ಭಕ್ತಿ-ಜ್ಯೋತಿಷ್ಯ

ದಿಢೀರ್ ದುಡ್ಡು!

ದಿಢೀರ್ ದುಡ್ಡು!
Published On :

ಜ್ಯೋತಿಷ ಶಾಸ್ತ್ರಾನುಸಾರ ಯಾವುದೇ ವ್ಯಕ್ತಿಯ ಜನ್ಮಕುಂಡಲಿಯನ್ನು ಕೂಲಂಕುಷವಾಗಿ ಪರಿಶೀಲಿಸಿ ಅವರಿಗೆ ಯಾವುದಾದರೊಂದು ರೂಪವಾಗಿ ಆಕಸ್ಮಿಕ ಧನಪ್ರಾಪ್ತಿ ಯೋಗವಿದೆಯೇ ಎಂದು ತಿಳಿಯಬಹುದು
ಜಾತಕದ ದ್ವಿತೀಯ ಭಾವದಿಂದ ಧನ, ಪಂಚಮ ಭಾವದಿಂದ ಆಕಸ್ಮಿಕ ಲಾಭ, ನವಮ ಭಾವದಿಂದ ಜಾತಕನ ಭಾಗ್ಯ, ಏಕಾದಶ ಭಾವದಿಂದ ಯಾವ ಮೂಲದಿಂದ ಲಾಭಪ್ರಾಪ್ತಿ ಎಂಬ ವಿಚಾರಗಳನ್ನು ತುಲನಾತ್ಮಕವಾಗಿ ಹಾಗೂ ಸೂಕ್ಷ್ಮವಾಗಿ ಪರಿಶೀಲಿಸಿ ಹೇಳಬಹುದು.
ಮಹಾಕವಿ ಕಾಳಿದಾಸ ವಿರಚಿತ 'ಉತ್ತರ ಕಾಲಾಮೃತ'ದಲ್ಲಿ 'ವಕ್ರೀ ಸ್ವೇಚ್ಛಬಲಃ' ಎಂದು ಹೇಳಿರುವಂತೆ, ಯಾವುದೇ ಗ್ರಹಗಳು ವಕ್ರೀ ಆಗಿದ್ದಲ್ಲಿ ಆ ಗ್ರಹಬಲ ಉಚ್ಛಕ್ಕೆ ಸಮಾನವೆಂದು ತಿಳಿಯಬೇಕು.
ಅಷ್ಟಮ ಭಾವ ಧನದ ಸ್ಥಿರತೆಯನ್ನು ಸೂಚಿಸುತ್ತದೆ. ಆದ್ದರಿಂದ ಇಲ್ಲಿ ಅಷ್ಟಮಭಾವ, ಅಷ್ಟಮೇಶ, ಅಷ್ಟಮೇಶನ ಕಾರಕತ್ವಗಳನ್ನು ತಿಳಿದುಕೊಳ್ಳುವುದರ ಜೊತೆಗೆ ಆ ಭಾವೇಶನ ವಕ್ರತ್ವ, ಉಚ್ಚತ್ವಗಳನ್ನು ಸ್ಪಷ್ಟವಾಗಿ ಅರಿಯಬೇಕಾದ್ದು ಅವಶ್ಯಕ. ಆಕಸ್ಮಿಕ ಧನಪ್ರಾಪ್ತಿ ಯೋಗಕ್ಕೆ ಕೆಳಗೆ ಸೂಚಿಸಿರುವ ಗ್ರಹ ಯೋಗಗಳನ್ನು ಪರಿಗಣಿಸಬೇಕು.

