ವರ್ಣದಲ್ಲಿದೆಯೇ ಮಾಯೆ?
ನಮ್ಮ ಶರೀರದಲ್ಲಿ ಪಂಚಭೂತಗಳು ವಿವಿಧ ಸಂಯೋಜನೆ ಮತ್ತು ಕ್ರಮಗತಿಯಲ್ಲಿ ಇವೆ ಎನ್ನುವುದನ್ನು ಹೊಸತಾಗಿ ಹೇಳಬೇಕಿಲ್ಲ.
ನಮ್ಮ ಶರೀರದಲ್ಲಿ ಪಂಚಭೂತಗಳು ವಿವಿಧ ಸಂಯೋಜನೆ ಮತ್ತು ಕ್ರಮಗತಿಯಲ್ಲಿ ಇವೆ ಎನ್ನುವುದನ್ನು ಹೊಸತಾಗಿ ಹೇಳಬೇಕಿಲ್ಲ. ಅದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ಈ ಪಂಚಭೂತಗಳು ವರ್ಣ ಅಥ ಬಣ್ಣಗಳ ಛಾಯೆಗಳ ನಿಯಂತ್ರಣಕ್ಕೆ ಒಳಪಟ್ಟಿವೆ ಎನ್ನುತ್ತದೆ ಸನಾತನ ಕ್ರಿಯೆ. ಸೃಷ್ಟಿಯಲ್ಲಿನ ಪ್ರತಿಯೊಂದೂ ಒಂದೊಂದು ವರ್ಣ ಹೊಂದಿವೆ. ವರ್ಣ ಇಲ್ಲದಿರುವುದು ಕೂಡ ಒಂದು ಬಣ್ಣವೇ. ಪ್ರತಿ ವರ್ಣವೂ ಅದರದ್ದೇ ಆದ ನಿರ್ದಿಷ್ಟ ತರಂಗಾಂತರಗಳನ್ನು ಹೊಂದಿರುತ್ತದೆ ಮತ್ತು ಆಯಾ ತರಂಗಾಂತರದಲ್ಲಿ ಮಾತ್ರವೇ ಆಯಾ ವರ್ಣ ತನ್ನ ಪ್ರಭಾವ ತೋರುತ್ತದೆ.
ಸಾಮಾನ್ಯವಾಗಿ ವರ್ಣಗಳು ಸಮತೋಲನದಿಂದ ಕೂಡಿರುತ್ತವೆ. ಅಸಮತೋಲನ ಉಂಟಾಯಿತು ಅಂತಾದರೆ ಅದೇ ಅನಾರೋಗ್ಯ. ಅನಾರೋಗ್ಯವನ್ನು ಆಯುರ್ವೇದ ವ್ಯಾಖ್ಯಾನಿಸುವುದೂ ಶರೀರದಲ್ಲಿನ ಅಸಮತೋಲನ ಎಂದೇ. ಈ ಅಸಮತೋಲನವನ್ನು ಹೋಗಲಾಡಿಸಲು ಸನಾತನ ಕ್ರಿಯೆಯು 'ಸೆಲ್ಫ್ ಹೀಲಿಂಗ್' ಅಧ್ಯಾಯದಲ್ಲಿ ಹಲವು ಪರಿಣಾಮಕಾರಿ ತಂತ್ರಗಳ ಕುರಿತು ವಿವರಿಸುತ್ತದೆ. ಉದರದ ಉದಾಹರಣೆ ತೆಗೆದುಕೊಳ್ಳೋಣ. ಉದರದಲ್ಲಿ ಸಮಸ್ಯೆ ಕಂಡುಬಂದಿದೆ ಎಂತಾದರೆ ಅದಕ್ಕೆ ಉದರದಲ್ಲಿನ ಮೂಲಭೂತ ವರ್ಣಗಳಾದ ಹಸಿರು ಮತ್ತು ತಿಳಿ ಕೇಸರಿ ವರ್ಣಗಳಲ್ಲಿನ ಅಸಮತೋಲನ ಕಾರಣ. ಈ ವರ್ಣಗಳ ಛಾಯೆ ಸರಿಯಾದ ಪ್ರಮಾಣದಲ್ಲಿ ಹೊಟ್ಟೆ ಸೇರಿತು ಅಂತಾದರೆ ಸಮಸ್ಯೆ ಮಾಯ.
