ದಾನ ಯಾವುದಯ್ಯಾ?
ಮನುಷ್ಯ, ವಸ್ತು ಯಾವುದೇ ಆಗಿರಬಹುದು... ಬೇಕಿದ್ದರೂ, ಮನಸಂತೋಷವಾಗಿ ಅದನ್ನು ನಾನು ಇನ್ನೊಬ್ಬರಿಗೆ ನೀಡುತ್ತಿದ್ದೇನೆ ಎಂದು ನೀಡಿದರೆ ...

ಮನುಷ್ಯ, ವಸ್ತು ಯಾವುದೇ ಆಗಿರಬಹುದು... ಬೇಕಿದ್ದರೂ, ಮನಸಂತೋಷವಾಗಿ ಅದನ್ನು ನಾನು ಇನ್ನೊಬ್ಬರಿಗೆ ನೀಡುತ್ತಿದ್ದೇನೆ ಎಂದು ನೀಡಿದರೆ ಅದು ಶ್ರೇಷ್ಠ ದಾನ. ಅಲ್ಲದೆ ಅದು ಅವನಿಗೆ (ತೆಗೆದು ಕೊಂಡವನಿಗೆ) ಉತ್ತಮವಾದ ಪ್ರಯೋಜನಕ್ಕೆ ಒದಗಿದಾಗ ಮಹತ್ವಪೂರ್ಣವಾದ ದಾನವಾಗುತ್ತದೆ.
ಇನ್ನೊಬ್ಬರ ಮನಸ್ಸನ್ನು ಅರಿತು ನಾವು ಅವನು ಬಯಸಿದ್ದನ್ನು ನೀಡಬೇಕು. ಒಬ್ಬ ವ್ಯಕ್ತಿಗೆ ದ್ರವ ಆಹಾರ (ಹಾಲು, ನೀರು) ಬೇಕು ಆಗ ನಾವು ಅದನ್ನು ಕೊಡುವುದರ ಬದಲು ಗಟ್ಟಿಯಾದ ಯಾವುದೇ ಆಹಾರ ನೀಡಿದರೂ ಅದನ್ನು ಅವನಿಗೆ ಅನುಭವಿಸಲು ಸಾಧ್ಯವಿಲ್ಲ.
ಹಾಗೆಯೇ ಇನ್ನೊಬ್ಬರು ಯಾರೊಂದಿಗೂ ಕಸಿದುಕೊಳ್ಳಲಾರದ್ದೆಂದರೆ ಅದು ವಿದ್ಯೆ. ಅಂಥ ವಿದ್ಯೆಯನ್ನು ದಾನ ಮಾಡಿದರೆ ಅದು ಮಹಾದಾನ. ಮಸ್ತಕದಲ್ಲಿರುವ ವಿದ್ಯೆಯನ್ನು ಇನ್ನೊಬ್ಬನಿಗೆ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಅದೇ ರೀತಿ ಆ ದಾನವನ್ನು ಕೊಟ್ಟವನಿಗೂ ಅದು ಅವನಿಂದ ಮಾಸಿ ಹೋಗುವುದಿಲ್ಲ. ಬದಲಾಗಿ ಅದು ವೃದ್ಧಿಯಾಗುತ್ತಾ ಹೋಗುತ್ತದೆ.
