ನಾಗ ನಡೆ
ಹಾವಿನ ನಡೆ ಕೂಡ ಶಕುನಗಳನ್ನು ಹೇಳುತ್ತದೆ ಎನ್ನುವ ನಂಬಿಕೆ ಇದೆ. ನಾಗನ ಯಾವ ಚಲನೆ ಏನನ್ನು ಸೂಚಿಸುತ್ತದೆ?

ಹಾವಿನ ನಡೆ ಕೂಡ ಶಕುನಗಳನ್ನು ಹೇಳುತ್ತದೆ ಎನ್ನುವ ನಂಬಿಕೆ ಇದೆ. ನಾಗನ ಯಾವ ಚಲನೆ ಏನನ್ನು ಸೂಚಿಸುತ್ತದೆ?
ಸಾಮಾನ್ಯವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನಾಗನನ್ನು ಹೆಚ್ಚಿನವರು ಆರಾಧಿಸುತ್ತಾರೆ. ಇಲ್ಲಿ ನಾಗನ ವಿವಿಧ ಕಾರ್ಯಕ್ರಮಗಳನ್ನು ನಡೆಸಿ, ನಾಗನ ಅನುಗ್ರಹ ಪಡೆಯಲು ನೋಡುತ್ತಾರೆ. ನಾಗ ಶಾಪ ಇದ್ದರೆ ಆಶ್ಲೇಷಾ ಬಲಿ ಕೊಟ್ಟರೆ ಪರಿಹಾರವಾಗುತ್ತದೆ ಎಂದು ದೃಢ ನಂಬಿಕೆ ಇರುತ್ತದೆ.
ಸತ್ತ ನಾಗರ ಹಾವುಗಳನ್ನು ಕಂಡರೆ ಅದಕ್ಕೆ ವಿಧಿ ಪ್ರಕಾರ ಸದ್ಗತಿ ಕ್ರಮಗಳನ್ನು ಮಾಡುತ್ತಾರೆ. ನಾಗರಹಾವಿನ ಬಗ್ಗೆ ನಂಬಿಕೆ ಇಟ್ಟುಕೊಂಡವರು ಅದನ್ನು ಕಣ್ಣಾರೆ ಕಂಡ ಶಕುನಗಳಲ್ಲಿ ಕೂಡಾ ನಂಬಿಕೆ ಇಟ್ಟಿದ್ದಾರೆ.
ಪ್ರಯಾಣಕ್ಕೆ ಹೊರಟಾಗ ನಾಗರಹಾವು ಅಡ್ಡಕ್ಕೆ ಚಲಿಸಿ ಹೆಡೆ ತೋರಿಸಿದರೆ ಒಳ್ಳೆಯದು. ಪ್ರಯಾಣ ಹೊರಟಾಗ ಅಡ್ಡ ನಿಲ್ಲುವುದು ಒಳ್ಳೆಯದಲ್ಲ. ಆ ಪ್ರಯಾಣವನ್ನು ಮುಂದುವರಿಸಬಾರದು. ಮುಂದುವರಿಸಿದರೆ ತೊಂದರೆಗಳು ಎದುರಾಗುತ್ತದೆ ಎಂಬುದು ಬಲವದ ನಂಬಿಕೆ.
ಎರಡು ಹಾವುಗಳು ಕಾದಾಟ ಮಾಡುವುದನ್ನು ನೋಡಿದರೆ ಹತ್ತಿರದ ಸಂಬಂಧಿಕರೊಂದಿಗೆ ಜಗಳ ಬರುತ್ತದೆ. ಎರಡು ಹಾವುಗಳು ಜೊತೆಯಾಗಿ ಒಂದು ಕಡೆಗೆ ಚಲಿಸಿದರೆ ಅದನ್ನು ಕಂಡವನಿಗೆ ಹಣಕಾಸಿನ ತೊಂದರೆ ಬರುತ್ತದೆ. ಹೆಣ್ಣು ಗಂಡು ಹಾವು ಸೇರಿರುವುದು ಕಂಡರೆ ಸುಖವಾಗಿರುತ್ತಾರೆ.
