ಹೋರೆ ಹೋರೆ
ದಿನದ 24 ಗಂಟೆಗಳನ್ನು 9 ಗ್ರಹಗಳು ಪ್ರತಿನಿಧಿಸುತ್ತವೆ. ಪ್ರತಿಯೊಂದು ಗಂಟೆಗೂ ಒಂದೊಂದು ಗ್ರಹದ ಆಧಿಪತ್ಯ ಇರುವುದು. ಈ ಗಂಟೆಗಳನ್ನು ಆಧರಿಸಿದ ಶಾಸ್ತ್ರವೇ ....

ದಿನದ 24 ಗಂಟೆಗಳನ್ನು 9 ಗ್ರಹಗಳು ಪ್ರತಿನಿಧಿಸುತ್ತವೆ. ಪ್ರತಿಯೊಂದು ಗಂಟೆಗೂ ಒಂದೊಂದು ಗ್ರಹದ ಆಧಿಪತ್ಯ ಇರುವುದು. ಈ ಗಂಟೆಗಳನ್ನು ಆಧರಿಸಿದ ಶಾಸ್ತ್ರವೇ ಗ್ರಹಕುಂಡಲಿ ಅಥವಾ ಹಾರೋಸ್ಕೋಪ್ (HOROSCOPE).
ಈ ಗಂಟೆಗಳನ್ನು ಅಥವಾ ಹೋರೆಗಳನ್ನು ಗುರುತಿಸಲು 'ಅರ್ಕಶುಕ್ರೋ ಬುಧಶ್ಚಂದ್ರಃ ಮಂದ ಜೀವ ಧರಾಸುತಃ' ಎಂಬ ಶ್ಲೋಕವಿದೆ. ಅರ್ಕ-ರವಿ, ಮಂದ-ಶನಿ. ಜೀವ-ಗುರು ಧರಾಸುತಾ-ಮಂಗಳ ಎಂದರ್ಥ. ತಿದ್ದುಪಡಿ ಮಾಡಿದ ನಂತರ ಶ್ಲೋಕವನ್ನು ಈ ರೀತಿ ಸ್ಮರಿಸಬಹುದು. 'ರವಿ ಶುಕ್ರ ಬುಧ ಚಂದ್ರ ಶನಿ ಗುರು ಮಂಗಳ' ಎಂದು.
ಯಾವುದೇ ವಾರದ ಮೊದಲನೇ ಹೋರೆಗೆ ಆ ವಾರದ ಅಧಿಪತಿ ಆಗುವನು. ಉದಾ: ರವಿವಾರದ ದಿನ ಸೂರ್ಯ ಉದಯದ ನಂತರ ಮೊದಲನೇ ಗಂಟೆಗೆ ರವಿ ಅಧಿಕಾರ ಆಗುವನು. ಸೂರ್ಯ ಉದಯ ಬೆಳಗ್ಗೆ 6 ಎಂದು ಭಾವಿಸಿದರೆ 6ರಿಂದ 7 ರವರೆಗೆ ರವಿ ಹೋರೆ ಆಗುವುದು. ರವಿವಾರದಿಂದ ಲೆಕ್ಕ ಹಾಕಿ 6ನೇ ದಿನದ ಅಧಿಪತಿಯೇ 2ನೇ ಹೋರೆ ಆಗುವುದು. ಅದೇ ಶುಕ್ರಹೋರೆ ಎಂದಾಯಿತು. ಇದೇ ರೀತಿ ಮುಂದುವರಿಯುತ್ತದೆ.
ಹೋರೆಗಳನ್ನು ಯಾವಾಗಲೂ ಪ್ರಯಾಣ ಕಾಲ ಆರಂಭಕ್ಕೆ ಬಳಸುವರು. ಶುಭ ಗ್ರಹಗಳಾದ ಚಂದ್ರ, ಬುಧ, ಗುರು ಮತ್ತು ಶುಕ್ರ ಹೋರೆಗಳು ಉತ್ತಮ ಎಂಬುದು ಹಲವರ ಅಭಿಪ್ರಾಯ. ಆದರೆ, ಎಲ್ಲಾ ಹೋರೆಗಳೂ ಉಪಯೋಗಕ್ಕೆ ಬರುತ್ತವೆ.
ಭಾನುವಾರದ ದಿನ ಮೊದಲನೇ ಹೋರೆ (6-7) ರವಿ ಹೋರೆ. ಈ ದಿನ ನೀವು ಪ್ರತಿಷ್ಠಿತ ಹಾಗೂ ಗೌರವಯುತ ವ್ಯಕ್ತಿಗಳನ್ನು, ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳನ್ನು ಭೇಟಿಯಾಗಬೇಕಾದರೆ ರವಿ ಹೋರೆಯ ಕಾಲವೇ ಸೂಕ್ತ.
ಸೋಮವಾರದ ದಿನ ಮೊದಲನೇ ಹೋರೆ (6-7) ಚಂದ್ರ. ಬಾವಿ ತೋಡಿಸಲು, ಲಘುಪಾನೀಯ ವ್ಯವಹಾರ ಬಗ್ಗೆ ಚಿಂತಿಸಲು, ಹೋಟೆಲು ಉದ್ಯಮ ಬಗ್ಗೆ ಮಾತಾಡಲು ಪ್ರಯಾಣ ಆರಂಭಿಸುವುದಾದರೆ ಈ ಹೋರೆ ಉತ್ತಮ. ಹಾಗೆಯೇ ವಧು ಪರೀಕ್ಷೆಗೆ ಹೊರಡಲು ಈ ಸಮಯ ಹೇಳಿಮಾಡಿಸಿದ್ದು. ಈ ದಿನ ರೋಹಿಣಿ, ಶ್ರವಣ ನಕ್ಷತ್ರಗಳಿದ್ದರೆ ಉತ್ತಮ.
