ದೇಹ ಪಂಚಾಂಗ
ದೇಹಕ್ಕೂ, ನಕ್ಷತ್ರಗಳಿಗೂ ವಿಶೇಷ ಸಂಬಂಧ. ವಾಮನ ಪುರಾಣದಲ್ಲಿ ನಾರದ - ಪುಲಸ್ತಪು ಲಸ್ತ್ಯ ಮುನಿ ಸಂವಾದದಲ್ಲಿ ನಾರದರು, 'ಲಕ್ಷ್ಮೀಪತಿ ವಾಸುದೇವನಾದ ಮಹಾವಿಷ್ಣುವು ಈ ಬ್ರಹ್ಮಾಂಡದ ಸೃಷ್ಟಿಕರ್ತನೆನೆಸಿ, ಇಪ್ಪತ್ತೇಳು ನಕ್ಷತ್ರಗಳ ಮೂಲಕ ಶರೀರದಲ್ಲಿ ಸ್ಥಿತನಾಗಿದ್ದಾನೆಂದು ಕೇಳಿದ್ದೇನೆ. ದಯಮಾಡಿ ಅದನ್ನು ವಿವರವಾಗಿ ತಿಳಿಸಿಕೊಡಬೇಕು' ಎಂದು ಪ್ರಾರ್ಥಿಸುತ್ತಾರೆ.
ಆಗ ಮಹಾಜ್ಞಾನಿಗಳಾದ ಪುಲಸ್ತ್ಯರು ನೀಡಿದ ವಿವರಣೆ ಹೀಗಿದೆ. ಇದು ಕಾಲಪುರುಷನಾದ ಮಹಾವಿಷ್ಣುವಿನ ಪಾದಗಳಿಂದ ಪ್ರಾರಂಭವಾಗುತ್ತದೆ.
ಮೂಲ ನಕ್ಷತ್ರ ಮಹಾವಿಷ್ಣುವಿನ ಎರಡು ಪಾದಗಳನ್ನು ಪ್ರತಿನಿಧಿಸುತ್ತದೆ. ರೋಹಿಣಿ ಎರಡು ಕಾಲುಗಳನ್ನು, ಅಶ್ವಿನಿ ಎರಡು ಮಂಡಿಗಳನ್ನು. ಪೂರ್ವಾಷಾಢ ಮತ್ತು ಉತ್ತರಾಷಾಢ ಇವು ವಿಷ್ಣುವಿನ ತೊಡೆಗಳು. ಪುಬ್ಬ ಮತ್ತು ಉತ್ತರಾ ಜನನೇಂದ್ರಿಯಗಳನ್ನು, ಕೃತ್ತಿಕಾ ಸೊಂಟವನ್ನು ಪ್ರತಿನಿಧಿಸುತ್ತದೆ.
ಪೂರ್ವಾಭಾದ್ರ ಮತ್ತು ಉತ್ತರಾಭಾದ್ರ ಎರಡು ಪಕ್ಕೆ ಭಾಗಗಳು, ರೇವತಿ ಎರಡು ಕಂಕುಳ ಭಾಗ, ಅನುರಾಧ ಹೃದಯ, ಧನಿಷ್ಟ ಬೆನ್ನು. ವಿಶಾಖ ಎರಡು ತೋಳುಗಳು, ಹಸ್ತ ನಕ್ಷತ್ರ ಎರಡು ಹಸ್ತಗಳನ್ನು ಮತ್ತು ಪುನರ್ವಸು ಬೆರಳುಗಳನ್ನು, ಆಶ್ಲೇಷ ಉಗುರುಗಳನ್ನು ಪ್ರತಿನಿಧಿಸುತ್ತದೆ.
ಜ್ಯೇಷ್ಠ ನಕ್ಷತ್ರ ನಾಲಿಗೆಯನ್ನೂ, ಶ್ರವಣ ಎರಡು ಕಿವಿಗಳನ್ನೂ, ಪುಷ್ಯ ಬಾಯಿಯನ್ನೂ, ಸ್ವಾತಿ ಹಲ್ಲುಗಳನ್ನೂ ಸೂಚಿಸುತ್ತದೆ. ಶತಭಿಷಾ ಎರಡು ಕೆನ್ನೆಗಳು, ಮಖ ನಕ್ಷತ್ರ ಮೂಗು, ಮೃಗಶಿರಾ ಎರಡು ಕಣ್ಣುಗಳು. ಚಿತ್ತಾ ನಕ್ಷತ್ರ ಹಣೆ, ಭರಣಿ ಶಿರಸ್ಸು, ಆರಿದ್ರಾ ಕೇಶಗಳು, ಇವು ಮಹಾವಿಷ್ಣುವಿನ ನಕ್ಷತ್ರ ಶರೀರವಾಗಿದೆ. ಈ ರೀತಿಯಾಗಿ ಪುಲಸ್ತ್ಯ ಮುನಿಗಳು ನಾರದರಿಗೆ ಮಹಾವಿಷ್ಣುವಿನ ನಕ್ಷತ್ರ ಶರೀರ ವಿವರಣೆಯನ್ನು ನೀಡಿದರು.
-ವಿ. ಕೇಶವಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

