ಶನಿ ಮಹಾತ್ಮೆ

ನಭೋಮಂಡಲದಲ್ಲಿ ಸೂರ್ಯನು ಎರಕ ಹೊಯ್ಯುವ ನಭೋಪ್ರಭಾವದ ವ್ಯಾಪ್ತಿಗೆ ಸೌರಮಂಡಲ ಎಂದು ಕರೆಯುತ್ತಾರೆ. ಸೂರ್ಯನಿಂದ 5,900 ಮಿಲಿಯನ್ ಕಿಲೋಮೀಟರ್‌ಗಳ ದೂರದಲ್ಲಿ, ಸೌರಮಂಡಲದಲ್ಲಿಯೇ ಕಟ್ಟಕಡೆಯ ದೂರಗಾಮಿ ಫ್ಲೂಟೋ ಗ್ರಹವಿದ್ದು, ಈ ಅಂತರದಲ್ಲಿ ಪೃಥ್ವಿ ಮತ್ತು ಚಂದ್ರ ಸೇರಿದಂತೆ 11 ಗ್ರಹಗಳು, ಸುಮಾರು 63ರಿಂದ 64 ಉಪಗ್ರಹಗಳು, ಇವುಗಳನ್ನು ಹೊಂದಿಕೊಂಡು ಲಕ್ಷಾನುಗಟ್ಟಲೆ ಉಲ್ಕಾಶಿಲೆ ಧೂಮಕೇತುಗಳು, ಕ್ಷುದ್ರ ಗ್ರಹಗಳು ಇರುತ್ತವೆ.
ಸೂರ್ಯನಿಂದ 1427 ಮಿಲಿಯನ್ ಕಿ.ಮೀ. ದೂರದಲ್ಲಿ 14,3000 ಕಿಲೋಮೀಟರ್‌ಗಳ ಸುತ್ತಳತೆಯುಳ್ಳ ಎರಡನೇ ಅತಿ ದೊಡ್ಡದಾದ ಶನಿಗ್ರಹವಿದೆ.
ಶನಿಗ್ರಹ ವಿಶ್ವದ ಪುರಾತನ ಶಾಸ್ತ್ರಗಳಲ್ಲಿಯೂ ಮಹತ್ತರ ಸ್ಥಾನ ಪಡೆದಿದೆ. ಶನಿಗ್ರಹ ಮತ್ತು ನಕ್ಷತ್ರ ಮಂಡಲದ ಮಧ್ಯಭಾಗದಲ್ಲಿ ಯುರೇನೆಸ್, (1781), ನೆಪ್ಚೂನ್ (1848) ಮತ್ತು ಪ್ಲೂಟೋ (1930) ದೂರಗಾಮಿ ಗ್ರಹಗಳನ್ನು ಗುರುತಿಸಲಾಗಿದೆ.
ಇಹಲೋಕದ ದೇವಗ್ರಹದಿಂದ (ಕ್ರಿಯೆಟರ್ ಬ್ರಹ್ಮ) ಸೃಷ್ಟಿಗೊಂಡ ಆತ್ಮವು (ಸೋಲ್) ತಾರಾಮಂಡಲದ ನಿರ್ದಿಷ್ಟ ತಾರೆಗಳಿಂದ ನಭೋಮಂಡಲದತ್ತ ಎರಕಹೋಯ್ತು, ಎಲ್ಲಾ ಗ್ರಹಗಳ ನಭೋಪ್ರಭಾವಕ್ಕೆ ಒಳಪಟ್ಟು ಪೃಥ್ವಿಯನ್ನು ಸೇರುತ್ತದೆ. ತಾರಾ ಲೋಕದಿಂದ ಎರಕ ಹೊಯ್ದು ಆತ್ಮವು ಪ್ರಥಮವಾಗಿ ಶನಿ ಗ್ರಹದ ಮೇಲ್ಮೈ ಮೇಲೆ ಸ್ಥಿರಪಟ್ಟು ಜೀವಾಮೃತ ಕಣಗಳನ್ನು (ಹಿಸ್) ಪಡೆಯುತ್ತದೆ. ಇದರಿಂದ ಇದರಿಂದ ಸೌರಮಂಡಲಕ್ಕೆ ಆಗಲಿರುವ ಆತ್ಮಕ್ಕೆ ಶನಿಗ್ರಹವು ಪ್ರಥಮ ಮಹಾದ್ವಾರವಾಗಿದ್ದು, ಇಹಲೋಕಕ್ಕೆ ತೆರಳುವಾಗ ಶನಿಗ್ರಹ ಅಂತಿಮ ಮಹಾದ್ವಾರವಾಗಿರುತ್ತದೆ.
