ಭಕ್ತಿ-ಜ್ಯೋತಿಷ್ಯ

ಜೀವಜಾತಕ

Published On :

ಜ್ಯೋತಿಷ್ಯ ರತ್ನ ಮತ್ತು ರಾಶಿ ಶಾಸ್ತ್ರಗಳಲ್ಲಿ ಮಹತ್ತರ ಸ್ಥಾನ ಪಡೆದಿರುವ ಕುಜಗ್ರಹ ಸೌರಮಂಡಲದಲ್ಲಿ ಪೃಥ್ವಿಯ ಜೀವರಾಶಿಯ ಮೇಲೆ ಅಧಿಕ ಪ್ರಭಾವ ಬೀರುವ ಕೆಂಪುವರ್ಣಮಯ ನಾಲ್ಕನೇ ದೊಡ್ಡ ಜೀವಂತ ಗ್ರಹ. ಈ ಗ್ರಹವನ್ನು ಮಂಗಳ ಅಥವಾ ಅಂಗಾರಕನೆಂದು ಪೂಜಿಸುತ್ತಾರೆ.
ಸೂರ್ಯನಿಂದ ಸುಮಾರು 248 ಮತ್ತು ಪೃಥ್ವಿಯಿಂದ 96 ಮಿಲಿಯನ್ ಕಿಲೋಮೀಟರ್‌ಗಳ ದೂರದಲ್ಲಿರುವ ಕುಜಗ್ರಹದ ನಭೋಪ್ರಭಾವ ತಿಳಿಯಲು ಫ್ರೆಂಚ್, ಜರ್ಮನಿ ಮತ್ತು ಲಂಡನ್ನಿನ ಹಲವು ವಿಜ್ಞಾನಿಗಳು ಸಂಶೋಧನೆ ನಡೆಸಿ ಹಲವರ ಜಾತಕಗಳನ್ನು ಪರಾಮರ್ಶಿಸಿದ್ದಾರೆ.
4,000 ವರ್ಷಗಳ ಹಿಂದೆಯೇ ಮೆಸಪೊಟೇಮಿಯನ್ ಜನಾಂಗ ಕುಜ ಗ್ರಹವನ್ನು ಗುರುತಿಸಿದ್ದರು. ನಮ್ಮ ಭಾರತದಲ್ಲಿ ಆಸ್ತಿಕ ಮತ್ತು ನಾಸ್ತಿಕರು ಕುಜನ ಪ್ರಭಾವದ ಬಗ್ಗೆ ನಂಬಿಕೆ ಇಟ್ಟಿದ್ದಾರೆ.
ಗ್ರಹ ಮತ್ತು ಉಪಗ್ರಹಗಳ (ಚಂದಿರಗಳು) ಚಲನ ಸಿದ್ಧಾಂತದಲ್ಲಿ ಸೂರ್ಯನಿಂದ ಎರಕ ಹೊಯ್ಯುವ ನಭೋಪ್ರಭಾವಕ್ಕೂ ಪೃಥ್ವಿಯ ಮೇಲೆ ಜೀವರಾಶಿಗಳ ಭೌತಿಕ ಗುಣಗಳಿಗೂ ಅವಿನಾಭಾಜ್ಯ ಸಂಬಂಧಗಳಿರುವುದು ಸತ್ಯ. ಈ ದಿಸೆಯಲ್ಲಿ ಕುಜ ಗ್ರಹದಿಂದ ಪೃಥ್ವಿಯ ಮೇಲ್ಮೈ ಮೇಲೆ ಎರಕ ಹೊಯ್ಯುವ ನಭೋಪ್ರಭಾವವನ್ನು ಕುಜ ಕಿರಣ ಶಕ್ತಿ ಪ್ರಭಾವ ಮತ್ತು ಕುಜ ಕಿರಣ ವಕ್ರ ಪ್ರಭಾವವೆಂದು ಎರಡು ಭಾಗ ವಿಂಗಡಿಸಲಾಗಿದೆ.

