ಭಕ್ತಿ-ಜ್ಯೋತಿಷ್ಯ

ರಾಹುದೋಷಕ್ಕೆ ರಾಮಬಾಣ

ರಾಹುದೋಷಕ್ಕೆ ರಾಮಬಾಣ
Published On :

ರಾಹು ನವಗ್ರಹಗಳಲ್ಲಿ ಎಂಟನೆಯವನು. ಈತನಿಗೆ ಗ್ರಹಸ್ಥಾನ ಪೂರ್ಣವಾಗಿಲ್ಲದೇ ಛಾಯಾಗ್ರಹವಾದರೂ ಸೂರ್ಯಪಥ ಮತ್ತು ಚಂದ್ರಪಥ ಸೇರುವ ಸ್ಥಳದಲ್ಲಿ ಒಂದು ಅದ್ಭುತ ಶಕ್ತಿ ಕೇಂದ್ರವಾಗಿ, ಜೀವಿಗಳ ಮೇಲೆ ಹೆಚ್ಚಿನ ಪ್ರಭಾವ ಬೀರುವವನಾಗಿದ್ದಾನೆ.
ರಾಹುವಿನಿಂದ ನೇತ್ಯಾತ್ಮಕ ಭಾವನೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಜಾತಕದಲ್ಲಿ ರಾಹು ದೋಷ ಕಂಡುಬಂದಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕು.
ರಾಹುವಿನಿಂದ ನೀಚ ಸಹವಾಸ, ನೀಚ ವೃತ್ತಿ, ನೀಚ ಸ್ತ್ರೀ ಸಹವಾಸ, ಅಕ್ರಮರೀತಿ ಸಂಪಾದಿಸಿ, ಮೋಸ ಮಾಡುವ ಬುದ್ಧಿ, ಕಠಿಣತೆ ಅಶುಚಿ, ಜೂಜು, ಮೋಸ, ಮಾದಕ ವಸ್ತುಗಳ ಸೇವನೆ, ಮೊದಲಾದ ಸಂಕಷ್ಟ ಬರುತ್ತದೆ. ಹಾಗೂ ರಾಹುವಿನಿಂದ ಹಲವು ಪತ್ತೆಯಾಗದ ರೋಗಗಳು, ನಿತ್ರಾಣ, ಕ್ಯಾನ್ಸರ್‌ನಂಥ ವ್ಯಾಧಿ, ಗುಪ್ತ ರೋಗಗಳು, ಜನನಾಂಗ ಸಂಬಂಧ ಕಾಯಿಲೆಗಳು ಬರುವ ಸಾಧ್ಯತೆಗಳಿವೆ.
ಯಾವುದೇ ದೋಷಗಳಿಗೂ ಪರಿಹಾರ ಇರುತ್ತದೆ. ಹಾಗೆಯೇ ರಾಹುವುನಿಂದ ಎದುರಾಗುವ ಸಂಕಷ್ಟ, ವ್ಯಾಧಿಗಳನ್ನು ಪರಿಹರಿಸಿಕೊಳ್ಳಲೂ ಹಲವು ಮಾರ್ಗವಿದೆ. ದುರ್ಗಾದೇವಿಯು ರಾಹುವಿಗೆ ಅಧಿದೇವತೆಯಾದ್ದರಿಂದ ದುರ್ಗಾ ಅಷ್ಟೋತ್ತರ, ದುರ್ಗಾ ಸ್ತೋತ್ರಗಳ ಪಠಣೆ ಮಾಡುವುದು ಶುಭ.
ರಾಹುವಿನ ಬೀಜಾಕ್ಷರ ಮಂತ್ರ 'ಓಂ ಹ್ರಾಂ ಹ್ರೀಂ ಹ್ರೌಂ ಸಂ ಶ್ರೀರಾಹುವೇ ನಮಃ' ಎಂಬುದನ್ನು ಶುಕ್ರವಾರ 109 ಬಾರಿ ಪಠಿಸಬೇಕು.
ಶುಕ್ರವಾರದ ದಿನ, 'ಓಂ ದುಂ ದುರ್ಗಾಯೈ ನಮಃ' ಎಂಬುದನ್ನು ಶ್ರದ್ಧೆಯಿಂದ ದುರ್ಗಾದೇವಿ ಚಿತ್ರಪಟದ ಮುಂದೆ ಕುಳಿತು 108 ಬಾರಿ ಪಠಣ ಮಾಡಬೇಕು. ರಾಹುವನ್ನು ಕುರಿತು ಜಪ, ತಪ, ರಾಹುಶಾಂತಿ ಮಾಡಿಸಿ ಉದ್ದು ದಾನ ಮಾಡಬೇಕು.
ರಾಹು ಸಂಬಂಧ ಶ್ಲೋಕ 'ಅರ್ಧಕಾಯಂ, ಮಹಾವೀರ್ಯಂ ಚಂದ್ರಾದಿತ್ಯ ವಿಮರ್ದನಂ! ಸಿಂಹಿಕಾಗರ್ಭ ಸಂಭೂತಂ ತಂ ರಾಹುಂ ಪ್ರಣಮಾವ್ಯಹಂ' ಎಂಬುದನ್ನು ಸಂಕಷ್ಟ ವ್ಯಾಘ್ರಗಳು ಉಂಟಾದಾಗ ನಿತ್ಯ 5 ಬಾರಿಯಾದರೂ ಶ್ರದ್ಧೆಯಿಂದ ಪಠಿಸಬೇಕು. ದುರ್ಗಾ ದೇವಸ್ಥಾನದಲ್ಲಿ, ಮಂಗಳವಾರ, ಶುಕ್ರವಾರ ಪೂಜೆ, ಅರ್ಚನೆ ಮಾಡಿಸಬೇಕು. <

- ಎಂ.ವಿ. ಸತ್ಯನಾರಾಯಣ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.