ಮಣ್ಣಿನ ಗಣಪಗೆ ಜೈ

ಜೇಡಿ ಮಣ್ಣಿನಿಂದ ಗಣಪತಿಯನ್ನು ಮಾಡಿದರೆ, ಮಣ್ಣಿನಲ್ಲಿರುವ ಪೃಥ್ವಿ ಹಾಗೂ ಆಕಾಶ ತತ್ತ್ವದಿಂದ ದೇವತಾ ಶಕ್ತಿಯನ್ನು ಆಕರ್ಷಿಸುವುದರೊಂದಿಗೆ ಆ ತತ್ತ್ವ ದೀರ್ಘವಾಗಿಯೂ ಇರುತ್ತದೆ.
ಇದರಿಂದಾಗಿ ಪ್ರಕೃತಿಗೆ ಯಾವುದೇ ಹಾನಿಯಾಗದು. ನೀರಿನಲ್ಲಿ ವಿಸರ್ಜನೆ ಮಾಡಿದಾಗ ನೀರಿನೊಂದಿಗೆ ಬೆರೆತು ಹೋಗುತ್ತದೆ. ಆದರೆ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಮಾಡಿದ ವಿಗ್ರಹಕ್ಕೆ ದೇವತೆಯ ತತ್ತ್ವವನ್ನು (ಕಾಸ್ಮಿಕ್ ಎನರ್ಜಿ) ಆಕರ್ಷಿಸುವ ಕ್ಷಮತೆ ಇರುವುದಿಲ್ಲ. ಅದಕ್ಕಾಗಿಯೇ ಗಣಪತಿಯನ್ನು ಶಾಸ್ತ್ರೋಕ್ತವಾಗಿಯೇ ತಯಾರಿಸಿ ಪೂಜಿಸಬೇಕು.
ಇತ್ತೀಚೆಗೆ ಇಕೋಫ್ರೆಂಡ್ಲಿ ಅಂದರೆ ಪರಿಸರಕ್ಕೆ ಅನುಕೂಲಕರವಾದ ಗಣಪತಿ ಮೂರ್ತಿ ತಯಾರಿಸಲಾಗುತ್ತಿದೆ. ಇವುಗಳಲ್ಲಿ ಕೆಲವು ವಿಗ್ರಹಗಳನ್ನು ಕಾಗದದಿಂದಲೂ ತಯಾರಿಸಲಾಗುತ್ತದೆ. ಆದರೆ ಕಾಗದ ನೀರಿನಲ್ಲಿರುವ ಪ್ರಾಣವಾಯುವನ್ನು ಶೋಷಿಸಿಕೊಳ್ಳುತ್ತದೆ ಮತ್ತು ಅದರಿಂದ ಜೀವ ಸೃಷ್ಟಿಗೆ ಹಾನಿಕಾರಕವಾದ ಮೀಥೇನ್ ವಾಯುವಿನ ನಿರ್ಮಿತಿಯಾಗುತ್ತದೆ. ಆದರೆ ನಮ್ಮ ಧರ್ಮಶಾಸ್ತ್ರ ನಿಸರ್ಗದ ರಕ್ಷಣೆಯೊಂದಿಗೆ ಮಾನವನ ಸರ್ವಾಂಗೀಣ ಉನ್ನತಿಯ ವಿಚಾರವನ್ನೂ ಮಾಡುವುದಿಂದ ನಾವೂ ಆ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