ಕಿರಣ ಶಕ್ತಿ ಪ್ರಭಾವ
ಕುಜ ಕಿರಣ ಶಕ್ತಿ ಪ್ರಭಾವದಿಂದ ಜನಿಸಿದವರು ಶ್ರೇಷ್ಠ ಕ್ರೀಡಾಪಟುಗಳು, ವೀರಮಲ್ಲರು, ರಾಜಕೀಯ ನೇತಾರರು, ಸಮಾಜ ಸುಧಾರಕರು, ಸಾಗರ ಸಂಶೋಧಕರು, ರಾಜ ಮಹಾರಾಜರು, ಯೋಧರು, ಶುದ್ಧ ಸಂಸ್ಕಾರವಂತರು, ಯೋಗಿಗಳು, ವೀರವನಿತೆಯರು, ದೈವಾಂಶ ಸಂಭೂತರು ಜನನವಾಗುತ್ತಾರೆ.
ಇಂಥವರಿಗೆ ದೇಹ ಬೆಳೆದಂತೆಲ್ಲಾ ಅಧಿಕ ಜ್ಞಾಪಕ ಶಕ್ತಿ, ಬುದ್ಧಿಶಕ್ತಿ, ಅಧಿಕ ಸೌಂದರ್ಯ ಮತ್ತು ಸದಾ ಆಕಸ್ಮಿಕ ಅದೃಷ್ಟಗಳು ಲಭ್ಯವಾಗುತ್ತಿರುತ್ತವೆ.
ಕುಜ ಕಿರಣ ಪ್ರಭಾವದ ವಿಶಿಷ್ಟತೆಯನ್ನು ಭೌತಿಕ ಛಾಯಾ ರೂಪದ ಸಿದ್ಧಾಂತದಿಂದ ಪರಾಮರ್ಶಿಸಿದಾಗ ಕುಜ ಕಿರಣಯೋಗದಲ್ಲಿ ಪ್ರತಿಷ್ಠಾಪಿಸಿದ ಯಾವುದೇಶಿಲಾದೇವರಿಗೆ ಅಷ್ಟಾಂಗವಾಸ್ತು ಶಕ್ತಿ ಪ್ರಾಪ್ತವಾಗಿ ದಿವ್ಯ ಶಕ್ತಿ ಪಡೆಯುವುದರಲ್ಲಿ ಸಂಶಯವೇ ಇಲ್ಲ.

ಕಿರಣ ಶಕ್ತಿ ವಕ್ರ ಪ್ರಭಾವ
ಸೌರ ಮಂಡಲದಲ್ಲಿಯೇ ದೊಡ್ಡದಾದ 16 ಚಂದಿರಗಳನ್ನು ಹೊಂದಿರುವ ಗುರು ಮತ್ತು 18 ಚಂದಿರಗಳನ್ನು ಹೊಂದಿರುವ ಶನಿಗ್ರಹಗಳ ಚಲನ ಸಿದ್ಧಾಂತದಲ್ಲಿ ಸೂರ್ಯನಿಂದ ಎರಕ ಹೊಯ್ಯುವ ನಭೋ ಪ್ರಭಾವ ವಕ್ರಗೊಂಡು ಕುಜ ಗ್ರಹದ ಮುಖಾಂತರ ಪೃಥ್ವಿಯನ್ನು ಸೇರಿದಾಗ ಅನಿಷ್ಟಗಳು  ತುಂಬಿರುತ್ತವೆ.
ಇಂತಹ ವಕ್ರ ಪ್ರಭಾವವದಲ್ಲಿ ಜನಿಸಿದ ಹೆಣ್ಣಿನಲ್ಲಿ ಗಂಡಿನ ಗುಣಗಳು, ಗಂಡಿನಲ್ಲಿ ಹೆಣ್ಣಿನ ಗುಣಗಳು ಮತ್ತು ಹಲವರಲ್ಲಿ ಪ್ರಾಣಿಗಳ ಶಕ್ತಿ ಇರುತ್ತದೆ. ಇಂತಹ ಕಾಲಮಾನದಲ್ಲಿ ಜನಿಸಿದವರಲ್ಲಿ ಕುಜ ದೋಷ ಇದ್ದು, ಕಂಕಣ ಭಾಗ್ಯ ಮತ್ತು ಸಂತಾನ ಯೋಗದಲ್ಲಿ ವಿಳಂಬ, ಶತಮೊಂಡ, ಅಹಂಭಾವ, ಲೋಕಸಂಚಾರ, ಸಿಡುಕುತನ, ಜ್ಞಾಪಕಶಕ್ತಿ ದುರ್ಬಲ, ಎಷ್ಟೇ ಐಶ್ವರ್ಯ ಇದ್ದರೂ ಮಾನಸಿಕ ಸುಖ ಇರುವುದಿಲ್ಲ.

