ಜನಸಂಖ್ಯಾಶಾಸ್ತ್ರ

ವಂಶಾಭಿವೃದ್ಧಿಗಾಗಿ ಪರಿತಪಿಸುವ ಮಾನವ ಇಂದು ಈ ವಿಷಯದಲ್ಲಿ ತಾನು ಮಹತ್ತರ ಸಾಧನೆ ಮಾಡಿರುವುದಾಗಿ ತಿಳಿದಿದ್ದಾನೆ. ಆದರೆ, ಶಾಸ್ತ್ರಗಳು ತಿಳಿಸುವುದೇನೆಂದರೆ 'ತೇನ ವಿನಾ ತೃಣಮಪಿ ನ ಚಲತಿ' ಆ ಭಗವಂತನ ಕೃಪೆ ಇಲ್ಲದೆ ಹುಲ್ಲುಕಡ್ಡಿಯೂ ಅಲ್ಲಾಡದು ಎಂದು.
ಸಂತಾನ ಎಂಬ ವಿಚಾರದಲ್ಲಿ ಜ್ಯೋತಿಷ್ಯ ಶಾಸ್ತ್ರ ಬಹಳಷ್ಟು ಬೆಳಕು ಚೆಲ್ಲುತ್ತದೆ. ಶಾಸ್ತ್ರದ ಪ್ರಕಾರ ಸಂತಾನ ಕೊಡುವ ಗ್ರಹ 'ಗುರು'. ಗ್ರಹ ಹಾಗೂ ಜಾತಕದಲ್ಲಿ ಪಂಚಮ ಭಾವ, ಸಾಮಾನ್ಯವಾಗಿ ಯಾರ ಜಾತಕಗಳಲ್ಲಿ ಗುರು ಮಕರದಲ್ಲಿ ಇರುತ್ತಾನೋ ಅವರಿಗೆ ಅವರ ಜಾತಕದ ಲಗ್ನದಿಂದ ಅಥವಾ ರಾಶಿಯಿಂದ ಪಂಚಮಾಧಿಪತಿ ಗ್ರಹ ಬಲ ಇಲ್ಲದಿದ್ದರೆ ಸಂತಾನ ಕಷ್ಟಸಾಧ್ಯ. ಅಂಥ ಪರಿಸ್ಥಿತಿಯಲ್ಲಿ ಬಹಳವಾದ ದೇವತಾರಾಧನೆ ಅವಶ್ಯವಿರುತ್ತದೆ.
ಅಧಿಪತಿ
ಜಾತಕದಲ್ಲಿ ಲಗ್ನ ಹಾಗೂ ಚಂದ್ರನಿಂದ ಪಂಚಮಾಧಿಪತಿಯ ಅಭಿಮಾನಿ ದೇವರ ಆರಾಧನೆ, ಅಂದರೆ ರವಿ ಗ್ರಹಕ್ಕೆ ಈಶ್ವರ, ಚಂದ್ರನಿಗೆ ದುರ್ಗಾ, ಕುಜನಿಗೆ ಸುಬ್ರಮಣ್ಯ, ಬುಧನಿಗೆ ಮಹಾವಿಷ್ಣು, ಗುರುಗ್ರಹಕ್ಕೆ ದತ್ತಾತ್ರೇಯ, ಶುಕ್ರನಿಗೆ ಲಕ್ಷ್ಮೀನಾರಾಯಣ, ಶನೈಶ್ಚರನಿಗೆ ನೃಸಿಂಹ ಅಥವಾ ಆಂಜನೇಯ, ರಾಹುವಿಗೆ ದುರ್ಗಾ ಹಾಗೂ ಕೇತು ಗ್ರಹ ದೋಷ ನಿವಾರಣೆಗೆ ಗಣಪತಿಯ ಆರಾಧನೆ ಮಾಡಬೇಕು.
