ವೃದ್ಧಾಪ್ಯವನ್ನು ಮುಂದೂಡೋಣ
ಅಗ್ನಿ ಅಥವಾ ಬೆಂಕಿ ಎನ್ನುವುದು ಋಗ್ವೇದದ ಮೊದಲ ಅಕ್ಷರ. ಆಯುರ್ವೇದದ ಪ್ರಕಾರ ಶರೀರದಲ್ಲಿರುವ ಅನೇಕ ಅಗ್ನಿಗಳು ಆಹಾರವನ್ನು ಸುಡುತ್ತ ಕಾಯಕ್ಕೆ ಅಗತ್ಯವಿರುವ ಶಕ್ತಿ ಒದಗಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿರುತ್ತವೆ. ಉದಾಹರಣೆಗೆ ಹೇಳಬೇಕೆಂದರೆ, ಆಹಾರವನ್ನು ಶಕ್ತಿಯಾಗಿ ಪರಿವರ್ತಿಸುವುದು. ಈ ಪ್ರಕ್ರಿಯೆಯಲ್ಲಿ ಅನೇಕ ಆಂತರಿಕ ರಾಸಾಯನಿಕ ಕ್ರಿಯೆಗಳು ನಡೆಯುತ್ತವೆ. ಅದರಿಂದ ದೇಹದ ಅಂಗಾಂಗಳಿಗೆ ಹಾನಿಯೂ ಆಗುತ್ತಿರುತ್ತದೆ. ಅದರ ಪರಿಣಾಮವೇ ವಯಸ್ಸಾಗುವಿಕೆ. ಹೆಚ್ಚಿನ ಆಹಾರ ಸೇವಿಸಿದಷ್ಟೂ ಅದನ್ನು ಶಕ್ತಿಯಾಗಿ ಪರಿವರ್ತಿಸಲು ಹೆಚ್ಚಿನ ಸಂಪನ್ಮೂಲ ಅಂದರೆ ಅಗ್ನಿ ಬೇಕಾಗುತ್ತದೆ. ವೇಗವಾಗಿ ಉಸಿರಾಡುವುದು, ಲೈಂಗಿಕ ಕ್ರಿಯೆ, ಸಿಟ್ಟು, ಬಾಂಧವ್ಯ, ದುಃಖ, ಹಿಂಸೆ ಮೊದಲಾದ ಕ್ರಿಯೆ, ಆಲೋಚನೆಗಳನ್ನು ಭಾವನೆಗಳನ್ನಾಗಿ ಪರಿವರ್ತಿಸುವ ಕ್ರಿಯೆಗಳೂ ನಮ್ಮನ್ನು ಬೇಗ ವೃದ್ಧಾಪ್ಯದತ್ತ ತಳ್ಳುತ್ತವೆ. ಹಾಗಾದರೆ ಅಗ್ನಿಯನ್ನು ಶಾಂತಗೊಳಿಸಿ, ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುವುದು ಸಾಧ್ಯವಿಲ್ಲವೆ? ಅದಕ್ಕೆ ಉತ್ತರ ಎಂದರೆ ವೇದಕಾಲದಲ್ಲಿ ಮಾಡುತ್ತಿದ್ದ ಹವನಗಳು. ಅದನ್ನು ನಮ್ಮ ಧ್ಯಾನ್ ಆಶ್ರಮದಲ್ಲಿ ಈಗಲೂ ಮಾಡಲಾಗುತ್ತದೆ.
ಅಗ್ನಿ ಎಂದಿಗೂ ಕಲುಷಿತಗೊಳಿಸಲು ಆಗದ್ದು. ಹಾಗೆಯೇ ಅಗ್ನಿಯೊಳಕ್ಕೆ ಏನೇ ಹೋದರೂ ಅದು ಸ್ವಚ್ಛವಾಗುತ್ತದೆ. ಹವನದಲ್ಲಿ ಬಳಕೆಯಾಗುವುದು ಇದೇ ತಂತ್ರ. ಹಿಂದೆ ವಾತಾವರಣ ಶುದ್ಧೀಕರಣಕ್ಕಾಗಿ ಹವನಗಳನ್ನು ಮಾಡುತ್ತಿದ್ದರು. ಅದಕ್ಕೆ ಬಳಸುವ ಸಾಮಾಗ್ರಿ ಮತ್ತು ಸಮೀಧಗಳು ಸಕಾರಾತ್ಮಕ ಅಲೆಗಳನ್ನು ಸೃಷ್ಟಿಸುತ್ತಿದ್ದವು. ಅದರಿಂದಾಗಿ ವಾತಾವರಣದಲ್ಲಿನ ಕೊಳೆ ಮತ್ತು ನಕಾರಾತ್ಮಕ ಶಕ್ತಿಗಳು ನಾಶವಾಗುತ್ತಿದ್ದವು. ಇವತ್ತಿಗೂ ಗುಹೆಗಳಲ್ಲಿ ವಾಸಮಾಡುವ ಸಾಧುಗಳು ನಿರಂತರವಾಗಿ ಬೆಂಕಿಯನ್ನು ಬಳಸುತ್ತಾರೆ (ಧುನಿ). ಆದರೆ, ಯಾವುದಾದರೂ ಸಾಧುವಿಗೆ ಶ್ವಾಸಕೋಶ ಕ್ಯಾನ್ಸರ್ ಅಥವಾ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಬಂದಿದ್ದನ್ನು ನೀವು ಕೇಳಿದ್ದೀರಾ? ಸಾಧುಗಳ ಆರೋಗ್ಯಕ್ಕೆ ಅವರು ಗುಹೆಯಲ್ಲಿ ನಿರಂತರವಾಗಿ ಬಳಸುವ ಅಗ್ನಿಯೇ ಕಾರಣ.
ಬೇಸರ ಎಂದರೆ ಇವತ್ತು ಹವನಗಳನ್ನು ಪರಿಶುದ್ಧ ರೀತಿಯಲ್ಲಿ ಮಾಡುತ್ತಿಲ್ಲ. ಹವನದ ನಿಜವಾದ ಪರಿಣಾಮವನ್ನು ಅನುಭವಿಸಬೇಕು ಎಂದಾದರೆ ಅದಕ್ಕೆ ಬಳಸುವ ಸಾಮಾಗ್ರಿಗಳು, ಸಮೀಧ ಮತ್ತು ಘೃತ (ಆಕಳ ತುಪ್ಪ) ಪರಿಶುದ್ಧವಾಗಿರಬೇಕು. ಹವನದಲ್ಲಿ ಭಾಗಿಯಾಗುವವರ ಮನಸ್ಸು ಸ್ವಚ್ಛವಾಗಿರಬೇಕು. ಮಂತ್ರೋಚ್ಛಾರ ದಲ್ಲೂ ದೋಷ ಇರಬಾರದು. ಇವೆಲ್ಲವೂ ಒಟ್ಟಾಗಿ ಸೇರಿ ಒಳ್ಳೆಯ ಪರಿಣಾಮವನ್ನು ಬೀರುತ್ತವೆ.
- ಯೋಗಿ ಅಶ್ವಿನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

