ಹೊಟ್ಟೆ ಆರೋಗ್ಯ ಕಾಪಾಡಿಕೊಳ್ಳಿ

ವೇದಗಳ ಪ್ರಕಾರ ಉದರ ಎಂದರೆ ಆಹಾರದ ಮೂಲಕ ನಮಗೆ ಪ್ರಾಣವನ್ನು ನೀಡುವ ಅಂಗ. ಅಂತೆಯೇ ವೇದ ಕಾಲದಲ್ಲಿನ ಋಷಿಮುನಿಗಳು ಮೂರು ರೀತಿಯ ಉದರಗಳನ್ನು ಗುರುತಿಸಿದ್ದಾರೆ. ಅವುಗಳೆಂದರೆ ಬಾಯಿ, ದೊಡ್ಡ ಕರುಳು, ಸಣ್ಣ ಕರುಳು. ಈ ಮೂರೂ ಉದರಗಳು ಮಣಿಪೂರಕ ಚಕ್ರದ ನಿಯಂತ್ರಣಕ್ಕೆ ಒಳಪಡುತ್ತವೆ.
ದೇಹದ ಬಹಳಷ್ಟು ತೊಂದರೆಗಳು ಉದರದಿಂದಲೇ ಆರಂಭವಾಗುವುದು. ಮಿತಿಮೀರಿ ತಿನ್ನುವ ಮೂಲಕ ಉದರದ ಮೇಲೆ ಒತ್ತಡ ಹಾಕುವುದು ಮತ್ತು ದೇಹತ್ಯಾಜ್ಯ ಸರಿಯಾಗಿ ವಿಸರ್ಜನೆ ಆಗದೇ ಇದ್ದಾಗ ಸಮಸ್ಯೆಗಳು ಶುರುವಾಗುತ್ತವೆ. ಆಹಾರ ಸೇವಿಸಿದಾಗ ಎರಡು ಚಟುವಟಿಕೆಗಳು ಪ್ರಮುಖವಾಗಿ ನಡೆಯುತ್ತವೆ ಮತ್ತು ಭವಿಷ್ಯದಲ್ಲಿ ಅವೇ ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತವೆ. ಮೊದಲನೆಯದು ಎಂದರೆ ರಾಸಾಯನಿಕಗಳು ಮತ್ತು ಮಸಾಲೆ ಅಧಿಕವಾಗಿರುವ ಪದಾರ್ಥಗಳನ್ನು ಸೇವಿಸುವುದರಿಂದ ಕರುಳಿನ ಗೋಡೆಗಳ ಮೇಲೆ ರಾಸಾಯನಿಕಗಳ ಪದರ ನಿರ್ಮಾಣವಾಗಿರುತ್ತದೆ. ಅದರಿಂದ ಆಹಾರದಲ್ಲಿನ ಪೌಷ್ಟಿಕಾಂಶಗಳನ್ನು ಹೀರಿಕೊಳ್ಳಲು ಕರುಳಿಗೆ ಸಾಧ್ಯವಾಗುವುದಿಲ್ಲ. ಎರಡನೆ ಸಂಗತಿ ಎಂದರೆ, ಜೀರ್ಣಾಂಗದಲ್ಲಿ ಪ್ರಾಣಶಕ್ತಿ ಕೊರತೆಯಿಂದಾಗಿ ಪಚನಕ್ರಿಯೆ ನಿಧಾನವಾಗುತ್ತದೆ. ಇವೆರಡೂ ಸಂಗತಿಗಳಿಂದಾಗಿ ದೇಹದಲ್ಲಿ ಕಲ್ಮಶಗಳ ಸಂಗ್ರಹ ಅತಿಯಾಗಿ, ಅದು ರಕ್ತನಾಳಲ್ಲೂ ಸೇರಿಕೊಳ್ಳುತ್ತದೆ. ಥೈರಾಯ್ಡ್, ಆಸ್ತಮಾದಂಥ ಕಾಯಿಲೆಗಳು ಶುರುವಾಗುವುದೂ ಇಲ್ಲಿಂದಲೇ. ಸನಾತನ ಕ್ರಿಯೆಯಂಥ ಕೆಲವು ತಂತ್ರಗಳ ಮೂಲಕ ಉದರ, ಆ ಮೂಲಕ ಮಣಿಪೂರಕ ಚಕ್ರದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ. ಧ್ಯಾನ ತಂತ್ರಗಳನ್ನು ಗುರುಮುಖೇನ ಕಲಿತುಕೊಂಡು ಪ್ರಯೋಗಿಸಿದರೆ ಚೆನ್ನಾಗಿರುತ್ತದೆ ಎನ್ನುವುದು ನೆನಪಿನಲ್ಲಿರಲಿ.
ಮಣಿಪೂರಕ ಚಕ್ರದ ಶಕ್ತಿ ಅನುಭವ ಪಡೆದುಕೊಳ್ಳುವುದು ಸುಲಭ. ಕಣ್ಣುಗಳನ್ನು ಮುಚ್ಚಿಕೊಂಡು ನೇರವಾಗಿ ಕುಳಿತುಕೊಳ್ಳಿ. ಕೈಗಳು ಸಡಿಲವಾಗಿರಲಿ, ಆರಾಮ ಸ್ಥಿತಿಯಲ್ಲಿರಲಿ. ಈಗ ಎರಡೂ ಹಸ್ತಗಳನ್ನು ಪರಸ್ಪರ ಸೇರಿಸಿಕೊಂಡು ಹೊಕ್ಕಳ ಬಳಿ ಇಟ್ಟುಕೊಳ್ಳಿ. ಕೆಲಕಾಲ ಹಾಗೆಯೇ ಧ್ಯಾನಾವಸ್ಥೆಯಲ್ಲಿರಿ. ಹಸ್ತಗಳ ಕೇಂದ್ರಭಾಗ ಮತ್ತು ಹೊಕ್ಕಳ ಬಳಿ ವಿಶಿಷ್ಟ ಅನುಭವ ಆಗುತ್ತದೆ. ನಿಮ್ಮ ಅನುಭವಗಳನ್ನು ನನಗೂ ಬರೆದು ತಿಳಿಸಿ.
ಬೆಂಗಳೂರಿಗೆ ಗುರೂಜಿ
ಯೋಗಿ ಅಶ್ವಿನಿ ಅವರು ಅಕ್ಟೋಬರ್ ಅಂತ್ಯದಲ್ಲಿ ಬೆಂಗಳೂರಿಗೆ ಆಗಮಿಸುವವರಿದ್ದಾರೆ. ಅವರು ನಡೆಸಿಕೊಡುವ ಆಧ್ಯಾತ್ಮಿಕ ಹೀಲಿಂಗ್ ಮತ್ತು ಸನಾತನ ಕ್ರಿಯೆ ತರಗತಿಗಳಲ್ಲಿ ಭಾಗವಹಿಸಲು ಇಚ್ಛಿಸುವವರು ಸಂಪರ್ಕಿಸಿ: 7406175228/ 9448335830. ಇ-ಮೇಲ್: info@dhyanfoundation.com
- ಯೋಗಿ ಅಶ್ವಿನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


