ಭಕ್ತಿ-ಜ್ಯೋತಿಷ್ಯ

ಸೈನ್ಯ ಸಮಾಚಾರ

Published On :

ಅಕ್ಷೌಹಿಣೀ ಎಂದರೆ ರಥ, ಆನೆ, ಕಾಲಾಳು ಮತ್ತು ಕುದುರೆಗಳಿಂದೊಡಗೂಡಿದ ಸೈನ್ಯ. ಮಹಾಭಾರತ ಯುದ್ಧ ನಡೆದದ್ದು ಇಂಥ ಅಕ್ಷೌಹಿಣೀ ಸೈನ್ಯಗಳ ನಡುವೆಯೇ. ಪತ್ತಿ, ಸೇನಾಮುಖ, ಗುಲ್ಮ, ಗಣ, ವಾಹಿನೀ, ಪೃತನಾ, ಚಮೂ, ಅನಿಕಿನೀ ಇವು ಅಕೌಹಿಣೀ ಸೈನ್ಯದ ಪ್ರಮುಖ ಹಂತಗಳು.
1 ರಥ, 1 ಆನೆ, 5 ಕಾಲಾಳು, 3 ಕುದುರೆಗಳ ಒಂದು ಗುಚ್ಛವೇ ಪತ್ತಿ. ಇಂಥ 3 ಪತ್ತಿಗಳು ಸೇರಿದರೆ 1 ಸೇನಾಮುಖ. (3 ರಥ, 3 ಆನೆ, 15 ಕಾಲಾಳು ಮತ್ತು 9 ಕುದುರೆ- ಸೇನಾಮುಖ). 3 ಸೇನಾಮುಖಗಳ ಗುಂಪಿಗೆ 1 ಗುಲ್ಮ ಎನ್ನುತ್ತಾರೆ (9 ರಥ, 9 ಆನೆ, 45 ಕಾಲಾಳು ಮತ್ತು 27 ಕುದುರೆ- ಗುಲ್ಮ). 3 ಗುಲ್ಮಗಳಿಗೆ 1 ಗಣ ಎನ್ನಲಾಗುತ್ತದೆ (27 ರಥ, 27 ಆನೆ, 135 ಕಾಲಾಳು ಮತ್ತು 81 ಅಶ್ವ - ಗಣ).
3 ಗಣಗಳಿಗೆ 1 ವಾಹಿನಿ ಎನ್ನುತ್ತಾರೆ (81ರಥ, 81 ಆನೆ, 405 ಕಾಲಾಳು ಮತ್ತು 243 ಅಶ್ವ- ವಾಹಿನೀ). 3 ವಾಹಿನಿಗಳು ಸೇರಿದರೆ 1 ಪೃತನಾ ಎನಿಸಿಕೊಳ್ಳುತ್ತದೆ (243 ರಥ, 243 ಆನೆ, 1215 ಕಾಲಾಳು ಮತ್ತು 729 ಕುದುರೆ- ಪೃತನಾ). 3 ಪೃತನಾಗಳಿಗೆ 1 ಚಮೂ ಎನ್ನುತ್ತಾರೆ (729 ರಥ, 729 ಆನೆ, 3645 ಕಾಲಾಳು ಮತ್ತು 2187- ಚಮೂ).  3 ಚಮೂಗಳು ಸೇರಿದರೆ 1 ಅನೀಕಿನೀ ಆಗುತ್ತದೆ (2187 ರಥ, 2187 ಆನೆ, 10,935 ಕಾಲಾಳು ಮತ್ತು 6561 ಅಶ್ವ- ಅನೀಕಿನೀ). ಇಂಥ 10 ಅನಿಕಿನೀಗಳು ಸೇರಿದೆರೆ 1 ಅಕ್ಷೌಹಿಣೀ ಆಗುತ್ತದೆ.
21,870 ರಥ, 21,870 ಆನೆ, 1,09,350 ಕಾಲಾಳು ಮತ್ತು 65,610 ಕುದುರೆಗಳು ಸೇರಿದರೆ ಒಂದು ಅಕ್ಷೌಹಿಣೀ ಸೈನ್ಯವಾಗುತ್ತದೆ.
ಕುರುಕ್ಷೇತ್ರ ಯುದ್ಧ ನಡೆದದ್ದು ಇಂಥ 18 ಅಕ್ಷೌಹಿಣೀ ಸೈನ್ಯಗಳ ನಡುವೆ. ಅಂದರೆ 3,93,660 ರಥ, 3,93,660 ಆನೆ, 19,68,300 ಕಾಲಾಳು ಮತ್ತು 11,80,980 ಕುದುರೆಗಳು ಮಹಾಭಾರತ ಯುದ್ಧದಲ್ಲಿ ಭಾಗವಹಿಸಿದ್ದವು.  ಇಷ್ಟು ಸಂಖ್ಯೆಯ ಸೈನ್ಯದಲ್ಲಿಯೇ ಚಕ್ರವ್ಯೂಹ, ಮಕರವ್ಯೂಹ ಸೇರಿದಂತೆ ಹಲವು ವ್ಯೂಹಗಳನ್ನು ರಚಿಸಿ ಶತ್ರುಗಳ ವಿರುದ್ಧ ಯುದ್ಧ ಮಾಡಲಾಗಿತ್ತು. ಅಬ್ಬಾ..., ಇಷ್ಟೆಲ್ಲಾ ಅಂಕಿಸಂಖ್ಯೆಗಳನ್ನು ಓದಿ ಮುಗಿಸಿದಾಗ ನಿಜಕ್ಕೂ ಯಾವುದೋ ವ್ಯೂಹವನ್ನು ಭೇದಿಸಿದಂತಾಗಿರಬಹುದಲ್ಲವೇ?

- ಸುಧೀಂದ್ರ ಜಮ್ಮಟಿಗೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.