ಹೀಲಿಂಗ್ ಸೊಗಸು
ಸೃಷ್ಟಿ ಅಸ್ತಿತ್ವದಲ್ಲಿರುವುದು ಸಮತೋಲನದ ಕಾರಣದಿಂದ. ಮಾನವ ದೇಹವೂ ಸೃಷ್ಟಿಯ ಪ್ರತಿಬಿಂಬವೇ. ಇದರ ಒಳಗೆ ಅಡಕವಾಗಿರುವ ಅನೇಕ ಶಕ್ತಿ, ಬಲಗಳು ಸಮತೋಲನದಿಂದ ಕೂಡಿದ್ದಾಗ ದೇಹವೂ ಆರೋಗ್ಯದಿಂದ ಇರುತ್ತದೆ. ಅನಾರೋಗ್ಯದಿಂದ ಕೂಡಿದ ಶರೀರ ಎಂದರೆ ಅದರೊಳಗಿನ ಅಸಮತೋಲವೇ ವಿನಾ ಬೇರೇನೂ ಅಲ್ಲ. ಈ ಅಸಮತೋಲನವನ್ನು ಆಧ್ಯಾತ್ಮಿಕ ಹೀಲಿಂಗ್ ಮೂಲಕ ಸರಿಪಡಿಸಲು ಸಾಧ್ಯವಿದೆ. ಆಧುನಿಕ ವೈದ್ಯ ವಿಜ್ಞಾನದಂತೆ ರೋಗ ಹತ್ತಿಕ್ಕುವ ಅಥವಾ ರೋಗಕ್ಕೆ ತುತ್ತಾದ ಕೋಶವನ್ನು ನಾಶಪಡಿಸುವ ಬದಲು ಇದು ರೋಗಕ್ಕೆ ಕಾರಣವಾದ ಸಂಗತಿಯನ್ನೇ ಪರಿವರ್ತಿಸುತ್ತದೆ.
ಅಥರ್ವ ವೇದದಲ್ಲಿ ಋಷಿ ಅಗ್ನಿರಸ ಆಧ್ಮಾತ್ಮಿಕ ಹೀಲಿಂಗ್ ಬಗ್ಗೆ ವಿವರವಾಗಿ ಹೇಳಿದ್ದಾರೆ. 'ಯತು ವಿದ್ಯಾ' ವಿಭಾಗದಲ್ಲಿ ಈ ಕುರಿತು ಉಲ್ಲೇಖವಿದೆ. 'ಯತು' ಎಂದರೆ ತಕ್ಷಣ, ಆಧ್ಮಾತ್ಮಿಕ ಹೀಲಿಂಗ್ ಪ್ರಕ್ರಿಯೆ ನಡೆಯುವುದು ಕ್ಷಣಾರ್ಧದಲ್ಲಿ. ಆಧ್ಮಾತ್ಮಿಕ ಹೀಲಿಂಗ್‌ನಲ್ಲಿ ವರ್ಣಗಳ ಛಾಯೆಯೇ ಮುಖ್ಯಪಾತ್ರ ವಹಿಸುತ್ತದೆ. ಸೃಷ್ಟಿ ಲಕ್ಷಾಂತರ ವರ್ಣಗಳು ಮತ್ತು ವರ್ಣ ಸಂಯೋಜನೆಯನ್ನು ಒಳಗೊಂಡಿದೆ. ಪ್ರತಿಯೊಂದು ವರ್ಣ, ಪ್ರತಿಯೊಂದು ಛಾಯೆಯೂ ಒಂದೊಂದು ನಿರ್ದಿಷ್ಟ ಗುಣ ಹೊಂದಿರುತ್ತದೆ. ಒಂದು ಬಣ್ಣ ಸಂತೋಷವನ್ನು, ಇನ್ನೊಂದು ದುಃಖವನ್ನು, ಮತ್ತೊಂದು ಖಿನ್ನತೆಯನ್ನು, ಮಗದೊಂದು ದುಗುಡವನ್ನು, ಇನ್ನೊಂದು ತೃಪ್ತಿಯನ್ನು... ಹೀಗೆ ಒಂದೊಂದನ್ನು ಪ್ರತಿಬಿಂಬಿಸುತ್ತವೆ ಮತ್ತು ದೇಹದ ಮೇಲೆ ಭಿನ್ನ ಪ್ರಭಾವ ಬೀರುತ್ತಿರುತ್ತವೆ. ಆಧ್ಮಾತ್ಮಿಕ ಹೀಲಿಂಗ್‌ನಲ್ಲಿ ಈ ವರ್ಣಗಳ ಮೂಲಕವೇ ಅಸಮತೋಲನಕ್ಕೆ ಕಾರಣವಾದ ಸಂಗತಿಗಳನ್ನು ಸರಿಪಡಿಸಲಾಗುತ್ತದೆ. ಇದರಿಂದ ಯಾವುದೇ ರೀತಿಯ ಅಪಾಯವಿಲ್ಲ, ತಕ್ಷಣದ ಪರಿಣಾಮ ಸಾಧ್ಯ ಮತ್ತು ಪರಿಹಾರ ಶಾಶ್ವತವಾಗಿರುತ್ತದೆ.
ಒಂದು ಕಿವಿಮಾತು. ಎಲ್ಲರೂ ಹೀಲರ್‌ಗಳಾಗಲು ಸಾಧ್ಯವಿಲ್ಲ. ಅವರು ಗುರುಮುಖೇನ ಬೋಧನೆ ಪಡೆದಿದ್ದು, ತನ್ನ ಸಾಧನೆ ಮೂಲಕ ನಿರ್ದಿಷ್ಟ ಪ್ರಜ್ಞೆಯನ್ನು ಹೊಂದಿರಬೇಕು. ಆತನ ಉದ್ದೇಶ ರೋಗಿಯನ್ನು ಗುಣಪಡಿಸುವುದೇ ಆಗಿದ್ದು, ಅದಕ್ಕಾಗಿ ಪ್ರತಿಫಲಾಪೇಕ್ಷೆ ಇರಬಾರದು. ಪರಿಶುದ್ಧ ಹೃದಯಿಗಳು ಮಾತ್ರ ಹೀಲರ್‌ಗಳಾಗಿ ಯಶಸ್ಸು ಕಾಣಲು ಸಾಧ್ಯ. ಸೂಕ್ತ ಗುರುವಿನ ಮಾರ್ಗದರ್ಶನ ಸಿಕ್ಕರೆ ಯಾರಾದರೂ ಹೀಲರ್‌ಗಳಾಗಬಹುದು.
(ಯೋಗಿ ಅಶ್ವಿನಿ ಅವರು ನವೆಂಬರ್ 29, 30ರಂದು ಬೆಂಗಳೂರಿನಲ್ಲಿ ಇರುತ್ತಾರೆ. ಆಧ್ಮಾತ್ಮಿಕ ಹೀಲಿಂಗ್ ಮತ್ತು ಸನಾತನ ಕ್ರಿಯೆ ಕುರಿತು ಅವರು ತಿಳಿಸಿಕೊಡಲಿದ್ದಾರೆ. ಮಾಹಿತಿಗೆ: 94483 35830/ 74061 75228, info@dhyanfoundation.com)
- ಯೋಗಿ ಅಶ್ವಿನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