ಹಸಿರಾದ ಮರವನ್ನು ಹತ್ತುವುದನ್ನು ನೋಡಿದರೆ ಉನ್ನತ ಸ್ಥಾನಕ್ಕೆ ಹೋಗುತ್ತಾರೆ. ಮರದಿಂದ ಇಳಿಯುವುದನ್ನು ಕಂಡರೆ ಅಧಿಕಾರ ಕಳೆದುಕೊಳ್ಳುತ್ತಾರೆ. ಹಾವು ತನ್ನ ಮನೆಯೊಳಗೆ ಹೋಗುವುದನ್ನು ಕಂಡರೆ ಧನ ಲಾಭವಾಗುತ್ತದೆ. ಬಹಳ ಸಮಯದಿಂದ ಮನೆಯಲ್ಲಿದ್ದ ಹಾವು ಹೊರಟುಹೋಗುವುದನ್ನು ನೋಡಿದರೆ ಧನ ನಷ್ಟ ಎಂಬುದು ಹಿಂದಿನಿಂದಲೂ ನಂಬಿಕೊಂಡು ಬಂದಿರುವ ವಿಚಾರ.
ಪ್ರಯಾಣ ಕಾಲದಲ್ಲಿ ಹೊರಳಾಡುತ್ತಿರುವ ಹಾವನ್ನು ನೋಡಿದರೆ ಕಾರ್ಯ ಸಿದ್ಧಿಯಾಗುತ್ತದೆ. ತನ್ನನ್ನು ನೋಡಿದೊಡನೆ ಹೆಡೆಯನ್ನೆತ್ತಿ ಅಡಗಿಕೊಂಡರೆ ಸಂಪತ್ತು ಹೆಚ್ಚುವುದು. ಕೃಷಿಕನು ಹೊಲದೆಡೆಗೆ ಬರುತ್ತಿರುವಾಗ ಹಾವು ಹೆಡೆಯೆತ್ತಿ ಆಡುತ್ತಿದ್ದರೆ ಅಲ್ಲಿ ಚೆನ್ನಾಗಿ ಮಳೆ ಬರುವುದು. ಹಾವು ಅಲ್ಲಿಂದ ಓಡಿ ಹೋದರೆ ಬೆಳೆ ಕುಂಠಿತವಾಗುತ್ತದೆ.
ಬಿತ್ತನೆಗಾಗಿ ಹೊಲ ಗದ್ದೆಗಳಿಗೆ ಹೋಗುವಾಗ ಅಲ್ಲಿ ಹಾವು ಹೆಡೆಯೆತ್ತಿ ಆಡುತ್ತಿದ್ದರೆ ಬೀಜವು ಒಳ್ಳೆಯದಾಗಿ ಮೊಳಕೆ ಬರುತ್ತದೆ. ಹಾವು ಎಡ ಭಾಗದಲ್ಲಿ ಕೂಗುತ್ತಿದ್ದರೆ ತೊಂದರೆ ಎದುರಾಗುತ್ತದೆ. ಬಲ ಭಾಗದಲ್ಲಿ ಕೂಗಿದರೆ ಒಳ್ಳೆಯದಾಗುತ್ತದೆ. ಹಾವು ಕಪ್ಪೆಯನ್ನು ನುಂಗುವುದನ್ನು ನೋಡಿದರೆ ಭಯ ದೂರವಾಗುತ್ತದೆ. ಗರುಡ ಪಕ್ಷಿ ಹಾವನ್ನು ಎತ್ತಿಕೊಂಡು ಹೋಗುವುದನ್ನು ನೋಡಿದರೆ ಪ್ರಾಣಕ್ಕೆ ಹಾನಿ. ಮುಂಗುಸಿಯೊಂದಿಗೆ ಜಗಳ ಮಾಡುವುದನ್ನು ನೋಡಿದರೆ ಕೆಲಸದಲ್ಲಿ ಜಯವಾಗುತ್ತದೆ.ಟಿ
- ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