  •   ಪಂಚಮ ಮತ್ತು ಅಷ್ಟಮ ಭಾವಗಳು ಅಕಸ್ಮಾತ್ ಧನಪ್ರಾಪ್ತಿಯನ್ನು ಸೂಚಿಸುತ್ತವೆಯಾದ್ದರಿಂದ ಈ ಭಾವಗಳ ಪರಸ್ಪರ ಸಂಬಂಧ, ಯುತಿ, ದೃಷ್ಟಿ, ಭಾವ ಪರಿವರ್ತನೆ, ನಕ್ಷತ್ರ ಪರಿವರ್ತನೆಯಂಥ ವಿಚಾರಗಳು ಜಾತಕದಲ್ಲಿ ಕಂಡುಬಂದರೆ ಆಕಸ್ಮಿಕ ಧನಯೋಗವನ್ನು ಸೂಚಿಸುವುದು.
  •     ಕುಂಡಲಿಯಲ್ಲಿ ನವಗ್ರಹಗಳು 1,2,5, 8,9, 11 ಈ ಭಾವಗಳಲ್ಲಿ ಸ್ಥಿತರಾಗಿರುವುದು ಹಾಗೂ ಯಾವುದೇ ಸ್ಥಾನದಲ್ಲಿ ಎರಡು ಗ್ರಹಕ್ಕಿಂತ ಹೆಚ್ಚಿನ ಗ್ರಹ ಇಲ್ಲದಿರುವುದು.
  • ಸೂರ್ಯ- ಚಂದ್ರರ ಯುತಿ ಜನ್ಮಕುಂಡಲಿಯಲ್ಲಿ ಉಂಟಾಗಿರುವುದು ಹಾಗೂ ಸೂರ್ಯ ತನ್ನ ಮಿತ್ರ ರಾಶಿಯಲ್ಲೂ, ತನ್ನ ಉಚ್ಚ ಸ್ಥಾನದಲ್ಲಿ ಇರುವುದಾದರೆ ಅಂಥ ವ್ಯಕ್ತಿಗಳಿಗೆ ಅಕಸ್ಮಾತ್ ಧನಪ್ರಾಪ್ತಿ ಎಂದು ಹೇಳುವುದು.
  •    ರವಿಯು ಚಂದ್ರನಿಂದ ಉಪಚಯವೆನಿಸಿದ 3, 6, 8, 11 ಈ ಸ್ಥಾನಗಳಲ್ಲಿ ಇರುವುದು ಹಾಗೂ ಧನೇಶನು ಕೇಂದ್ರದಲ್ಲಿ ಇದ್ದಲ್ಲಿ ವಿಶೇಷ ಧನಪ್ರಾಪ್ತಿಯಾಗಬಹುದು.
  •     ಗುರು, ಚಂದ್ರರ ಯುತಿಯು ಕುಂಡಲಿಯ ಧನಭಾವ 2ರಲ್ಲಿ, ಸುಖಭಾವ 4ರಲ್ಲಿ, ಪೂರ್ವ ಪುಣ್ಯಭಾವ 5ರಲ್ಲಿ ಹಾಗೂ ಭಾಗ್ಯಭಾವ 9ರಲ್ಲಿ ಇರುವ ಜಾತಕರಿಗೆ ಆಕಸ್ಮಿಕ ಧನಪ್ರಾಪ್ತಿಯೋಗವನ್ನು ಹೇಳಬಹುದಾಗಿರುತ್ತದೆ.
  •     ಅಷ್ಟಮೇಶನ ಸಂಬಂಧ ಪಂಚಮ ಭಾವಾದಿ ಪತಿ ಜೊತೆ ಇದ್ದಾಗಲೂ, ಲಗ್ನೇಶನು ಧನ ಭಾವದಲ್ಲಿ ಇದ್ದು ಅಂತಹ ಧನೇಶ ಮತ್ತು ಅಷ್ಟಮೇಶನ ಸಂಬಂಧವಿದ್ದಾಗಲೂ, ಈ ಎಲ್ಲ ಯೋಗಗಳಿಗೆ ಧನಕಾರಕ ಗ್ರಹನಾದ ಗುರುವಿನ ದೃಷ್ಟಿ ಇದ್ದಾಗಲೂ ಅಕಸ್ಮಾತ್ ಧನಯೋಗ ಉಂಟಾಗುತ್ತದೆ.
  •    ಆಕಸ್ಮಿಕ ಧನಪ್ರಾಪ್ತಿ ಯೋಗವು ಯಾವ ಕ್ಷೇತ್ರದಿಂದ ಉಂಟಾಗುತ್ತದೆ ಎಂದು ತಿಳಿಯಲು ಕುಂಡಲಿಯಲ್ಲಿ ಅಷ್ಟಮೇಶನ ಸಂಬಂಧ ಗುರುವಿನೊಡನೆ ಇದ್ದಲ್ಲಿ ವ್ಯಾಪಾರ, ವ್ಯವಸಾಯದಿಂದಲೂ ಕಲಾಕ್ಷೇತ್ರದಿಂದಲೂ ಧನಲಾಭವಾಗುತ್ತದೆ.
  •     ಬಲಿಷ್ಠನಾದ ಧನೇಶನ ದಶಾ- ಅಂತರ ದಶಾ ಕಾಲದಲ್ಲಿ.
  •     ಲಗ್ನೇಶ- ಧನೇಶನ ದಶಾ- ಅಂತರದಶಾ ಕಾಲದಲ್ಲಿ.
  •     ಲಗ್ನೇಶ- ಅಷ್ಟಮೇಶನ ದಶಾ- ಅಂತರದಶಾ ಕಾಲದಲ್ಲಿ.
  •    ವಕ್ರಿಯಾಗಿರುವ, ಸ್ವ ಹಾಗೂ ಉಚ್ಚನಾಗಿರುವ ಅಷ್ಟಮೇಶನ ದಶಾ- ಅಂತರದಶಾ ಕಾಲದಲ್ಲಿ.
ವಿ. ಕೇಶವಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.