ಕೂಲ್ ಡೌನ್

ಸಾಮಾನ್ಯವಾಗಿ ಎಲ್ಲರೂ ಒಂದೊಂದು ಉದ್ಯೋಗದಲ್ಲಿ ತಮ್ಮ ಜೀವನ ನಡೆಸುತ್ತಿರುತ್ತಾರೆ. ಆದರೂ ಕೆಲವರು ಅದರಲ್ಲಿ ಅಂತಹ ಪ್ರಗತಿ ಹೊಂದಿರುವುದಿಲ್ಲವೆಂದು ಮಾನಸಿಕವಾಗಿ ಖಿನ್ನರಾಗಿರುತ್ತಾರೆ. ಇಂತಹ ಮಾನಸಿಕ ಖಿನ್ನತೆ ಹೋಗಲಾಡಿಸಿ, ಅವರ ಕೆಲಸ ಕಾರ್ಯದಲ್ಲಿ ಚೈತನ್ಯ ಮೂಡಿಸಲು ರುದ್ರಾಕ್ಷಿ ಬಹಳ ಸಹಕಾರಿ.
ಈ ನಿಟ್ಟಿನಲ್ಲಿ ಯಾವ ಮುಖದ ರುದ್ರಾಕ್ಷಿಯನ್ನು ಯಾವ ಉದ್ಯೋಗದವರು ಧಾರಣೆ ಮಾಡಬೇಕು? ಯಾವ ಮುಖದ ರುದ್ರಾಕ್ಷಿಯಿಂದ ಏನೇನು ಪ್ರಯೋಜನ ಎಂಬುದನ್ನು ತಿಳಿಯಬಹುದು.
ಏಕಮುಖ ರುದ್ರಾಕ್ಷಿ
ಇದು ಬಹಳ ವಿರಳವಾಗಿದ್ದು, ಬೆಲೆ ಹೆಚ್ಚು. ಅರ್ಧಚಂದ್ರಾಕಾರದಲ್ಲಿ ಇರುವ ಏಖಮುಖ ರುದ್ರಾಕ್ಷಿ ಇತ್ತೀಚೆಗೆ ಸಿಗುವುದು ಅಪರೂಪ. ಇಲ್ಲಿ ಶಿವನ ಸ್ವರೂಪ ಹಾಗೂ ಇದರಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ. ಇದನ್ನು ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು, ರಾಜಕಾರಣಿಗಳು, ಎಲ್ಲ ರೀತಿಯ ಆಡಳಿತ ಅಧಿಕಾರಿಗಳು ಧಾರಣೆ ಮಾಡಬಹುದು. ಧಾರ್ಮಿಕ ಕಾರ್ಯಗಳಲ್ಲಿ ಸಂಪೂರ್ಣ ಲಾಭ ದೊರೆಯುತ್ತದೆ.
ಎರಡು ಮುಖ ರುದ್ರಾಕ್ಷಿ
ಪೊಲೀಸ್ ಅಧಿಕಾರಿಗಳು, ಮಕ್ಕಳ ಫಲಕ್ಕೆ, ಧನ ಧಾನ್ಯ ಸಂಪತ್ತು ಸಂಗ್ರಹಿಸುವವರು ಧಾರಣೆ ಮಾಡಬಹುದು.
ಮೂರು ಮುಖದ ರುದ್ರಾಕ್ಷಿ
ವಾಹನ ಚಾಲಕರು, ರೈಲು, ಬಸ್ಸು ಚಾಲಕರು ವಿಮಾನ ಚಾಲಕರು ವ್ಯಾಪಾರಿಗಳು ಧಾರಣೆ ಮಾಡಬಹುದು. ಹಾಗೂ ಮನೆಯಲ್ಲಿ ನೆಮ್ಮದಿ ಶಾಂತಿ ದೊರೆಯುತ್ತದೆ.