ಅದಕ್ಕೆ ವಿದ್ಯಾದಾನ ಅತ್ಯಂತ ಉನ್ನತ ಸ್ಥಾನ ಪಡೆದಿದೆ. ಅಲ್ಲದೆ ವಿದ್ಯಾದಾನ ಮಾಡಿದವ ಗುರುವಿನ ಸ್ಥಾನ ಪಡೆಯುತ್ತಾನೆ. ಗುರುವಿಗಿಂತ ಮಿಗಿಲಾದ ಸ್ಥಾನವಿಲ್ಲ. ಹೆತ್ತ ತಾಯಿಯಂತೆ ಗುರುವೂ ಶಾಶ್ವತ. ಎಂದೆಂದಿಗೂ ಆ ಸ್ಥಾನ ಶಿಷ್ಯನ ಮನಸ್ಸಿನಲ್ಲಿ ಮರೆಯಾಗುವುದಿಲ್ಲ. ವಿದ್ಯೆ ಪಡೆದವನು, ಅದರ ನೆರವಿನಿಂದಲೇ ಬದುಕು ಸಾಗಿಸಬಹುದು. ನಂತರ ಅದೇ ವಿದ್ಯೆಯನ್ನು ಇನ್ನೊಬ್ಬರಿಗೆ ದಾನ ಮಾಡಬಹುದು. ಹೀಗೆ ಅದು ಮುಂದುವರಿಯುತ್ತಾ ಹೋಗುತ್ತದೆ. ಅದಕ್ಕೆ ಕೊನೆಯೆಂಬುದಿಲ್ಲ. ತನಗೆ ತಿಳಿದ ಯಾವುದೇ ಒಳ್ಳೆಯ ವಿಷಯವನ್ನು ಇನ್ನೊಬ್ಬನಿಗೆ ಹೇಳಿ ಕೊಟ್ಟಾಗ ಅದು ಕೂಡಾ ವಿದ್ಯಾದಾನ. ಗುರು- ಶಿಷ್ಯ ಸಂಬಂಧ ಅತ್ಯಂತ ಆತ್ಮೀಯವಾದ ಬಾಂಧವ್ಯ. ಇಲ್ಲಿ ಗುರುವಿಗೆ ಹೆಚ್ಚು ಹೆಚ್ಚು ಜನರ ಸಂಪರ್ಕ ಸಾಧ್ಯ. ಮಾತ್ರವಲ್ಲದೆ ಒಂದು ಸಂಸ್ಥೆ ನಿರ್ಮಾಣವಾಗುತ್ತದೆ. ಸಮಾಜ ಏಳಿಗೆಯಾಗುತ್ತದೆ.
ಇನ್ನೊಂದು ಅತ್ಯಂತ ಶ್ರೇಷ್ಠವಾದ ದಾನ ಎಂದರೆ ಅನ್ನದಾನ. ಅನ್ನ ತಿಂದವರಿಗೆ ಹೊಟ್ಟೆ ತುಂಬಾ ಊಟಮಾಡಿ ಸಂತೃಪ್ತಿ ಆದ ಮೇಲೆ ಇನ್ನೂ ಒಂದು ಲೋಟ ಪಾಯಸ ಕುಡಿಯಿರಿ ಎಂದು ಬೇಡಿಕೊಂಡರೂ ಆ ಹೊತ್ತಿಗೆ ಅದು ಬೇಡವಾಗುತ್ತದೆ. ಅಂದರೆ ಅಷ್ಟು ಸಂತೃಪ್ತಿ ಹೊಂದಿರುತ್ತಾನೆ. ಅನ್ನದಾನ ಮಾಡಿದವನಿಗೂ ಪೂರ್ಣವಾಗಿ ದಾನದ ಪುಣ್ಯ ಸಿಗುತ್ತದೆ.
ಹಿರಿಯರ ಶ್ರಾದ್ಧದಲ್ಲೂ ಅಷ್ಟೇ. ತಿಥಿ ಮಾಡುವವರು ಪುರೋಹಿತರಿಗೆ ಊಟ ಮಾಡಿಸುವಾಗ ಯಾವುದೇ ಪದಾರ್ಥವಾಗಲಿ 2ನೇ ಸಲವೂ ಅವರು ಬಡಿಸಿಕೊಂಡರೆ ಪುನಃ ಕೇಳಬೇಕು. ಅವರ ಬಾಯಿಯಿಂದ ಸಾಕು ಎಂಬ ಪದವನ್ನು ಕೇಳಬೇಕು. ಆಗ ಮಾತ್ರ ಶ್ರಾದ್ಧ ಮಾಡಿದ್ದು ಸಾರ್ಥಕ ಎಂದು ಹಿರಿಯರು ಹೇಳಿದ್ದಾರೆ.
- ಕೃಷ್ಣವೇಣಿ ಪ್ರಸಾದ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


