ನಾಮ ಬಲ

ಒಬ್ಬ ವ್ಯಕ್ತಿಯ ಹೆಸರೇ ಅವನ ಭವಿಷ್ಯತ್ತನ್ನು ನಿರ್ಧರಿಸುತ್ತದೆ. ಈ ನಿಟ್ಟಿನಲ್ಲಿ ವ್ಯಕ್ತಿಯ ಹೆಸರು ಹೇಗಿರಬೇಕು ಎಂಬುದೂ ಒಂದು ತಿಳಿದುಕೊಳ್ಳಬೇಕಾದ ವಿಚಾರವೇ ಸರಿ.
ಮೊದಲು ವ್ಯಕ್ತಿಯ ಅಥವಾ ಮಗುವಿನ ಜನನ ಸಮಯ, ತಾರೀಖು, ವರ್ಷ ತೆಗೆದುಕೊಂಡು ಲಗ್ನ ಯಾವುದು ಮತ್ತು ಚಂದ್ರನಿರುವ ನಕ್ಷತ್ರ ಯಾವುದು ಎಂದು ತಿಳಿಯಬೇಕು. ಮಗುವಿನ ಜನ್ಮ ಕುಂಡಲಿಯಲ್ಲಿ ಲಗ್ನ ಅಥವಾ ರಾಶಿಯಿಂದ ನೋಡಿದಾಗ ಧನಯೋಗ, ಲಕ್ಷ್ಮಿಯೋಗ, ನೀಚ ಭಂಗ ರಾಜ ಯೋಗಗಳಿದ್ದರೆ ಶ್ರೀಮಂತನಾಗುವನು ಎಂದು ಅರ್ಥ. ಹಾಗಾಗಿ ಮಗುವಿನ ಹೆಸರನ್ನು 2ನೇ ನಕ್ಷತ್ರದ ಹೆಸರಲ್ಲಿ ಇಡತಕ್ಕದ್ದು. ಉದಾ: ರೇವತಿ ನಕ್ಷತ್ರದಲ್ಲಿ ಮಗುವಿನ ಜನನ ಆದರೆ ಎರಡನೇ ನಕ್ಷತ್ರ ಅಶ್ವಿನಿ ಆಗಿರುವುದು. ಅಶ್ವಿನಿ ಎಂದರೆ ಹೆಸರು ಚು, ಚೈ, ಚೊಲಗಳಿಂದ ಆರಂಭ ಆಗಿರುತ್ತದೆ. ಹಾಗಾಗಿ ಹೆಸರು ಹೆಣ್ಣು ಶಿಶು ಆದರೆ ಲಕ್ಷ್ಮೀ ಎಂದೂ, ಪುತ್ರನಾದರೆ ಲಕ್ಷೀಶನೆಂದೂ ಇಡಬೇಕು.
ಮಗುವಿಗೆ ಹುಟ್ಟಿದಾಗಲೇ ಕಷ್ಟ, ಅನಾರೋಗ್ಯ, ಅಲ್ಲದೆ ವಿದ್ಯಾವಂತನಾಗುವ ಯೋಗಗಳಾದ ವಿದ್ಯಾಯೋಗ ಸರಸ್ವತಿ ಯೋಗ, ಬುಧ ಆದಿತ್ಯ ಯೋಗಗಳಿದ್ದರೆ ಹೆಸರನ್ನು ಲಗ್ನ ಅಥವಾ ಚಂದ್ರನಿರುವ ನಕ್ಷತ್ರದಿಂದ 4ನೇ ನಕ್ಷತ್ರ ಎಂದರೆ ಕ್ಷೇಮ ತಾರೆಯಲ್ಲಿ ಹೆಸರಿಡುವುದು. ಉದಾ: ರೇವತಿ ನಕ್ಷತ್ರದ ಮಗುವಿಗೆ 4ನೇ ನಕ್ಷತ್ರವೇ ಕೃತಿಕೆ. ಕೃತಿಕೆ ಎಂದರೆ ಅ ಇ ಉ ಎ ಅಕ್ಷರಗಳಾಗಿವೆ. ಹಾಗಾಗಿ ಹೆಸರನ್ನು ಪುತ್ರನಾದರೆ ಆದಿತ್ಯ ಎಂದೂ, ಹೆಣ್ಣು ಆದರೆ ಅನನ್ಯ ಎಂದು ಹೆಸರಿಡಬಹುದು.