ನಾಲ್ಕು ಮುಖದ ರುದ್ರಾಕ್ಷಿ
ವಿದ್ಯಾರ್ಥಿಗಳು, ವೈದ್ಯಕೀಯ ವೃತ್ತಿಯಲ್ಲಿ ತೊಡಗಿರುವವರು ಧಾರಣೆ ಮಾಡಬಹುದು. ಬುದ್ಧಿಬಲ, ಹಠ ಮಾಡುವವರಿಗೆ ಹಾಗೂ ಮನೋಬಲ ದೊರೆಯುತ್ತದೆ.
ಐದು ಮುಖದ ರುದ್ರಾಕ್ಷಿ
ಎಲ್ಲರೂ ಧಾರಣೆ ಮಾಡಬಹುದು. ಮನಸ್ಸಿನ ಏಕಾಗ್ರತೆ, ಸಿಟ್ಟನ್ನು ಶಮನ ಮಾಡಲು, ಶಾಂತತೆ ಲಭ್ಯವಾಗಲು ಸಹಕಾರಿ.
ಆರು ಮುಖದ ರುದ್ರಾಕ್ಷಿ
ಧರ್ಮ ಬೋಧಕರು, ಶಿಕ್ಷಕರು, ಅಧ್ಯಾಪಕರು ಧರಿಸಬಹುದು. ಇದರಿಂದ ಧನ, ಧಾನ್ಯ, ಸಂಪತ್ತು, ವಿದ್ಯಾ ಸಂಪತ್ತು ದೊರೆಯುತ್ತದೆ. ವಾಹನ ಲಭ್ಯವಾಗುತ್ತದೆ.
ಏಳು ಮುಖದ ರುದ್ರಾಕ್ಷಿ
ವಿದ್ಯುತ್ ಇಲಾಖೆಯಲ್ಲಿ ಕೆಲಸ ಮಾಡುವವರು, ವಿದ್ಯುತ್ ಎಂಜಿನಿಯರ್, ಚಾಲಕರು ಧಾರಣೆ ಮಾಡಬಹುದು. ಮಾಟ ಮಂತ್ರಗಳು, ದುಷ್ಟಶಕ್ತಿ ನಿವಾರಣೆ, ಕೋರ್ಟ್ ವ್ಯವಹಾರದಲ್ಲಿ ಜಯ, ವ್ಯಾಪಾರಗಳಲ್ಲಿ ವೃದ್ಧಿ ಇದರಿಂದ ಆಗುತ್ತದೆ.
ಎಂಟು ಮುಖದ ರುದ್ರಾಕ್ಷಿ
ಇದನ್ನು ಕಟ್ಟಡ ಕಟ್ಟಿಸುವ ಎಂಜಿನಿಯರು, ಹಡಗು, ನೌಕೆಯಲ್ಲಿ ಕೆಲಸ ಮಾಡುವ ನೌಕಾ ಅಧಿಕಾರಿಗಳು ಧಾರಣೆ ಮಾಡಬಹುದು. ದಾರಿದ್ರ್ಯ ತೊಲಗುತ್ತದೆ ಲಕ್ಷ್ಮೀ ಸ್ವರೂಪ, ಆರೋಗ್ಯದಲ್ಲಿ ಸುಧಾರಣೆ ಆಗುತ್ತದೆ.
ಒಂತ್ತು ಮುಖದ ರುದ್ರಾಕ್ಷಿ
ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವವರು, ಅಧಿಕಾರಿಗಳು ಹಾಗೂ ಮಿಲಿಟರಿಯಲ್ಲಿ ಕೆಲಸ ಮಾಡುವವರು, ಅಧಿಕಾರಿಗಳು, ಗಾಯನ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸಂಗೀತಗಾರರು ಧಾರಣೆ ಮಾಡಬಹುದು ಹಾಗೂ ರೋಗದಿಂದ ಮುಕ್ತಿ, ವೈರಿಗಳ ತೊಂದರೆ ತಾಪತ್ರಯಗಳಿಂದ ಪಾರು, ಸಂಕಷ್ಟಗಳಿಂದ ಪರಿಹಾರ ದೊರೆಯುತ್ತದೆ.
