ಭಕ್ತಿ-ಜ್ಯೋತಿಷ್ಯ

ಹಸ್ತ ಫಲ

ಜ್ಯೋತಿಷ್ಯ ಶಾಸ್ತ್ರದಲ್ಲಿ ಮಹತ್ತರ ಸ್ಥಾನ ಪಡೆದಿರುವ ಹಸ್ತಸಾಮುದ್ರಿಕಾ ಶಾಸ್ತ್ರ ಸುಮಾರು 2,000 ವರ್ಷಗಳ ಹಿಂದೆಯೇ ಚೀನಾದಲ್ಲಿ ಪ್ರಚಲಿತದಲ್ಲಿತ್ತು...

ಹಸ್ತ ಫಲ
Published On :

ಜ್ಯೋತಿಷ್ಯ ಶಾಸ್ತ್ರದಲ್ಲಿ ಮಹತ್ತರ ಸ್ಥಾನ ಪಡೆದಿರುವ ಹಸ್ತಸಾಮುದ್ರಿಕಾ ಶಾಸ್ತ್ರ ಸುಮಾರು 2,000 ವರ್ಷಗಳ ಹಿಂದೆಯೇ ಚೀನಾದಲ್ಲಿ ಪ್ರಚಲಿತದಲ್ಲಿತ್ತು. ಮಾನವ ಭವಿಷ್ಯ ನುಡಿಯುವುದರಲ್ಲಿ ಹಸ್ತಸಾಮುದ್ರಿಕ ಶಾಸ್ತ್ರಕ್ಕೂ, ಜ್ಯೋತಿಷ್ಯಕ್ಕೂ ಅವಿನಾಭಾವ ಸಂಬಂಧಗಳಿವೆ.
1460ರಲ್ಲಿ ಜೋಹನ್ ಹರ್ತೀಜ್ ಎಂಬ ಖಗೋಳ ಶಾಸ್ತ್ರಜ್ಞ ಪ್ರಥಮವಾಗಿ ಹಸ್ತಸಾಮುದ್ರಿಕಾ ಶಾಸ್ತ್ರ ವಿವರಿಸುವ ಕೃತಿ ಬರೆದಿದ್ದಾರೆ. ಅದೃಷ್ಟ ದೆಸೆ ಮತ್ತು ಭವಿಷ್ಯಗಳನ್ನು ತಿಳಿಯಪಡಿಸುವ ಹಲವು ಜ್ಯೋತಿಷ್ಯಶಾಸ್ತ್ರಜ್ಞರು ತಮ್ಮದೇ ಆದ ವಿಚಾರಗಳೊಂದಿಗೆ ಹಸ್ತಸಾಮುದ್ರಿಕಾ ಕೃತಿ ರಚಿಸಿದ್ದಾರೆ.
ಎಲ್ಲಾ ಕೃತಿಗಳು ಹಸ್ತದಲ್ಲಿ ಮೂಡಿರುವ ಪ್ರತಿಯೊಂದು ರೇಖೆಯ ಸ್ಥಿರತೆ, ಬೆಳವಣಿಗೆ ಮತ್ತು ಆಕಾರ ಆಧರಿಸಿ ಮಾನವನ ಭವಿಷ್ಯ ಆರೋಗ್ಯ ಆಯುಸ್ಸು, ಯೋಗಾಯೋಗ, ಸಂತಾನಯೋಗ, ಕಂಕಣಭಾಗ್ಯ ಮತ್ತು ಸಂಭವಿಸಬಹುದಾದ ದುರಂತಗಳನ್ನು ತಿಳಿಯಪಡಿಸುತ್ತವೆ.

ಗ್ರಹಗಳ ಪ್ರಭಾವ
ಪ್ರತಿಯೊಂದು ಉಗುರುಗಳು ಮತ್ತು ಬೆರಳುಗಳ ಮೇಲೆ ಮೂಡಿರುವ ರೇಖಾ ಚಿನ್ಹೆಗಳು (ಶಂಖ ಮತ್ತು ಚಕ್ರ) ಬ್ರಹ್ಮಾಂಡದ ಒಂದೊಂದು ಗ್ರಹದ ನಭೋಪ್ರಭಾವವನ್ನು ನಿಗ್ರಹಿಸುತ್ತವೆ. ಹಸ್ತದಲ್ಲಿ ಮೂಡಿರುವ ಎಲ್ಲಾ ಪ್ರಧಾನ ರೇಖೆಗಳಿಗೂ ಗ್ರಹಗಳ ಚಲನ ಸಿದ್ಧಾಂತಕ್ಕೂ ಚಿದಂಬರ ನಭೋಶಕ್ತಿ ಸಂಬಂಧಗಳಿವೆ.
ಈ ದಿಸೆಯಲ್ಲಿ ಶಾಸ್ತ್ರಜ್ಞರು ಪ್ರಥಮವಾಗಿ ಹಸ್ತದ ಮೇಲೆ ಮೂಡಿರುವ ಪ್ರತಿಯೊಂದು ರೇಖೆಗಳ ಆಕಾರ, ಸ್ಥಿರತೆ ಮತ್ತು ಬೆಳೆಯುತ್ತಿರುವ ದಿಕ್ಕುಗಳನ್ನು ಪರಾಮರ್ಶಿಸಿ ಭವಿಷ್ಯ ನಿರ್ಣಯಿಸುತ್ತಾರೆ.

