ಮತ್ಸ್ಯ ಪುರಾಣ

ಅಷ್ಟಾದಶ ಪುರಾಣಗಳಲ್ಲಿ ಮತ್ಸ್ಯ ಪುರಾಣವೂ ಒಂದು. ಮಹಾವಿಷ್ಣುವಿನ ದಶಾವತಾರಗಳಲ್ಲಿ ಮತ್ಸ್ಯಾವತಾರವೇ ಪ್ರಥಮವಾದದ್ದು. ಈ ಪುರಾಣ 1,400 ಶ್ಲೋಕಗಳನ್ನು ಒಳಗೊಂಡಿದೆ.
ಮನು ಎಂಬ ಹೆಸರಿನಿಂದ ಪ್ರಖ್ಯಾತಿ ಪಡೆದ ಚಕ್ರವರ್ತಿ ದ್ರಾವಿಡ ಸತ್ಯವ್ರತನು ಕಲ್ಪಾಂತ್ಯ ಕಾಲದಲ್ಲಿ ಒಂದು ಸರೋವರದಲ್ಲಿ ಸ್ನಾನವನ್ನು ಮಾಡಿ, ಮಹಾ ವಿಷ್ಣುವಿಗೆ ಅರ್ಘ್ಯವನ್ನು ಬಿಡಲೋಸುಗ ಬೊಗಸೆ ಕೈಗಳನ್ನು ನೀರಿನಲ್ಲಿ ಮುಳುಗಿಸಿದಾಗ ಚಿಕ್ಕ ಮೀನೊಂದು ಬೊಗಸೆಗೆ ಬರುತ್ತದೆ. ಮಹಾರಾಜ ಮನು ಆ ಮೀನನ್ನು ತನ್ನ ಕಮಂಡಲವಿಗೆ ಹಾಕಿಕೊಳ್ಳುತ್ತಾನೆ. ಆದರೆ ಆ ಮೀನು ಕ್ಷಣ ಕ್ಷಣಕ್ಕೂ ತನ್ನ ಗಾತ್ರವನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತದೆ. ಹಾಗೂ ಬೃಹದಾಕಾರವಾಗಿ ಬೆಳೆಯುತ್ತದೆ ಈ ಬೃಹತ್ ಗಾತ್ರದ ಮೀನು ಮಹಾ ವಿಷ್ಣುವಿನ ಅವತಾರವೇ ಎಂದು ಮನುವಿನ ಅರಿವಿಗೆ ಬರುತ್ತದೆ.
ನೋಡ ನೋಡುತ್ತಿದ್ದಂತೆ ಆ ಮಹಾ ಮತ್ಸ್ಯ ಒಂದು ದೊಡ್ಡ ಗಾತ್ರದ ದೊಣಿಯನ್ನು ನಿರ್ಮಿಸಿ, ಈ ಭೂಮಂಡಲದಲ್ಲಿ ಲಭ್ಯವಿರುವ ಪ್ರತಿಯೊಂದು ಜೀವ ಜಂತು ಪ್ರಾಣಿ ಸಂಕುಲಗಳ ಗಂಡು ಹೆಣ್ಣು ಪ್ರಭೇದಗಳನ್ನು ಆ ಬೃಹತ್ ದೋಣಿಯಲ್ಲಿಟ್ಟು ಮನುವಿಗೆ ರಕ್ಷಿಸಲು ಹೇಳುತ್ತದೆ. ಈ ರೀತಿಯಾಗಿ ರಕ್ಷಿಸಲ್ಪಟ್ಟ ಸಕಲ ಜೀವರಾಶಿಗಳೂ ಉಳ್ಳ ಮಹಾನ್ ದೋಣಿಯನ್ನು ಮಹಾ ಜಲಪ್ರಳಯದಲ್ಲಿ ಎಳೆಯುತ್ತಾ ರಕ್ಷಿಸುತ್ತದೆ.
ಇದೇ ಸಂದರ್ಭದಲ್ಲಿ ಮತ್ಸ್ಯಾವತಾರಿ ಮಹಾವಿಷ್ಣುವು ಮನುವಿಗೆ ಈ ಬ್ರಹ್ಮಾಂಡದ ದಿವ್ಯತ್ವ, ಧರ್ಮಶೀಲನಾದ ಮನುಷ್ಯ ನಡೆಯಬೇಕಾದ ಋಜುಮಾರ್ಗ, ವಿಶ್ವದ ನಿರ್ಮಾಣ, ಅಂತ್ಯ, ಸೂರ್ಯವಂಶ, ಚಂದ್ರವಂಶ ರಾಜರ ವಂಶಾವಳಿಯನ್ನು ವಿವರಿಸುತ್ತಾನೆ. ಇದೊಂದು ಸುದೀರ್ಘವಾದ ಪುರಾಣ. ಮನುಷ್ಯನಾಗಿ ಜನಿಸಿದವನು ವಿಷ್ಣು ಸಾಯುಜ್ಯವನ್ನು ಪಡೆಯುವ ಮಾರ್ಗವನ್ನು ಸ್ವಯಂ ಮಹಾವಿಷ್ಣುವೇ ಮನು ಮಹಾರಾಜನಿಗೆ ಶ್ಲೋಕ ರೂಪದಿಂದ ಬೋಧಿಸಿದ ಕಥೆಯೇ ಮತ್ಸ್ಯ ಪುರಾಣ.
- ವಿ. ಕೇಶವಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