ಶನಿಗ್ರಹದ ಸುತ್ತಲೂ 16 ಉಪಗ್ರಹಗಳಿದ್ದು (ಮೂನ್ಸ್) ಸೌರಗ್ರಹ (ಟೈಟಾನ್) ಎಂಬ ಉಪಗ್ರಹ ಆತ್ಮಕ್ಕೆ ದಿವ್ಯ ಶಕ್ತಿ ತುಂಬುವುದರಲ್ಲಿ ಮಹತ್ತರ ಪಾತ್ರ ವಹಿಸಲಿದೆ. ಆತ್ಮಕ್ಕೆ ದಿವ್ಯ ಶಕ್ತಿಯನ್ನು ನೀಡುವಂತಹ ಜೀವಾಮೃತ ಕಣಗಳನ್ನು ಉತ್ಪಾದಿಸಿ ಆತ್ಮಕ್ಕೆ ಪೂರೈಸುತ್ತಿರುತ್ತದೆ.
ನಂತರ ಆತ್ಮ ಅಷ್ಟಾಂಗ ಸೌರವ್ಯೂಹವನ್ನು ಪ್ರವೇಶಿಸಿ, ಪ್ರಥಮವಾಗಿ ಗುರುಗ್ರಹದಿಂದ ಜ್ಞಾನ, ಬುಧ ಗ್ರಹದಿಂದ ಆಯತನಗಳು, ಶುಕ್ರ ಗ್ರಹದಿಂದ ಐಶ್ವರ್ಯ, ಮಂಗಳ ಗ್ರಹದಿಂದ ಶಕ್ತಿ ಮತ್ತು ಬಲ, ಚಂದ್ರ ಗ್ರಹಗಳಿಂದ ತೇಜಸ್ಸು ಮತ್ತು ಪೃಥ್ವಿಯಿಂದ ವೀರ್ಯವನ್ನು ಪಡೆಯುತ್ತದೆ.
ತತ್ವಜ್ಞಾನಿ ಫ್ಲೂಟೋವಿನ ಶಿಷ್ಯ ಅರಿಸ್ಟಾಟಲ್ ಹೇಳಿರುವಂತೆ 'ದೈವಪ್ರೇರಣೆಯ ನಿಗೂಢ ಶಕ್ತಿಗಳು ದೇವಗ್ರಹದಿಂದ ತಾರಾಲೋಕದ ಮುಖಾಂತರ ಸೌರಮಂಡಲಕ್ಕೆ ಆಗಮಿಸಿ ಪೃಥ್ವಿಯನ್ನು ಸೇರುತ್ತವೆ' ಎಂದಿದ್ದಾರೆ. ಇದರಿಂದ ಶನಿಗ್ರಹದ ನಭೋಪ್ರಭಾವಗಳಿಗೂ ತಾರಾಮಂಡಲದ ತಾರೆಗಳ ಭೌತಿಕ ಗುಣಗಳಿಗೂ ಅದಿನಾಭಾಜ್ಯ ಸಂಬಂಧಗಳಿರುವುದು ಕಠೋರ ಸತ್ಯ ಮಾಹಿತಿಗಾಗಿ ಸಂಪರ್ಕಿಸಿ. ಮೊ: 9945605618.
-ವಿ. ನಾರಾಯಣಶೆಟ್ಟಿ ಪದ್ಮಸಾಲಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


