಗ್ರಹಗಳು ಘಟನೆಗಳು ಜರುಗುವ ಕಾಲವನ್ನು ತಿಳಿಸುತ್ತವೆ. ತುಲಾರಾಶಿ ಪಶ್ಚಿಮ ದಿಕ್ಕು, ವ್ಯಾಪಾರ ಸ್ಥಳ ಸಮತೋಲನವನ್ನು ಸೂಚಿಸಿದರೆ, ಶನಿಗ್ರಹ ಸಾವುನೋವು ಬಂಧನ ಸಂಕಷ್ಟಗಳನ್ನೂ, ರಾಹು ಮೋಸ, ವಂಚನೆ ವಿದ್ರೋಹ, ಪರಸ್ಪರ ಅಪನಂಬಿಕೆ, ಸಾಂಕ್ರಾಮಿಕ ರೋಗಗಳನ್ನೂ ತಿಳಿಸುತ್ತದೆ. ಈ ಯೋಗದ ಸಮಯದಲ್ಲಿ ಶನಿ ಕುಜರ ಪರಸ್ಪರ ದೃಷ್ಟಿ ಸಂಬಂಧದಿಂದ ಅನಾಹುತ, ಅಪಘಾತಗಳು ಹೆಚ್ಚಾಗುತ್ತವೆ.
ಶನಿ- ರಾಹುಗಳ ಸಮಾಗಮದ ಬಿಂದು ಅತಿಸೂಕ್ಷ್ಮವೆನಿಸಿ, ಆ ಬಿಂದುವಿನ ಮೇಲೆ ಇತರೆ ಗ್ರಹಗಳು ಸಂಚರಿಸಿದಾಗ ತೊಂದರೆ, ಪ್ರಕೃತಿ ವಿಕೋಪಗಳು ಘಟಿಸುತ್ತವೆ. ಕುಜಗ್ರಹವು ರಾಜ ಗ್ರಹರಾಶಿಯಾದ ಸಿಂಹದಲ್ಲಿ ಸಂಚರಿಸುವಾಗ ಬೆಂಕಿಗೆ ತುಪ್ಪ ಸುರಿಯುವ ಕಾರ್ಯ ಮಾಡಿ, ಯುದ್ಧದ ಪರಿಸ್ಥಿತಿ ಉಂಟುಮಾಡುತ್ತಾನೆ. ರಾಜಗ್ರಹ ಸೂರ್ಯನು ಈ ಯುತಿಯನ್ನು ಸೇರಿದಾಗ ರಾಜಕಾರಣದಲ್ಲಿ ಗೊಂದಲ ಸೃಷ್ಟಿಸುತ್ತಾನೆ.
ಈ ಯುತಿಯನ್ನು ದೇವಗ್ರಹ ಗುರುವು ವೀಕ್ಷಿಸುತ್ತಿದ್ದು, ಜನವರಿ 2014ರಿಂದ ಏಪ್ರಿಲ್ 2014ರ ವರೆಗಿನ ಸಮಯದಲ್ಲಿ ಗುರುಗ್ರಹ ಆರಿದ್ರಾ ನಕ್ಷತ್ರದಲ್ಲಿದ್ದಾಗ ರಾಹುವಿನ ಪ್ರಭಾವ ಉಲ್ಬಣಿಸಬಹುದು. ಕಾಳರಾತ್ರಿಯ ನಂತರ ಬೆಳಕು ಬರಬೇಕು ಇದು ವಿಧಿ, ದೈವ ನಿಯಾಮಕ.
ಶನಿಯು ದೀಪ್ತಾವಸ್ಥೆಗೆ ಬಂದಾಗ ಜನವರಿ 2014 ಎಲ್ಲಾ ಅಶುಭ ಪರಿಸ್ಥಿತಿಗಳಿಗೆ ಕಡಿವಾಣ ಬಿದ್ದು, ಗುರುವು ಸ್ವನಕ್ಷತ್ರ ಪುನರ್ವಸುವಿನಲ್ಲಿ ಸಂಚರಿಸುವಾಗ ಎಲ್ಲಾ ಸಂಕಷ್ಟಗಳಿಗೆ ಪರಿಹಾರ ಸಿಗಲಿದೆ. ರಾಹು ತುಲಾರಾಶಿಯನ್ನು ಬಿಟ್ಟಾಗ ದೇಶದ ಪರಿಸ್ಥಿತಿ ಹದವಾಗುವುದು.
ತುಲಾರಾಶಿಯು ಪಶ್ಚಿಮ ದಿಕ್ಕು ವ್ಯಾಪಾರ ಸ್ಥಳ ಸೂಚಿಸುವುದು. ಶನಿ ವಾಯು ತತ್ವ ಪಶ್ಚಿಮ ದಿಕ್ಕು, ಜನಾಡಳಿತ, ಪ್ರಜಾಪ್ರಭುತ್ವ ಸೂಚಿಸುವುದರಿಂದ ಹಿಂಸಾಚಾರವು ದಕ್ಷಿಣ, ದಕ್ಷಿಣ ನ್ಯೆರುತ್ಯ, ಪಶ್ಚಿಮ ನ್ಯೆರುತ್ಯ, ಪಶ್ಚಿಮ ಭಾಗ, ಕರಾವಳಿ ಪ್ರದೇಶಗಳಲ್ಲಿ, ವ್ಯಾಪಾರ ವಹಿವಾಟು ಸ್ಥಳಗಳಲ್ಲಿ ಅನಾಹುತಗಳುಂಟಾಗುತ್ತವೆ.
ರಾಹು ಆವಿಷ್ಕಾರ, ವೈದ್ಯಕೀಯಗಳನ್ನು ಸೂಚಿಸುವುದರಿಂದ ವೈದ್ಯಕೀಯ ಮತ್ತು ಇಂಧನ ಶಕ್ತಿ ವಿಭಾಗದಲ್ಲಿ ಆವಿಷ್ಕಾರವಾಗುವ ಸಾಧ್ಯತೆಗಳಿವೆ. ಭಾರತ ಇನ್ನೊಂದು ದೇಶದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ.
ಹೆಚ್ಚಿನ ಮಾಹಿತಿಗೆ ಮೊ. 9986031083 ಸಂಪರ್ಕಿಸಿ.
- ಪ್ರೊ. ಬಿ.ಕೆ. ಸಾಯಿನಾಥ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