ವರ್ಣ ವಿಜ್ಞಾನವು ಶಬ್ದ ವಿಜ್ಞಾನದೊಂದಿಗೂ ತಳಕು ಹಾಕಿಕೊಂಡಿದೆ. ಸೃಷ್ಟಿಯ ಶುರುವಿನಲ್ಲಿ ಮೊದಲು ಪ್ರಕಟವಾದದ್ದು ಶಬ್ದ. ಆ ನಂತರ ಅಸಂಖ್ಯಾತ ವರ್ಣಗಳು ಅಸ್ತಿತ್ವ ಪಡೆದವು. ಆದ್ದರಿಂದ ನಿರ್ದಿಷ್ಟ ಮಂತ್ರಗಳ ಪಠಣ ಕೂಡ ವರ್ಣಗಳ ಛಾಯೆಗಳನ್ನು ನಿಯಂತ್ರಿಸಬಲ್ಲದು. ಸನಾತನ ಕ್ರಿಯೆ 'ರಾಮ' ಮಂತ್ರ ಎನ್ನುವ ನಿರ್ದಿಷ್ಟ ಮಂತ್ರವನ್ನು ಹೊಂದಿದೆ. ಗುರು ನಿಮ್ಮ ಎದುರಿನಲ್ಲೇ ಇದ್ದಾರೆ ಎನ್ನುವ ಪ್ರಜ್ಞೆಯಿಂದ ಈ ಮಂತ್ರವನ್ನು ಪಠಿಸಿದರೆ ನೀವು ನಿಮ್ಮಲ್ಲಿನ ವರ್ಣಗಳ ಛಾಯೆಯನ್ನು ನೋಡಬಹುದು, ಶಕ್ತಿಯ ಸ್ವರೂಪವನ್ನು ತಿಳಿಯಬಹುದು.
ಉದರ ಬೇನೆ ವಿಚಾರ. ನಿಮಗೆ ಆರಾಮ ಅನ್ನಿಸುವ ಭಂಗಿಯಲ್ಲಿ ಕುಳಿತುಕೊಳ್ಳಿ. ನಾಭಿಯ ಬಳಿ ಬೆರಳುಗಳು ಬರುವಂತೆ ಎರಡೂ ಕಡೆಯಿಂದ ಹೊಟ್ಟೆಯನ್ನು ಹಿಡಿದುಕೊಳ್ಳಿ. ಕಣ್ಣುಗಳನ್ನು ಮುಚ್ಚಿ. ಗುರು ಎದುರಿಗೇ ಇದ್ದಾರೆ ಎನ್ನುವುದನ್ನು ಕಲ್ಪಿಸಿಕೊಳ್ಳಿ. ನಿಧಾನವಾಗಿ, ಮೃದುವಾದ ಧ್ವನಿಯಲ್ಲಿ 'ರಾಮ' ಮಂತ್ರ ಜಪಿಸಿ. ಕೆಲಹೊತ್ತಿನಲ್ಲಿಯೇ ಶರೀರದಲ್ಲಿ ಹೀಲಿಂಗ್ ಪ್ರಕ್ರಿಯೆ ಶುರುವಾಗುತ್ತದೆ. ನಿಧಾನವಾಗಿ ಉದರ ಬೇನೆ ಕಡಿಮೆಯಾಗುತ್ತದೆ. ಅದೇ ವರ್ಣ ವಿಜ್ಞಾನದ ಮ್ಯಾಜಿಕ್.
- ಯೋಗಿ ಅಶ್ವಿನಿ
ಯೋಗಿ ಅಶ್ವಿನಿ ಅವರು ನಾಳೆಯಿಂದ (ನ.29) ಎರಡು ದಿನ ಬೆಂಗಳೂರಿನಲ್ಲಿಯೇ ಇದ್ದು ಸ್ಪಿರಿಚ್ಯುಯಲ್ ಹೀಲಿಂಗ್ ಮತ್ತು ಸನಾತನ ಕ್ರಿಯೆ ಕಾರ್ಯಾಗಾರ ನಡೆಸಿಕೊಡಲಿದ್ದಾರೆ. ಮಾಹಿತಿಗೆ: 9448335830/ 7406175228. ಮಿಂಚಂಚೆ: info@dhyanfoundation.com.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