ಮಂಗಳವಾರದ ದಿನ ಮೊದಲನೇ ಹೋರೆಯೇ ಕುಜ (ಮಂಗಳ) ಹೋರೆ ಆಗಿರುತ್ತದೆ. (6-7). ಈ ಹೋರೆ ಉತ್ತಮವಲ್ಲ ಎಂದು ಹಲವರ ಅನಿಸಿಕೆ. ಆದರೆ ಭೂಮಿ ಖರೀದಿ, ನಿವೇಶನ ಖರೀದಿ, ಮಾದಕದ್ರವ್ಯಗಳ ವ್ಯವಹಾರ ಬಗ್ಗೆ ಮಾತಾಡಲು ಈ ಹೋರೆಯಲ್ಲಿ ಪ್ರಯಾಣ ಬೆಳೆಸಿದರೆ ಉತ್ತಮ. ಜಯತಿಥಿಗಳು ಈ ದಿನ ಇದ್ದು, ನಕ್ಷತ್ರಗಳಲ್ಲಿ ಅಶ್ವಿನಿ ಉತ್ತಮವಾಗಿದೆ.
ಬುಧವಾರದ ದಿನ ಮೊದಲನೇ ಹೋರೆ (6-7) ಬುಧ. ಸಾಲದ ಬಗ್ಗೆ ಮಾತಾಡಲು, ಬ್ಯಾಂಕಿನ ಅಧಿಕಾರಿಗಳನ್ನು ಕಾಣಲು, ಉದ್ಯೋಗದ ಬಗ್ಗೆ ಮಾತಾಡಲು, ಹೊಸ ಉದ್ಯೋಗಕ್ಕೆ ಸೇರಲು ಬುಧ ಹೋರೆಯಲ್ಲಿ ಪ್ರಯಾಣಿಸಿದರೆ ಉತ್ತಮ. ಈ ದಿನ ಭದ್ರಕ ತಿಥಿಗಳು, ಅನುರಾಧ ನಕ್ಷತ್ರವಿದ್ದರೆ ಇನ್ನೂ ಒಳ್ಳೆಯದು.
ಗುರುವಾರದ ದಿನ ಮೊದಲನೇ ಹೋರೆ (6-7) ಗುರು. ಯೋಗ, ಧ್ಯಾನದ ಬಗ್ಗೆ ಚರ್ಚಿಸಲು, ಸ್ವಾಮಿಗಳನ್ನು ಕಾಣಲು, ಯಜ್ಞ, ಯೋಗ ಮತ್ತು ಹೋಮಗಳ ಬಗ್ಗೆ ಮಾತಾಡಲು ಈ ಹೋರೆಯಲ್ಲಿ ಪ್ರಯೋಗಿಸಿದರೆ ಉತ್ತಮ. ಈ ದಿನ ಪೂರ್ಣ ತಿಥಿಗಳು. ಪುಷ್ಯ ನಕ್ಷತ್ರ ಇದ್ದರೆ ಒಳ್ಳೆಯದಾಗುವುದು.
ಶುಕ್ರವಾರದ ದಿನ ಮೊದಲನೆ ಹೋರೆ (6-7) ಶುಕ್ರ. ವಧು ಪರೀಕ್ಷೆ, ವಿವಾಹ ಬಗ್ಗೆ ಮಾತಾಡಲು, ನಿಶ್ಚಿತಾರ್ಥ, ತಾಂಬೂಲ ಬದಲಾಯಿಸಲು, ಹೊಸದಾಗಿ ಯಾವ ವ್ಯಾಪಾರ ಆರಂಭಿಸಬೇಕು ಎಂಬ ವಿಷಯ ಚರ್ಚಿಸಲು ಈ ಹೋರೆಯಲ್ಲಿ ಪ್ರಯಾಣಿಸಿದರೆ ಉತ್ತಮ. ಈ ದಿನ ಸ್ವಾತಿ, ರೇವತಿ ನಕ್ಷತ್ರಗಳಿದ್ದರೆ ಉತ್ತಮ.
ಶನಿವಾರದ ದಿನ ಮೊದಲನೇ ಹೋರೆಯೇ ಶನಿ. ವಾಹನ ಖರೀದಿ ಬಗ್ಗೆ ಮಾತಾಡಲು, ಕೃಷಿ ಆರಂಭಿಸಲು, ಕೃಷಿ ಭೂಮಿ ಬಗ್ಗೆ ಕ್ರಯ, ವಿಕ್ರಯ ಮಾತನಾಡಲು ಈ ಹೋರೆಯಲ್ಲಿ ಪ್ರಯಾಣಿಸಬೇಕು. ಈ ದಿನ ರಿಕ್ತ ತಿಥಿಗಳಿದ್ದರೆ ಉತ್ತಮ.
ಯಾವುದೇ ಹೋರೆ ಸಮಯದಲ್ಲಿ ರಾಹುಕಾಲ, ಗುಳಿಕ ಕಾಲ ಇದ್ದರೆ ಆ ಕೆಲಸ ಆಗಲಾರದು ಎಂದು ತಿಳಿಯಬೇಕು. ಮಾಹಿತಿಗಾಗಿ ಮೊ. 9945350586 ಸಂಪರ್ಕಿಸಿ.
- ರತ್ನರಾಜ ಜೈನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


