ಮುದ್ರಾ ಮಾಂತ್ರಿಕ

ಇಂದಿನ ವಿಶ್ರಾಂತ ರಹಿತ ಜೀವನದಿಂದ ಆಗುತ್ತಿರುವ ಮಾನಸಿಕ ಖಿನ್ನತೆ, ಒತ್ತಡ ಹಾಗೂ ಉದ್ವೇಗಗಳನ್ನು ನಿಯಂತ್ರಿಸಲು ಜನರು ಯೋಗ, ಧ್ಯಾನ, ಪ್ರಾಣಾಯಾಮ ಇನ್ನಿತರ ವಿಧಾನಗಳ ಮೊರೆ ಹೋಗುತ್ತಾರೆ. ಜನರಿಗೆ ಈ ರೀತಿಯ ಹಲವು ವಿಷಯಗಳನ್ನು ಹೇಳಿಕೊಡುವ ಹೊಸಹೊಸ ವಿಧಾನಗಳು ಬರುತ್ತಲೇ ಇವೆ. ಅದರಂತೆ ಇಲ್ಲೊಂದು ವಿಶೇಷವಾದ ಧ್ಯಾನ ವಿಧಾನವಿದೆ. ಅದರ ಹೆಸರು ಮುದ್ರಾ ಹೀಲಿಂಗ್.
ಯೋಗ ವಿಧಾನದಲ್ಲಿ ಮುದ್ರೆಗಳ ಪ್ರಾಮುಖ್ಯತೆ ಅತ್ಯಂತ ಮಹತ್ವದ್ದು. ಹಲವಾರು ಮುದ್ರೆಗಳನ್ನು ಚಿಕಿತ್ಸೆ ಉದ್ದೇಶದಿಂದ ಬಳಸಲಾಗುತ್ತದೆ. ಇದನ್ನೇ ಆಧಾರವಾಗಿಟ್ಟುಕೊಂಟು ಮುದ್ರಾ ಹೀಲಿಂಗ್‌ನಲ್ಲಿ ಹಲವಾರು ರೀತಿಯ ಚಿಕಿತ್ಸೆ ನೀಡಲಾಗುತ್ತದೆ. ಇದರಿಂದ ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುವುದಷ್ಟೇ ಅಲ್ಲ, ಹಲವಾರು ದೈಹಿಕ ವ್ಯಾಧಿಗಳನ್ನೂ ನಿವಾರಿಸಬಹುದು. ಮುಖ್ಯವಾಗಿ, ಪಂಚಭೂತಗಳನ್ನು ಆಧಾರವಾಗಿಟ್ಟುಕೊಂಡು ಮನಸ್ಸಿನ ಸುಪ್ತಶಕ್ತಿಯನ್ನು ಜಾಗೃತಗೊಳಿಸುವ ಚಿಕಿತ್ಸಾ ವಿಧಾನವಿದು.
ಬಾಚ್ ರೆಮೆಡಿ
ಮುದ್ರಾ ಹೀಲಿಂಗ್ ಜೊತೆಗೆ ಬಾಚ್ ಫ್ಲವರ್ ರೆಮಿಡಿ ಎಂಬ ಮತ್ತೊಂದು ಚಿಕಿತ್ಸಾ ವಿಧಾನವನ್ನೂ ನೀಡಲಾಗುತ್ತದೆ. ಡಾ. ಎಡ್ವರ್ಡ್ ಎನ್ನುವವರು ಹಲವಾರು ವರ್ಷಗಳ ಹಿಂದೆ ಈ ಚಿಕಿತ್ಸಾ ವಿಧಾನವನ್ನು ಕಂಡುಕೊಂಡಿದ್ದರು. ಬಾಚ್ ರೆಮೆಡಿಯಲ್ಲಿ ಹಲವಾರು ಸಂಶೋಧನೆಗಳನ್ನು ಕೈಗೊಂಡಿದ್ದ ಅವರು, ಒಟ್ಟು 38 ರೀತಿಯ ಚಿಕಿತ್ಸಾ ವಿಧಾನಗಳನ್ನು ಕಂಡುಕೊಂಡಿದ್ದರು.
ಮನುಷ್ಯನ ದೇಹದ ಕಂಪನಗಳನ್ನು ವಿಸ್ತರಿಸುವ ಮೂಲಕ, ಆತನಲ್ಲಿನ ಚೈತನ್ಯವನ್ನು ಹೆಚ್ಚಿಸಿ, ವಿಷಾದ, ನೋವುಗಳನ್ನು ದೂರ ಮಾಡಿ, ದೈಹಿಕ ಅಸ್ವಾಸ್ಥ್ಯವನ್ನು ನಿವಾರಿಸಿ, ಉಲ್ಲಾಸಭರಿತ ಜೀವನವನ್ನು ನೀಡಲಾಗುತ್ತದೆ. ಇದೇ ಈ ಚಿಕಿತ್ಸಾ ವಿಧಾನದ ಮೂಲತತ್ವ.
ಯಾವುದೇ ಅಡ್ಡಪರಿಣಾಮಗಳಿಲ್ಲ. ರೋಗ ನಿವಾರಕ ಶಕ್ತಿಯ ಜಾಗೃತಿ, ಮನೋಲ್ಲಾಸ, ಸರಳ ರೀತಿಯಲ್ಲಿ ಅಭ್ಯಾಸ ಮಾಡಲು ಅನುಕೂಲ.
ಎಲ್ಲಾ ರೀತಿಯ ಮಾನಸಿಕ, ದೈಹಿಕ ಹಾಗೂ ಆಧ್ಯಾತ್ಮಿಕ ನೋವುಗಳ ನಿವಾರಣೆ. ಕಾಯಿಲೆಗಳನ್ನು ಎದುರಿಸುವ ಹಾಗೂ ಹಿಮ್ಮೆಟ್ಟಿಸುವ ಶಕ್ತಿ.
ದುರಭ್ಯಾಸಗಳಿಂದ, ಮಾನಸಿಕ ಖಿನ್ನತೆ ಹಾಗೂ ಒತ್ತಡಗಳಿಂದ ಬೇಗನೇ ಹೊರಬರಲು ಅನುಕೂಲ.
ಜೀವನದ ಬಗ್ಗೆ ಹೆಚ್ಚುವ ಸಕಾರಾತ್ಮಕ ಧೋರಣೆ, ಸುಖ, ದುಃಖಗಳನ್ನು ಸಮವಾಗಿ ತೆಗೆದುಕೊಳ್ಳಲು ಅಗತ್ಯವಾದ ಸ್ಥಿತಪ್ರಜ್ಞೆಯನ್ನು ಈ ಚಿಕಿತ್ಸೆ ತಂದುಕೊಡುತ್ತದೆ.
ನೀವೂ ಬನ್ನಿ
ಡಿ. 14 ಹಾಗೂ 15ರಂದು ಮುದ್ರಾ ಹೀಲಿಂಗ್ ಹಾಗೂ ಬಾಚ್ ಫ್ಲವರ್ ರೆಮೆಡಿ ವಿಶೇಷ ಕಾರ್ಯಾಗಾರವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಸಂಪರ್ಕಿಸಿ: 9164350777, 9164350999.
- ಚೇತನ್ .ಓ.ಆರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


