ಗಣಪತಿ ನಿನ್ನ ಸ್ತುತಿ...

ಗಣಪತಿಯನ್ನು ವಿಶ್ವದಾದ್ಯಂತ ಆರಾಧಿಸುತ್ತಾರೆ. ಇದರಿಂದ ಗಣಪತಿ ವಿಶ್ವವ್ಯಾಪಿ ಪ್ರಸಿದ್ಧಿ ಪಡೆದಿದ್ದು, ಇಂಥ ಜಾನಪದ, ವೈದಿಕ, ಐತಿಹಾಸಿಕ ಹಿನ್ನೆಲೆ ಬೇರೆ ದೇವರಿಗೆ ಇಲ್ಲ.
ಗಣಪತಿ ವಿಗ್ರಹ ಹಲವು ವಿನ್ಯಾಸದಲ್ಲಿರುತ್ತದೆ. ಹಿಂದೂಗಳಲ್ಲಿ ಎಲ್ಲಾ ಜಾತಿಯವರು ವೈವಿಧ್ಯತೆಯಲ್ಲಿ ಗಣಪತಿಯನ್ನು ಪೂಜಿಸುವುದರಿಂದ ಅಧ್ಯಾತ್ಮ ಪ್ರಪಂಚದಲ್ಲಿ ಬಹಳ ಎತ್ತರಕ್ಕೇರಿ ಪ್ರಥಮ ಪೂಜೆಯನ್ನು ಪಡೆಯುತ್ತಿದ್ದಾನೆ ಈ ಗಣಪ.
ವಿವಿಧ ವೃತ್ತಿಗೆ ಸಂಬಂಧವನ್ನು ಕಲ್ಪಿಸಿ ಗಣಪತಿಯನ್ನು ಆರಾಧಿಸಿವುದೂ ರೂಢಿಯಲ್ಲಿದೆ. ಗಣಪತಿಗೂ, ಕೃಷಿಗೂ ಸಂಬಂಧ ಕಲ್ಪಿಸಲಾಯಿತು. ಹಿಂದಿನ ಕಾಲದಲ್ಲಿ ಬೇಟೆಯಾಡುವವರೂ ಗಣೇಶನನ್ನು ಆರಾಧಿಸುತ್ತಿದ್ದರು.
ಪುರಾತನ ಕಾಲದಿಂದ ವಿದ್ವಾಂಸರು, ಋಷಿಗಳಿಂದ, ವೇದದಿಂದ ವಿವಿಧ ಮಂತ್ರವನ್ನು ಹೇಳಿ ಆರಾಧಿಸುವ ಕ್ರಮವನ್ನು ಚಾಲ್ತಿಗೆ ತಂದರು.
ಗಣಪತಿ ಎಲ್ಲರ ದೇವರಾಗಿ ಎಲ್ಲರ ಮನೆಯ ಪೂಜೆಯನ್ನು ಸ್ವೀಕರಿಸಿ ಮೊದಲ ಪೂಜೆ ತನ್ನದಾಗಿಸಿಕೊಂಡಿದ್ದಾನೆ. ಗಣೇಶನ ಕಥೆ ಭಕ್ತಿ, ಶಕ್ತಿ. ವಿದ್ವಾಂಸರು, ಚಿಂತಕರು ವಿಘ್ನ ವಿನಾಶಕನ ಬಗ್ಗೆ ತಿಳಿಯಲು ಪ್ರಯತ್ನಿಸುತ್ತಾ ಇದ್ದಾರೆ. ಯಾವುದೇ ಕೆಲಸವಾದರೂ ವಿನಾಯಕನನ್ನು ಮನದಲ್ಲಿ ನೆನೆದು ಹೋಗುವ ರೂಢಿ ಮಾತ್ರ ಎಲ್ಲರಲ್ಲೂ ಇದೆ. ವೇದ ಕಾಲದಲ್ಲಿ ಗಣಪತಿ ಪೂಜೆ ಇತ್ತು ಎನ್ನುವುದಕ್ಕೆ ಯಾವುದೇ ಆಧಾರ ಸಿಕ್ಕಿಲ್ಲ ಎಂಬುದು ಕೆಲವು ವಿದ್ವಾಂಸರ ಅಭಿಪ್ರಾಯ.
ಪೂರ್ವದ ಆದಮ ಸಂಸ್ಕೃತಿಯ ಜನರಲ್ಲಿ ಗಣಪತಿಯನ್ನು ಪೂಜಿಸುವ ಕ್ರಮ ಇತ್ತು. ವೈದಿಕರು ಆದಮ ಸಂಸ್ಕೃತಿ ಉಪಾಸನಾ ವಿಧಾನವನ್ನು ಕೇಳಿ ಗಣಪತಿಯನ್ನು ವಿವಿಧ ದೇವತೆಗಳ ಸಾಲಿಗೆ ನಿಲ್ಲಿಸಿ ಆರಾಧನೆ ಮಾಡಿಕೊಂಡು ಬಂದರು.
ಬಾಲಗಂಗಾಧರ ತಿಲಕರು ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಜನರ ಸಂಘಟನೆಗೆ ಸಾರ್ವಜನಿಕ ಗಣೇಶೋತ್ಸವ ಆಚರಿಸಿದರು. ಇದರಿಂದ ಎಲ್ಲ ಊರುಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಬಂತು. ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳಲ್ಲಿ, ಮನೆ, ಊರು, ಕೇರಿ, ದೇವಸ್ಥಾನಗಳಲ್ಲಿ ವೈವಿಧ್ಯಮಯ ಗಣೇಶೋತ್ಸವ ಆಚರಿಸಲಾಗುತ್ತದೆ.
ಗಣೇಶನ ಅನುಗ್ರಹ ಪಡೆಯುವುದಕ್ಕೆ, ಉತ್ಸವಗಳಲ್ಲಿ ಭಿನ್ನಾಭಿಪ್ರಾಯ ಬರದಂತೆ ನೋಡಿಕೊಳ್ಳಬೇಕು. ಜನರ ನಂಬಿಕೆಗೆ ಕುಂದು ಬರುವಂಥ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು.
- ಹರಿಶ್ಚಂದ್ರ ಪಿ. ಸಾಲಿಯಾನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