ದೇವತಾರಾಧನೆ ಎಂದರೆ ಆಯಾ ದೇವತೆಗಳ ಮಂತ್ರ, ಜಪ, ತರ್ಪಣ ಹವನ ಇತ್ಯಾದಿಗಳು, ಬಹಳ ವಿಶೇಷವಾಗಿ ನೆನಪು ಇಟ್ಟುಕೊಳ್ಳಬೇಕಾದ ವಿಷಯ ಎಂದರೆ ಯಾವುದೇ ಕಾರಣಕ್ಕೂ ಜಾತಕದಲ್ಲಿ ನೀಚತ್ವ ಸ್ಥಿತವಾದ ಗ್ರಹದ ರತ್ನ ಧಾರಣೆ ನಿಷಿದ್ಧ. ಸಂತಾನ ಅಪೇಕ್ಷಿತರು ಸಂತಾನ ಗೋಪಾಲಕೃಷ್ಣ ಮಂತ್ರವನ್ನು ಜಪ ಮಾಡಬಹುದು. ಮಂತ್ರ ಹೀಗೆ ಇದೆ...
'ದೇವಕೀ ಸುತ ಗೋವಿಂದ ವಾಸುದೇವ ಜಗತ್ಪತೇ
ದೇಹಿಮೇ ತನಯಂ ಕೃಷ್ಣತ್ವಾಮಹಂ ಶರಣಾಗತಃ ॥'
ಸ್ತ್ರೀಯರು ಈ ಮೇಲಿನ ಮಂತ್ರ ಪಠಣ ಮಾಡುವಾಗ ಕೊನೆಯಲ್ಲಿ ಶರಣಾಗತಃ ಎಂದಲ್ಲದೆ ಶರಣಾಗತಾ ಎಂದು ಹೇಳಬೇಕು.
ಸಂತಾನ ತಡವಾಗಲು ಇನ್ನೊಂದು ಕಾರಣ ಲಗ್ನ ಅಥವಾ ಚಂದ್ರನಿಂದ ಪಂಚಮದಲ್ಲಿ ಶನಿ ಇದ್ದರೆ ಅಥವಾ ಪಂಚಮಾಧಿಪತಿ ಶನಿ ಆಗಿರುವುದು. ಇವರು ನಿತ್ಯ ಶ್ರೀದತ್ತಾತ್ರೇಯ ವಜ್ರಕವಚ ಸ್ತೋತ್ರ ಸಹಿತವಾಗಿ ಶನೈಶ್ಚರ ಅಷ್ಟೋತ್ತರ ಪಠಿಸುವುದರಿಂದ ಮಾಗೂ ಶನೈಶ್ಚರ ವ್ರತವನ್ನು ಶನಿ ಶಾಂತಿ ಹವನವನ್ನು ಮಾಡಿಸುವುದರಿಂದ ಶೀಘ್ರ ಸಂತಾನ ಆಗುವ ಸಾಧ್ಯತೆಗಳು ಇರುತ್ತದೆ.
ಸರ್ಪದೋಷ
ಸಂತಾನ ಪ್ರತಿ ಬಂಧಕ ದೋಷ ಎಂದರೆ ಸರ್ಪದೋಷ. 'ಸರ್ಪ ಶಾಪಾತ್ ಕುಲಕ್ಷಯಃ' ಎಂಬ ವಾಕ್ಯದಂತೆ ನಾಗ ದೇವತಾ ಶಾಪದಿಂದಾಗಿ ಸಂತಾನ ಆಗದೇ ಕುಲ ನಾಶವಾಗುವ ಸಾಧ್ಯತೆಗಳಿರುತ್ತವೆ. ಗಂಡು ಅಥವಾ ಹೆಣ್ಣಿನ ಜಾತಕದಲ್ಲಿ ಕುಟುಂಬ ಸ್ಥಾನದಲ್ಲಿ ಅಥವಾ ಪಂಚಮದಲ್ಲಿ ರಾಹುಸ್ಥಿತನಾಗಿದ್ದರೆ ಅಥವಾ ಬಲವಾದ ಕಾಳಸರ್ಪ ದೋಷವಿದ್ದರೆ ಸಂತಾನದಲ್ಲಿ ತೊಂದರೆಗಳು ಸಾಮಾನ್ಯ. ಇದಕ್ಕೆ ಪರಿಹಾರವೆಂದರೆ ಸಾಮೂಹಿಕವಾಗಿ ಅಲ್ಲದೇ ಪ್ರತ್ಯೇಕವಾಗಿ ಸರ್ಪಶಾಂತಿ ಹವನ, ಆಶ್ಲೇಷಾಬಲಿ ಪೂಜಾ, ಕಾಳಸರ್ಪ ದೋಷ ಪರಿಹಾರ ಶಾಂತಿ ಹವನ ಇತ್ಯಾದಿಗಳು. ಆರ್ಥಿಕ ತೊಂದರೆ ಇದ್ದಲ್ಲಿ ಮನೆ ಬಳಿಯಿರುವ ನಾಗರ ವಿಗ್ರಹಗಳಿಗೆ ಹಾಲಿನಲ್ಲಿ ಅಭಿಷೇಕ ಮಾಡಿ ಪೂಜಿಸುವುದು.