ಚಿದಂಬರ ರಹಸ್ಯಗಳು
ಹೆಬ್ಬೆರಳನ್ನು ಬಿಟ್ಟು ನಾಲ್ಕು ಬೆರಳುಗಳು 12 ಭಾಗಗಳಾಗಿ ವಿಭಜನೆಗೊಂಡಿವೆ. ಪ್ರತಿಯೊಂದು ವಿಭಾಗವನ್ನು ರಾಶಿ ಮತ್ತು ಗ್ರಹಗಳು ನಿಗ್ರಹಿಸುತ್ತಿರುತ್ತವೆ. ಇವುಗಳನ್ನು 'ಅಂಕ' ಎನ್ನಲಾಗುತ್ತದೆ. ಈ ಅಂಕಗಳು ದೈವಿಕ ದೈವಚಿತ್ತ ಪ್ರಸಾರ ಸೂತ್ರಗಳು (ಸಂಖ್ಯಾಶಾಸ್ತ್ರ).
ಪೃಥ್ವಿಯ ಮೇಲ್ಮೈ ಮೇಲೆ ಯಾವುದೇ ಕಾಲಮಾನ ಬದಲಾಗಬೇಕಾದರೆ ಈ ಅಂಕಗಳಲ್ಲಿ ಮಾತ್ರ ಬದಲಿಗೊಳ್ಳುತ್ತವೆ. ಬೆರಳುಗಳು ಉದ್ದನೆಯ, ಚಿಕ್ಕದಾದ, ಚೂಪಾದ, ದಪ್ಪ, ಮೃದುವಾದ ದುಂಡನೆಯ ಮತ್ತು ಗಂಟುಗಳಿಂದ ತುಂಬಿರುತ್ತವೆ. ಉದ್ದನೆಯ ಬೆರಳು ಇದ್ದವರು ನೃತ್ಯಗಾತಿಯರು, ಕ್ರೀಡಾಪಟುಗಳು ಮತ್ತು ಅಧಿಕ ಆಯುಷ್ಯವುಳ್ಳವರು.
ಅತಿ ಬುದ್ಧವಂತರು, ಜ್ಞಾನಿಗಳು, ಅದೃಷ್ಟವಂತರು ಆಗುತ್ತಾರೆ. ಚಿಕ್ಕ ಬೆರಳು ಉಳ್ಳವರು ಚಾಣಾಕ್ಷರು, ಸಿರಿವಂತರು, ಯೋಗಿಗಳು ಮತ್ತು ಸಮಾಜ ಸುಧಾರಕರು ಆಗಿರುತ್ತಾರೆ.
ಹಸ್ತದ ಪ್ರಧಾನ ಸ್ಥಾನದಲ್ಲಿ ಮೂಡಿಬಂದಿರುವ 3 ಪ್ರಧಾನ ರೇಖೆಗಳು ಸೂರ್ಯ, ಚಂದ್ರ, ಬುಧ, ಗುರು ಮತ್ತು ಪೃಥ್ವಿಯ ಚಲನ ಸಿದ್ಧಾಂತವನ್ನು ಅನ್ವಯಿಸುತ್ತವೆ. ಪ್ರಧಾನ ರೇಖೆಗಳ ಮಧ್ಯೆ ಅನೇಕ ಚಿಕ್ಕಚಿಕ್ಕ ರೇಖೆಗಳು ಮೂಡಿರುತ್ತವೆ. ಪ್ರಧಾನ ರೇಖೆಗಳ ಸ್ಥಿರತೆ ಮತ್ತು ಆಕಾರಗಳಿಂದ ಅದೃಷ್ಟ, ದೆಸೆ, ಸಂಭವಿಸಬಹುದಾದ ಅವಘಡಗಳು ಮತ್ತು ಆಘಾತಗಳನ್ನು ತಿಳಿಯಪಡಿಸಲಾಗುತ್ತದೆ.
ಸುತ್ತುವರಿದ ರೇಖೆಗಳ ಬೆಳವಣಿಗೆಯಿಂದ ಆಯುಸ್ಸು, ಆರೋಗ್ಯ, ಕಂಕಣಭಾಗ್ಯ ಮತ್ತು ಸಂತಾನ ಯೋಗಗಳನ್ನು ತಿಳಿಯಪಡಿಸಬಹುದು. ಇವಲ್ಲದೆ ಕ್ಷುದ್ರರೇಖೆಗಳನ್ನು ಗುರುತಿಸಿ ಅನಿಷ್ಟಗಳ ಆಗಮನವನ್ನೂ ತಿಳಿಯಬಹುದು. ಮಾಹಿತಿಗೆ ಮೊ. 9945605618.

- ಎಂ. ಆಂಜನ್ ಕುಮಾರ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.