ನವೋರಿಯನ್ ಕೊಲಾಪ್ಸ್
ಕುಜನಿಂದ ಎರಕ ಹೊಯ್ಯುವ 'ನವೋರಿಯನ್‌' ಎಂಬ ಕೆಂಪು ಭೌತಿಕ ಛಾಯಾ ರೂಪ ಮಾನವ ಅದೃಷ್ಟ ಮತ್ತು ದೆಸೆಗಳನ್ನು 56 ವರ್ಷಗಳ ಕಾಲ ಉತ್ತುಂಗಕ್ಕೆ ಏರಿಸುತ್ತದೆ. (6111161111). ಕಾಲಗಣನಾಚಕ್ರದಲ್ಲಿ ಛಾಯಾರೂಪದ ಅನಿಷ್ಟಗಳು (ಒಮೆನ್ಸ್) ದಾರುಣ ದುರಂತಕ್ಕೆ ಎಡೆಮಾಡುತ್ತದೆ.
ಈ ಪರಿವಿಧಿಗೆ 'ನವೋರಿಯನ್ ಕೊಲಾಪ್ಸ್‌' ಎಂದು ಕರೆಯುತ್ತಾರೆ. ಇಂಥ ಪರಿವಿಧಿಯು ನಭೋಮಂಡಲದಲ್ಲಿರುವ ಜಂಟಿ ನಕ್ಷತ್ರಗಳ ನಭೋ ಪ್ರಭಾವದಿಂದ ಸಂಭವಿಸುತ್ತದೆ. ನಭೋ ಮಂಡಲದಲ್ಲಿ ಸೂರ್ಯನಿಗಿಂತ 1000 ಪಟು ಪ್ರಭಾವಳಿ ಉಳ್ಳ ನೋವಾ ಮತ್ತು ನೋವಾಗಿಂತಲೂ 1000 ಪಟ್ಟು ಪ್ರಭಾವಳಿ ಉಳ್ಳ ಸೂಪರ್ ನೋವಾ ಜಂಟಿ ನಕ್ಷತ್ರಗಳು ಇವೆ.
ಆದರೆ ಇವುಗಳ ಪ್ರಭಾವಳಿ ಕೇವಲ ಹಲವು ಸೆಕೆಂಡುಗಳು ಮಾತ್ರ ನಂತರ ನಿಷ್ಕ್ರಿಯಗೊಳ್ಳುತ್ತವೆ. ಇಂತಹ ಜೋಡಿ ನಕ್ಷತ್ರಗಳ ನಭೋ ಪ್ರಭಾವಳಿ ಕುಜ ಗ್ರಹದ ಮೇಲೆ ಹಾದು ಪೃಥ್ವಿಯ ಮೇಲೆ ಬಿದ್ದಾಗ, ಅಂಥ ಸಮಯದಲ್ಲಿ ಜನಿಸಿದ ಮಕ್ಕಳಿಗೆ ದುರಂತ ಎದುರಾಗುತ್ತದೆ. ಮಾಹಿತಿಗೆ ಮೊ. 9945605618 ಸಂಪರ್ಕಿಸಿ.

- ವಿ. ನಾರಾಯಣ ಶೆಟ್ಟಿ ಪದ್ಮಸಾಲಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.