ಬೆಳೆಯುತ್ತಿದೆ ಸೌರ ಕುಟುಂಬ!
16ನೇ ಶತಮಾನದ ತನಕ ಸೌರವ್ಯೂಹದಲ್ಲಿ ಕೇವಲ ಆರು ಗ್ರಹಗಳಿವೆ ಎಂದು ತಿಳಿಯಲಾಗಿತ್ತು. ನಂತರ, ಗೆಲಿಲಿಯೋ, ಕೆಲ್ಟರ್, ನ್ಯೂಟನ್ ಮತ್ತು ಕೊಪರ್ ನಿಕಸ್ ಮೊದಲಾದ ವಿಜ್ಞಾನಿಗಳ ಸಂಶೋಧನೆಗಳಿಂದ ಸೌರವ್ಯೂಹದಲ್ಲಿ 9 ಗ್ರಹಗಳಿವೆ ಎಂದು ತಿಳಿಯಲಾಯಿತು.
1781ರಲ್ಲಿ ಜರ್ಮನಿಯ ವಿಲಿಯಂ ಹರ್ಷಲ್ ಎಂಬಾತ ಸೂರ್ಯನಿಂದ 2,870 ಮಿಲಿಯನ್ ಕಿ.ಮೀ. ದೂರದಲ್ಲಿ ಯುರೇನಸ್, 1,846ರಲ್ಲಿ ಲೆವಿರೀರ್ ಎಂಬುವನು 4,497 ಮಿಲಿಯನ್ ಕಿ.ಮೀ. ದೂರದಲ್ಲಿ ನೆಫ್ಚೂನ್ ಮತ್ತು 1,930ರಲ್ಲಿ ಕ್ಲೆಡೇತಂಬಾಗ್ 5,900 ಮಿಲಿಯನ್ ಕಿ.ಮೀ. ದೂರದಲ್ಲಿ ಪ್ಲೂಟೋ ಗ್ರಹವನ್ನು ಪತ್ತೆ ಹಚ್ಚಿದ ನಂತರವೇ ಸೌರವ್ಯೂಹದಲ್ಲಿ 11 ಗ್ರಹಗಳು ಎಂದು ತಿಳಿದು ಬಂತು.
ಇವುಗಳನ್ನು ಹೊಂದಿಕೊಂಡು 63ರಿಂದ 64 ಉಪಗ್ರಹಗಳಿವೆ ಎಂದು ತಿಳಿಯಲಾಯಿತು. ಮೇಷ, ವೃಷಭ, ಕಟಕ ಎಂಬ 88 ತಾರಾ ಮಂಡಲಗಳು ನಭೋಮಂಡಲದಲ್ಲಿ ಸ್ಥಿರಪಟ್ಟಿದ್ದು, ಗ್ರಹಗಳೇ ಆಗಲಿ ಉಪಗ್ರಹಗಳೇ ಆಗಲಿ, ಕಾಲಗಣನಾ ಚಕ್ರದಲ್ಲಿ ಚಾಚೂತಪ್ಪದೆ ಚಲನಾಸಿದ್ಧಾಂತಗಳನ್ನು ಹೊಂದಿರುತ್ತವೆ.
ಆದರೆ ಗುರು ಮತ್ತು ಮಂಗಳ ಗ್ರಹಗಳ ಮಧ್ಯಭಾಗ ಮತ್ತು ಪ್ಲೂಟೋ ಆಚೆಗೆ ವಿಸ್ತಾರಗೊಂಡ ಕ್ಯೂಪಿಯರ್ ಮಂಡಲಗಳಲ್ಲಿ ವಿಸ್ತಾರಗೊಂಡಿರದ ಸಾವಿರಾರು ಧೂಮಕೇತುಗಳು, ಲಕ್ಷಾನುಗಟ್ಟಲೆ ಉಲ್ಕಾಶಿಲೆಗಳು ಮತ್ತು ಬೃಹತ್ ಆಕಾಶದ ನಭೋವಸ್ತುಗಳು ಗೊತ್ತುಗುರಿ ಇಲ್ಲದೆ ಶಬ್ದವೇಗದಲ್ಲಿ ಸೌರಮಂಡಲವನ್ನು ಪ್ರದಕ್ಷಿಣೆ ಮಾಡುತ್ತಿರುತ್ತವೆ.
ಅದ್ಭುತ ಪ್ರಕಾಶವನ್ನು ನಭೋಮಂಡಲದತ್ತ ಎರಕ ಹೊಯ್ಯುವ ಕೋಟಿ ಕೋಟಿ ಕಿ.ಮೀ. ಉದ್ದನೆಯ ಬಾಲಗಳ ಧೂಮಕೇತುಗಳ ಮೂಲಸಿದ್ಧಾಂತ ಚಿದಂಬರ ರಹಸ್ಯವಾಗಿಯೇ ಉಳಿದಿದೆ. ಸೂರ್ಯೋದ್ರೇಕದಿಂದ ಭೌತಿಕ ಮತ್ತು ರಾಸಾಯನಿಕ ಕ್ರಿಯೆಗಳಿಗೆ ತುತ್ತಾಗುತ್ತಿರುವ ಉಲ್ಕಾಶಿಲೆಗಳಿಂದ ಸಾವಿರಾರು ಟನ್ ಉಲ್ಕಾಭಸ್ಮ ಮತ್ತು ನಭೋವಸ್ತುಗಳು ಪಂಚಭೂತಗಳ ಸಮ್ಮಿಶ್ರ ಸಿದ್ಧಾಂತದಿಂದಲೇ ಸೃಷ್ಟಿಗೊಂಡಿರುವುದು ಕಠೋರ ಸತ್ಯ. ಮನೋ ಅಂತರ್‌ಜ್ಞಾನ ಮತ್ತು ಕಾಲಗಣನಾಚಕ್ರವನ್ನು ಭೇದಿಸಿದರೆ; ಈ ಶತಮಾನದ ಅಂತ್ಯದಲ್ಲಿ ಇನ್ನು ಮೂರು ಭೂಶಿರ ಗ್ರಹಗಳು ಮತ್ತು ಎರಡು ಪುಟ್ಟ ಉಪಗ್ರಹಗಳು ಸೌರಮಂಡಲವನ್ನು ಸೇರುವ ನಿರೀಕ್ಷೆ ಇದೆ. ಏಕೆಂದರೆ ತಲೆಬುರುಡೆ ಆಕಾರದ ನಿಬುರು ಮತ್ತು ಸೆಂಟಾಯರಸ್ ಗ್ರಹಗಳು ಸೌರಮಂಡಲದತ್ತ ಧಾವಿಸುತ್ತದೆ ಎಂದು ತಿಳಿದುಬಂದಿದೆ.
-ವಿ. ನಾರಾಯಣಶೆಟ್ಟಿ ಪದ್ಮಶಾಲಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

