ಭಕ್ತಿ-ಜ್ಯೋತಿಷ್ಯ

ತಮವೆಲ್ಲ ಮರೆಯಾಗಲಿ

Published On :

ಆಶ್ವೀಜ ಮಾಸದ ಕೃಷ್ಣಪಕ್ಷ ತ್ರಯೋದಶಿಯಿಂದ ಕಾರ್ತೀಕ ಮಾಸದ ಶುಕ್ಲಪಕ್ಷ ಬಿದಿಗೆವರೆಗಿನ ದಿನಗಳು ವೈದಿಕ ಕ್ಯಾಲೆಂಡರ್‌ನಲ್ಲಿ ಅತ್ಯಂತ ಶಕ್ತಿಶಾಲಿ ದಿನಗಳು. ಈ ದಿನಗಳಲ್ಲಿ ಬಹಳಷ್ಟು ನಕ್ಷತ್ರಗಳ ಶಕ್ತಿಯ ಹರಿವು ೂಮಿಯತ್ತ. ಅದರಲ್ಲೂ ನಿರ್ದಿಷ್ಟವಾಗಿ ದೀಪಾವಳಿ ಹಿಂದಿನ ದಿನ ಅಮಾವಾಸ್ಯೆಯಂದು ಈ ಎಲ್ಲ ಶಕ್ತಿಗಳು ದೇವರ ರೂಪದಲ್ಲಿ, ವಿಶೇಷತಃ ಮಾಹಾಲಕ್ಷ್ಮೀ ರೂಪದಲ್ಲಿ ತಮ್ಮ ಅಸ್ತಿತ್ವವನ್ನು ಸಾರುತ್ತವೆ.

ಸೃಷ್ಟಿಯಲ್ಲಿ ಶಕ್ತಿ ಅನೇಕ ರೂಪದಲ್ಲಿದೆ. ದೇವ, ದೇವತೆಗಳೂ ಆ ಶಕ್ತಿಸ್ವರೂಪಗಳೇ. ಅವು ಇರುವುದು ನಮಗೆ ಮಾರ್ಗದರ್ಶನ ಮಾಡಲೇ ಹೊರತು ಬೇರಾವ ಉದ್ದೇಶದಿಂದಲೂ ಅಲ್ಲ. ಮಹಾಲಕ್ಷ್ಮೀಯನ್ನು ಮಾಯೆ ಎಂದೂ ಹೇಳಲಾಗುತ್ತದೆ. ಆಕೆ ಭೌತಿಕ ಮತ್ತು ಆಧ್ಯಾತ್ಮಿಕ ಸಂಪತ್ತಿನ ಅಧಿದೇವತೆ. ದೀಪಾವಳಿ ಎಂದರೆ ಕತ್ತಲಿನಿಂದ ಬೆಳಕಿನೆಡೆಗೆ ನಮಗೆ ದಾರಿ ತೋರಿಸುವ ಹಬ್ಬ. ದೀಪಾವಳಿಯ ಹಿಂದಿನ ದಿನ ಲಕ್ಷ್ಮೀಪೂಜೆ ಮಾಡುವುದರ ಹಿಂದಿನ ಉದ್ದೇಶವೂ ಇದೇ. ಬೆಳಕು ಎಂದರೆ ಮನೆಯ ಸ್ವಿಚ್ ಅದುಮಿದರೆ ಬರುವ ವಿದ್ಯುತ್ ಬೆಳಕಲ್ಲ, ನಮ್ಮ 'ಒಳಗಿನ ಬೆಳಕು'. ಅಂದರೆ ಲಕ್ಷ್ಮೀ ಪೂಜೆ ಮಾಡಿ, 'ನನಗೆ ಭಾರಿ ಸಂಪತ್ತು ಕೊಡು' ಎಂದಷ್ಟೇ ಕೇಳಿಕೊಳ್ಳುವುದಲ್ಲ. 'ನನಗೆ ಸಂಪತ್ತನ್ನೂ ಕೊಡು, ಜತೆಗೆ ನಶ್ವರವಾದ ಈ ಭೌತಿಕ ಪ್ರಪಂಚದ ಮೋಹದಿಂದ ಕಳಚಿಕೊಳ್ಳುವ ದಾರಿಯನ್ನೂ ತೋರಿಸು' ಎಂದು ಕೇಳಿಕೊಳ್ಳಬೇಕು. ಅಂದರೆ ಭೌತಿಕ ಜಗತ್ತಿನಲ್ಲಿ ಇದ್ದುಕೊಂಡೇ, ಅದರ ಮಾಯೆಗೆ ಸಿಲುಕದೆ ಬದುಕನ್ನು ರೂಪಿಸಿಕೊಳ್ಳುವುದು; ಆ ಮೂಲಕ ನಮ್ಮ ಜನ್ಮವನ್ನು ಸಾರ್ಥ್ಯಕಪಡಿಸಿಕೊಳ್ಳುವುದು ಇದರ ಹಿಂದಿನ ಉದ್ದೇಶ.

ನಾಣ್ಯಕ್ಕೆ ಎರಡು ಮುಖಗಳಿರುವಂತೆ ಸೃಷ್ಟಿಯಲ್ಲೂ ಒಳ್ಳೆಯದು, ಕೆಟ್ಟದ್ದು ಇದ್ದೇ ಇರುತ್ತವೆ. ದೀಪಾವಳಿ ಹಿಂದಿನ ಅಮಾವಾಸ್ಯೆ ವರ್ಷದ ಅತ್ಯಂತ ಸುದೀರ್ಘ ರಾತ್ರಿ ಕೂಡ. ಅದು ನಮ್ಮಲ್ಲಿನ ದುಷ್ಟಶಕ್ತಿಗಳನ್ನು ಹೊರಗಟ್ಟುವ ಶಕ್ತಿಶಾಲಿ ರಾತ್ರಿಯೂ ಹೌದು. ಅಂದು ಸನಾತನ ಕ್ರಿಯೆ ಮೂಲಕ ನಿಮ್ಮ ಗುರುವನ್ನು ಸಂಧಿಸಿ ನಿಮ್ಮೆಲ್ಲ 'ಕಪ್ಪು ಛಾಯೆ'ಯಿಂದ ಪಾರಾಗಬಹುದು. ದೀಪಾವಳಿ ಎಲ್ಲರಿಗೂ ಒಳ್ಳೆಯದು ಮಾಡಲಿ.

- ಯೋಗಿ ಅಶ್ವಿನಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.