ಹತ್ತು ಮುಖದ ರುದ್ರಾಕ್ಷಿ
ದೊಡ್ಡ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರು (ವಿಶೇಷವಾಗಿ ಮೆಕ್ಯಾನಿಕಲ್ ಎಂಜಿನಿಯರ್), ವಾಯುಪಡೆಯಲ್ಲಿ ಕೆಲಸ ಮಾಡುವವರು, ವಿಮಾನ ಚಾಲಕರು ಧಾರಣೆ ಮಾಡಬಹುದು. ಸಂತಾನ ಫಲ, ನೆಮ್ಮದಿ, ಶಾಂತಿ, ಸೌಭಾಗ್ಯ, ದೊರಕುವುದು.
ಹನ್ನೊಂದು ಮುಖದ ರುದ್ರಾಕ್ಷಿ
ಕಚೇರಿಗಳಲ್ಲಿ ಕೆಲಸ ಮಾಡುವ ಗುಮಾಸ್ತರು, ಬೆರಳಚ್ಚುಗಾರರು, ಶೀಘ್ರ ಲಿಪಿಗಾರರು, ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವವರು, ತಾಂತ್ರಿಕ ಹುದ್ದೆಯಲ್ಲಿರುವವರು ಧರಿಸಬಹುದು. ಸಾಧು ಸಂತರು, ಯತಿವರ್ಯರು ಸನ್ಯಾಸಿಗಳು ಧರಿಸಬಹುದು. ಕಾಯಿಲೆಗಳಿಂದ ಪರಿಹಾರ, ನೆಮ್ಮದಿ, ಶಾಂತಿ ದೊರಕುತ್ತದೆ.
ಹನ್ನೆರಡು ಮುಖದ ರುದ್ರಾಕ್ಷಿ
ಖಜಾಂಚಿಗಳು, ನೌಕಾ ಅಧಿಕಾರಿಗಳು, ಕೈಗಾರಿಕೋದ್ಯಮಿಗಳು ಧರಿಸಬಹುದು. ರೋಗದಿಂದ ಮುಕ್ತ, ಧನ, ಧಾನ್ಯ ಸಂಪತ್ತು ಏಳಿಗೆ ದೊರೆಯುತ್ತದೆ.
ಹದಿಮೂರು ಮುಖದ ರುದ್ರಾಕ್ಷಿ
ನ್ಯಾಯಾಲಯದಲ್ಲಿ ಕೆಲಸ ಮಾಡುವ ಅಧಿಕಾರಿಗಳು, ನ್ಯಾಯಾಧೀಶರು, ಸಂಗೀತಗಾರರು, ಆಡಳಿತಗಾರರು ಧಾರಣೆ ಮಾಡಬಹುದು. ಎಲ್ಲ ಕಾರ್ಯಗಳಲ್ಲೂ ಅನುಕೂಲ ಏಳಿಗೆ, ಪ್ರಗತಿ, ಯಶಸ್ಸು, ದೊರೆಯುತ್ತದೆ.
ಹದಿನಾಲ್ಕು ಮುಖದ ರುದ್ರಾಕ್ಷಿ
ಹೊಟೇಲ್ ಮಾಲೀಕರು, ವೈದ್ಯರು, ಸರ್ಜನ್‌ಗಳು, ಗುತ್ತಿಗೆದಾರರು, ಕೈಗಾರಿಕೋದ್ಯಮಿಗಳು, ದೊಡ್ಡ ಅಧಿಕಾರಿಗಳು, ಭಾರಿ ವ್ಯಾಪಾರಸ್ಥರು ಧರಿಸಬಹುದು. ಎಲ್ಲ ಕಾರ್ಯದಲ್ಲಿ ಏಳಿಗೆ, ಪ್ರಗತಿ, ಯಶಸ್ಸು, ಕಾರ್ಯಸಿದ್ಧಿ ದೊರೆಯುತ್ತದೆ.
- ಶೈಲೇಶ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


