ಶಿವ ಪುರಾಣ

ಅಷ್ಟಾದಶ ಪುರಾಣಗಳಲ್ಲಿನ ಶಿವಪುರಾಣವನ್ನು ಮಹರ್ಷಿ ವೇದವ್ಯಾಸರು ರಚಿಸಿದರು. ಇದರಲ್ಲಿ ಸೃಷ್ಟಿಯ ಮೂಲ, ಶಿವ ಹಾಗೂ ಶಿವ ತತ್ವದ ಸಂಪೂರ್ಣ ವರ್ಣನೆ ಇದೆ. ಆ ದೇವಾದಿ ದೇವನಾದ ಮಹಾದೇವ ನಿರಾಕಾರನೆನಿಸಿ ಲಿಂಗರೂಪಿಯಾದ ವಿವರಣೆ ಇದರಲ್ಲಿದೆ.
ಈ ಪುರಾಣದಲ್ಲಿ ಶಿವನ ಎಡ ಪಾರ್ಶ್ವಕ್ಕೆ ಪಾರ್ವತಿಯನ್ನೂ, ಶಿವನ ಶಿರದಲ್ಲಿ ಗಂಗೆಯನ್ನೂ, ಮುಡಿಯಲ್ಲಿ ಚಂದ್ರನನ್ನೂ, ಕುತ್ತಿಗೆ- ತೋಳುಗಳಲ್ಲಿ ಸರ್ಪ ಇರುವುದನ್ನೂ ವರ್ಣಿಸಲಾಗಿದೆ.
ಆ ಪರಶಿವನನ್ನು ಈ ವಿಶ್ವದ ಶಕ್ತಿಯ ಮೂಲವೆಂದು ವರ್ಣಿಸಲಾಗಿದೆ. ಶಿವನ ವಿವಿಧ ಅವತಾರಗಳಾದ ರುದ್ರ, ನೀಲಕಂಠ, ಕಾಲಭೈರವ, ನಟರಾಜ, ದಕ್ಷಿಣಾಮೂರ್ತಿ, ವೀರಭದ್ರ ಇತ್ಯಾದಿ ಲೀಲಾ ಕಾರ್ಯಗಳ ಅವತಾರಗಳ ಚಿತ್ರಣವಿದೆ. ಗಣೇಶ ಜನನದ ಹಿನ್ನೆಲೆ, ಮತ್ತು ಕಾರ್ತಿಕೇಯ ಅಥವಾ ಸುಬ್ರಮಣ್ಯ, ಧರ್ಮ ಶಾಸ್ತ (ಅಯ್ಯಪ್ಪ) ಜನನದ ಉದ್ದೇಶಗಳೂ ಶಿವಪುರಾಣದಲ್ಲಿ ವರ್ಣಿತ.
ಭಗವಂತನಾದ ನರಸಿಂಹ, ಜನಾರ್ಧನ, ರಾಜ ಅಂಬರೀಶ ಹಾಗೂ ಗಾಯತ್ರೀದೇವಿಯವರ ಅವತಾರ ಉದ್ದೇಶಗಳೂ ವರ್ಣನೆಗಳೂ ಶಿವಪುರಾಣದಲ್ಲಿ ಓದಲು ಸಿಗುತ್ತದೆ. ಇದರಲ್ಲಿ ಸ್ವಯಂ ಮಹಾದೇವನಿಂದಲೇ ಅಧ್ಯಾತ್ಮ ಸಾಧನ ಮಾರ್ಗ, ದೈವತ್ವ ಸಾಧನೆಯ ಸೋಪಾನಗಳು ಸವಿಸ್ತಾರವಾಗಿವೆ. ಇದೊಂದು ಅದ್ವಿತೀಯವಾದ ಪುರಾಣ. ಮೋಕ್ಷ ಮಾರ್ಗ ಸಾಧಕರಿಗೆ ದಾರಿದೀಪವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


