ಯೋಗಕ್ಷೇವು
ಗುರುವು ಶಿಷ್ಯನಿಗೆ ಬೋಧಿಸಿದ ನಿರ್ದಿಷ್ಟ ಜಪ ಮತ್ತು ಸಾಧನೆಯ ಕ್ರಮಗಳಿಂದ ಶಿಸ್ತುಬದ್ಧ ಆಹಾರ ಪದ್ಧತಿ, ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು ಮತ್ತು ಅದನ್ನು ಪಾಲಿಸಬೇಕು. ಶರೀರವನ್ನು ಹಗುರವಾಗಿಡಲು ಉಪವಾಸ ಬೇಕು. ಉಪವಾಸ ಅಂದರೆ ಶಾರೀರಿಕ ವ್ಯವಸ್ಥೆಯನ್ನು ಸರಿಪಡಿಸುವುದು. ಈ ಅವಧಿಯಲ್ಲಿ ಅತಿಯಾದ ಆಹಾರ ಸೇವನೆ ಸಲ್ಲದು. ಸಾಧನೆ ಅವಧಿಯಲ್ಲಿ ಭಾರಿ ಪ್ರಮಾಣದ ಪ್ರಾಣವನ್ನು ಶರೀರದೊಳಕ್ಕೆ ಪ್ರವೇಶಿಸಲು ಬಿಡಬಾರದು ಎನ್ನುವುದೂ ಉದ್ದೇಶ. ಅಷ್ಟಾಂಗ ಯೋಗದಲ್ಲಿ ಹೇಳಿರುವ ಐದು ನಿಯಮಗಳಲ್ಲಿ 'ತಪ' ಕೂಡ ಒಂದು. ತಪ ಎಂದರೆ ಶರೀರಕ್ಕೆ ನೋವು ಕೊಡುವ ಮೂಲಕ ಅದನ್ನು ಬಿಸಿಯಾಗಿಡುವುದು. ನಮ್ಮ ಕರ್ಮದ ನಕಾರಾತ್ಮಕ ಶಕ್ತಿಗಳು ಪ್ರಭಾವ ಬೀರುವುದನ್ನು ತಡೆಯಲು ಈ ಶುದ್ಧೀಕರಣ ತಂತ್ರ. ನೋವಿನ ಒಂದು ಕುತೂಹಲದ ಸಂಗತಿ ಎಂದರೆ ಅದಕ್ಕೊಂದು ಮಿತಿ ಎನ್ನುವುದು. ಒಂದು ಹಂತದ ನಂತರ ನೋವಿನ ಅನುಭವ ಆಗುವುದೇ ಇಲ್ಲ.
ಅದೇ ಆನಂದಕ್ಕೆ ಮಿತಿಯೇ ಇಲ್ಲ. ಅದು ಅಪರಿಮಿತ. ಅದು ಬೆಳೆಯುತ್ತಲೇ ಹೋಗುತ್ತದೆ. ಭೂಲೋಕದಲ್ಲಿನ ಸಂತೃಪ್ತಿಗೆ ಮೂಲ ಎಂದರೆ ಆಹಾರ. ಜೀವಮಾನದುದ್ದಕ್ಕೂ ನಾವು ಉತ್ತಮ ಆಹಾರಕ್ಕಾಗಿ ಹುಡುಕಾಟ ನಡೆಸಿಯೇ ಇರುತ್ತೇವೆ. ನಾವು ಭೂಲೋಕದಲ್ಲೇ ಏಕೆ ಅಂಟಿಕೊಂಡಿರುತ್ತೇವೆ ಎನ್ನುವುದಕ್ಕೆ ಇದೂ ಪ್ರಮುಖ ಕಾರಣ. ಭೂಲೋಕದಲ್ಲಿರುವುದಕ್ಕಿಂತ ಉನ್ನತ ಸಂತೋಷವನ್ನು- ಭುವ, ಸ್ವಹ, ಮಹ, ಜನ, ತಪ, ಸತ್ಯ ಇವುಗಳಿಗೆ ಏರಬೇಕಿದ್ದರೆ ಮೂಲಭೂತವಾದ ತೃಪ್ತಿಯನ್ನು ನಾವು ವಶಪಡಿಸಿಕೊಳ್ಳಬೇಕು. ಆಹಾರದಿಂದ ಸಿಗುವ ತೃಪ್ತಿಗೆ ಮಿತಿ ಇರಬೇಕು. ನೋವನ್ನು ಅಸ್ತ್ರವಾಗಿ ಬಳಸಿಕೊಂಡು ಇದನ್ನು ಸಾಧಿಸಬಹುದು.
ಉಪವಾಸ ಎಂದರೆ ಕೆಲವು ಆಹಾರಗಳನ್ನು ಸೇವಿಸದಿರುವುದು ಎನ್ನುವ ಸಾಮಾನ್ಯ ಅರ್ಥವಿದೆ. ಧ್ಯಾನ ಅಶ್ರಮದಲ್ಲಿ ಸಾಧಕರು ಉಪವಾಸವನು ಪರಿಪೂರ್ಣ ವಿಧಾನದಲ್ಲಿ ಆಚರಿಸುತ್ತಾರೆ. ಇಲ್ಲಿ ಉಪವಾಸ ಎಂದರೆ ಕೇವಲ ಏನನ್ನೂ ತಿನ್ನದೇ ಇರುವುದಲ್ಲ. ಆಹಾರ ಶಕ್ತಿಗಾಗಿಯೇ ಹೊರತು ಅದೇ ಪ್ರಜ್ಞೆಯಲ್ಲ. ಗುರು ಬೋಧಿಸಿರುವ ಮಂತ್ರ, ತಂತ್ರ, ಧ್ಯಾನಗಳ ಮೂಲಕ ಇಷ್ಟದೇವರನ್ನು ಸ್ಮರಿಸುತ್ತ ಪ್ರಜ್ಞೆಯ ಹಂತವನ್ನು ದಾಟುವುದು. ಕರುಣೆ ಮತ್ತು ಸೇವೆ ಕೂಡ ಒಂದರ್ಥದಲ್ಲಿ ಉಪವಾಸದ ಭಾಗಗಳೇ.
ಭೌತಿಕ ಪ್ರಜ್ಞೆಯಿಂದ ನಮ್ಮನ್ನು ನಾವು ಕಳಚಿಕೊಂಡಾಗ ಮಾತ್ರ ಇಂಥ ಉಪವಾಸ ಅಥವಾ ಯಾವುದೇ ವಿಧಾನಗಳು ಫಲ ನೀಡಬಲ್ಲವು. ನಮ್ಮ ಔನ್ನತ್ಯಕ್ಕೆ ಕಾರಣವಾಗಬಲ್ಲವು. ಯೋಗ ವಿಧಾನಗಳು ಅಥವಾ ಸನಾತನ ಕ್ರಿಯೆಯಲ್ಲಿ ಹೇಳಿರುವ ವಿಧಾನಗಳ ಮೂಲಕ ಉಪವಾಸದ ಆಚರಣೆ ನಿರ್ದಿಷ್ಟ ಫಲ ನೀಡಬಲ್ಲವು.
- ಯೋಗಿ ಅಶ್ವಿನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