ಪ್ರೇತಬಾಧೆ
ಯಾರೂ ಗಮನಿಸದಂಥ ಬಹಳ ಮುಖ್ಯವಾದ ಸಂತಾನ ಪ್ರತಿಬಂಧಕ ದೋಷ ಇನ್ನೊಂದು ಎಂದರೆ ಪ್ರೇತ ಬಾಧೆ. ದಂಪತಿಯ ಕುಟುಂಬದಲ್ಲಿ ಹಿರಿಯರಾಗಲೀ ಅಥವಾ ಕಿರಿಯರಾಗಲೀ ಅಪಮೃತ್ಯುವಿಗೆ ಈಡಾಗಿದ್ದ ಪಕ್ಷದಲ್ಲಿ, ಅಂದರೆ ಅಸ್ವಾಭಾವಿಕವಾಗಿ ಮೃತರಾಗಿದ್ದಲ್ಲಿ ಉದಾಹರಣೆಗೆ ಅಪಘಾತ, ಬೆಂಕಿ ಅನಾಹುತ, ನೀರಿನಲ್ಲಿ ಮುಳುಗಿ ಹೀಗೆ ನಾನಾ ವಿಧಗಳು.
ಮೃತರ ಆತ್ಮಶಾಂತಿ, ಮೋಕ್ಷ ಸಿಗದೇ ದಂಪತಿಗೆ ಪ್ರೇತಬಾಧೆ ಉಂಟಾಗುತ್ತದೆ. ಇದರಿಂದಾಗಿ ಸ್ತ್ರೀ ಗರ್ಭ ಧರಿಸಿದರೂ ಗರ್ಭಪಾತವಾಗಿ ಸಂತಾನಹೀನತೆ ಉಂಟಾಗುತ್ತದೆ. ಇದಕ್ಕೆ ಪರಿಹಾರವೆಂದರೆ, ಪ್ರಸಿದ್ಧ ಕ್ಷೇತ್ರಗಳಾದ ಗೋಕರ್ಣ ಅಥವಾ ಶ್ರೀರಂಗಪಟ್ಟಣದಲ್ಲಿ ಪ್ರೇತೋದ್ಧಾರ ಮೋಕ್ಷ ನಾರಾಯಣ ಬಲಿ ಮಾಡಿಸುವುದು. ಆದರೆ ಈ ಪ್ರಕ್ರಿಯೆಗೆ ಬಹಳ ಕಟ್ಟುಪಾಡುಗಳನ್ನು ಅನುಸರಿಸಬೇಕಾಗುತ್ತದೆ.
ಹೀಗೆ ಸಂತಾನ ಹೀನತೆಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬಹಳ ಕಾರಣಗಳು ಕಂಡುಬಂದರೂ ಸರಿಯಾದ ಜಾತಕ ಪರಿಶೀಲಿಸದೇ ಸರಿಯಾದ ಪರಿಹಾರ ಮಾಡಿಕೊಳ್ಳದೇ ಹೋದರೆ ಶಾಸ್ತ್ರಕ್ಕೆ ಏನೂ ತೊಂದರೆ ಇಲ್ಲ, ಅದೇನಿದ್ದರೂ ಅನುಭವಿಸಬೇಕಾದ ನಮಗೆ ಮಾತ್ರ. ಮಾಹಿತಿಗಾಗಿ ಮೊ. 9845682380 ಸಂಪರ್ಕಿಸಿ.
- ಪಂಡಿತ್ ವಿಠ್ಠಲ್ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