ಮಗುವು ಹುಟ್ಟಿದ ದಿನದಿಂದಲೇ ಆರೋಗ್ಯವಂತನೂ, ಬುದ್ಧಿವಂತನಾಗಿದ್ದಾನೆ ಎಂಬ ಲಕ್ಷಣ ತೋರಲಿದ್ದು, ವಿದ್ಯಾಕ್ಷೇತ್ರ, ಕ್ರೀಡಾ ಕ್ಷೇತ್ರಹದಲ್ಲಿ ಪರಿಣಿತನಾಗುವ ಲಕ್ಷಣ ಎಂದು ತೋರಿದರೆ, ಕಾಲ ದೀಪಿಕಾ, ಗಜ ಕೇಸರಿ ಯೋಗ, ಹಂಸ ಮಹಾಯೋಗ, ಮಾಲವ್ಯ ಮಹಾಯೋಗಗಳಿದ್ದರೆ ಸಾಧಕ ತಾರೆ ಎಂದರೆ 6ನೇ ನಕ್ಷತ್ರದಲ್ಲಿ ಹೆಸರಿಡುವುದು. ರೇವತಿ ನಕ್ಷತ್ರದಲ್ಲಿ ಜನನ ಆದರೆ 6ನೇ ನಕ್ಷತ್ರವೇ ಮೃಗಶಿರ. ಮೃಗಶಿರ ಎಂದರೆ ಕ ಕಿ ವೆ ಅಕ್ಷರಗಳಿದ್ದು, ಪುತ್ರನಾದರೆ ಕಿರಣ ಪುತ್ರಿ ಆದರೆ ಕಾವ್ಯ ಎಂದು ಹೆಸರಿಸಬಹುದು.
ಮಗುವಿನ ಜನನ ಕುಂಡಲಿಯಲ್ಲಿ ಲಗ್ನ ಅಥವಾ ಚಂದ್ರನಿರುವ ನಕ್ಷತ್ರದಿಂದ 9ನೇ ನಕ್ಷತ್ರದಲ್ಲಿ ಹೆಸರಿಸಿದರೆ ಪ್ರಖ್ಯಾತ ರಾಜಕಾರಣಿ, ವಕೀಲಿ, ಮಂತ್ರಿ ಮಹೋದಯರಾಗಬಹುದು. ಅವರಲ್ಲಿ ಅಧಿಯೋಗ ಇರಬೇಕು.
ಇದೇ ರೀತಿಯಲ್ಲಿ ನೀವು ಕಟ್ಟತಕ್ಕ ಮನೆ, ಆಗಿದ್ದರೆ ಮನೆಯ ಯಜಮಾನನ ಕ್ಷೇಮ ತಾರೆಯಲ್ಲಿ ಹೆಸರಿಡಬೇಕು. ಸಿನಿಮಾಗಳನ್ನು ತಯಾರಿಸಿ ಅದಕ್ಕೆ ಹೆಸರನ್ನು ನಿರ್ದೇಶಕ ಅಥವಾ ನಿರ್ಮಾಪಕನ ಸಾಧಕ ತಾರೆಯಲ್ಲಿ ಹೆಸರಿಡತಕ್ಕದ್ದು. ನೀವು ಉದ್ಯಮಿಗಳಾದರೆ ಉದ್ಯಮದ ಹೆಸರನ್ನು ಕ್ಷೇಮ ತಾರೆಯಲ್ಲಿಡಬೇಕು.
- ರತ್ನರಾಜ ಜೈನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


