ಲಕ್ಷ್ಮೀ ಪ್ರಾಪ್ತಿ ಯಂತ್ರ
ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಯಾರನ್ನು ಕೇಳಿದರೂ 'ವ್ಯಾಪಾರವೇನೋ ಚೆನ್ನಾಗಿ ಆಗುತ್ತದೆ. ಆದರೆ ಬಿಡಿಗಾಸೂ ಕೈಯಲ್ಲಿ ಉಳಿಯುವುದಿಲ್ಲ' ಎಂದು ಒಬ್ಬರೆಂದರೆ, 'ಕಷ್ಟ ಪಟ್ಟು ಬೆಳೆ ಬೆಳೆಯುತ್ತೇವೆ. ಆದರೆ ಮಾರಾಟದ ನಂತರ ಹಾಕಿದ ಹಣಕ್ಕಿಂತ ಖರ್ಚು ಜಾಸ್ತಿಯಾಯಿತು' ಎಂದು ಕೆಲವರು ಹೇಳುತ್ತಾರೆ. ಒಟ್ಟಿನಲ್ಲಿ ಕೆಲವರಿಗೆ ಕೈ ಕೆಸರಾದರೆ ಬಾಯಿ ಮೊಸರು ಎಂಬಂತೆ ಕಷ್ಟಪಟ್ಟರೆ ಫಲ. ಆದರೆ ಕೆಲವರಿಗೆ ದೈವದ ಬಲವಿದ್ದರೂ ದಾರಿದ್ರ್ಯ ತಪ್ಪದು.
ವ್ಯಕ್ತಿ ಯಾರೇ ಆಗಿರಲಿ, ಮಹಾಲಕ್ಷ್ಮೀ ಅವಕೃಪೆಗೆ ಒಳಗಾದರೆ ತೊಂದರೆ ತಪ್ಪಿದ್ದಲ್ಲ. ಈ ಕಲಿಯುಗದಲ್ಲಿ ಭಿಕ್ಷುಕ ಶ್ರೀಮಂತನಾಗುವುದು ಎಷ್ಟು ಸಲೀಸೋ ಹಾಗೆಯೇ ಶ್ರೀಮಂತ ಭಿಕ್ಷುಕನಾಗುವುದಕ್ಕೂ ಕ್ಷಣ ಸಾಕು. ಈ ಎಲ್ಲಾ ತೊಂದರೆಗಳಿಂದ ಬಿಡುಗಡೆಯಾಗಲು ಸುಲಭವಾದ ಮಾರ್ಗವಿದೆ. ಅದಕ್ಕೆ ಮಾರ್ಗವೆಂದರೆ, ಲಕ್ಷ್ಮೀ ಪ್ರಾಪ್ತಿಯಂತ್ರವನ್ನು ಪೂಜಿಸುವುದು. ಯಾವುದೇ ಶುಭ ನಕ್ಷತ್ರ, ಶುಭವಾರ, ಶುಭದಿನದಂದು ಈ ಯಂತ್ರವನ್ನು ಸ್ಥಾಪಿಸಿ, ಬೆಳಗ್ಗೆ ಒಂದು ಹೊಸ ತಟ್ಟೆಯಲ್ಲಿ ಅಕ್ಕಿಯನ್ನು ಹಾಕಿ ಯಂತ್ರವನ್ನು ಗೋಮೂತ್ರದಿಂದ ತೊಳೆದು ಅಭಿಷೇಕ ಮಾಡಿ, ನೈವೇದ್ಯ ಮಾಡಿ ಊದಿನಕಡ್ಡಿ ಹಚ್ಚಿ ಮಂಗಳಾರತಿ ಮಾಡಬೇಕು. ಯಂತ್ರ ಪೂಜೆಯನ್ನು ಮೊದಲು ಮನೆಯ ಗೃಹಿಣಿಯರೇ ಮಾಡಬೇಕು.
ಜಗತ್ತಿಗೆ ತಾಯಿಯಾಗಿರುವ ಈ ಜಗನ್ಮಾತೆ ಎಲ್ಲಾ ಜಾತಿ ಮತಗಳ ಭೇದ ಭಾವಗಳಿಲ್ಲದೆ ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತಾ ಇದ್ದಾಳೆ. ಆದ್ದರಿಂದ ಸಮಸ್ತರೆಲ್ಲರೂ ಈ ತಾಯಿಯ ಕೃಪೆಗೆ ಪಾತ್ರರಾಗಿ ಸುಖದಿಂದ ಬಾಳಲು ಶ್ರೀ ಮಹಾಲಕ್ಷ್ಮೀ ದೇವಿಯ ಪೂಜೆ ಮಾಡಿ ದಾರಿದ್ರ್ಯದಿಂದ ಹೊರಬಂದು ಸುಖ, ಶಾಂತಿ, ನೆಮ್ಮದಿಯಿಂದ ಬಾಳಲು ಒಂದು ಸುಲಭವಾದ ಮಾರ್ಗವಾಗಿದೆ.
- ಶೈಲೇಶ್ ಬಾಣಾವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

