ಪರಿಶುದ್ಧ ಅಗ್ನಿ
ಸೃಷ್ಟಿಯಲ್ಲಿ ಪಂಚಭೂತಗಳು ವಿವಿಧ ಸಂಯೋಜನೆಗಳಲ್ಲಿ ಕ್ರಮಬದ್ಧವಾಗಿ ಬೆಸೆದುಕೊಂಡಿರುತ್ತವೆ. ಅಂತೆಯೇ ನಮ್ಮ ಭೌತಿಕ ಕಾಯದಲ್ಲಿಯೂ ಪಂಚಭೂತಗಳು ಇರುತ್ತವೆ. ಆದರೂ ಶರೀರದಲ್ಲಿ ದೋಷ ಅಥವಾ ಅಶುದ್ಧತೆ ತಪ್ಪಿದ್ದಲ್ಲ. ಈ ದೋಷವನ್ನೇ ಆಯುರ್ವೇದ ವಾತ, ಪಿತ್ತ, ಕಫ ಎಂದು ಕರೆದರೆ, ವೇದಗಳು ಸ್ವಾರ್ಥ ಅಥವಾ ನಕಾರಾತ್ಮಕ ಆಲೋಚನೆ ಎಂದು ಕರೆದವು. ಈ ದೋಷಗಳು ನಮ್ಮ ಶರೀರದ ಪ್ರಕೃತಿಯನ್ನೂ ನಿರ್ಧರಿಸುತ್ತವೆ. ಅಶುದ್ಧತೆಯ ಮಟ್ಟವೇ ವ್ಯಕ್ತಿಯ ಆಲೋಚನೆಯ ರೀತಿಯನ್ನೂ ನಿರ್ಧರಿಸುತ್ತದೆ.
ಪಂಚಭೂತಗಳಲ್ಲಿ ಅಗ್ನಿಗೆ ಬಹಳ ಪ್ರಾಮುಖ್ಯತೆ. ಏಕೆಂದರೆ ಇದನ್ನು ಮಲಿನಗೊಳಿಸಲು ಇಲ್ಲವೇ ಅಶುದ್ಧಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮ ವ್ಯಕ್ತಿತ್ವ ಬೆಳಗುವಂತೆ ಮಾಡುವುದು ಕೂಡ ಅಗ್ನಿಯೊಂದೇ. ತನ್ನ ಸಂಪರ್ಕಕ್ಕೆ ಬರುವ ಎಲ್ಲವನ್ನೂ, ಎಲ್ಲರನ್ನೂ ಇದು ಪರಿಶುದ್ಧಗೊಳಿಸುತ್ತದೆ. ನಮಗೆಲ್ಲರಿಗೂ ಹೋಲಿಕಾ ಕಥೆ ಗೊತ್ತಿದೆ. ತನ್ನ ಸೋದರಳಿಯ ಪ್ರಹ್ಲಾದನೊಂದಿಗೆ ಆಕೆ ಅಗ್ನಿ ಪ್ರವೇಶ ಮಾಡುತ್ತಾಳೆ. ಅವಳ ಶರೀರದಲ್ಲಿ ಅಶುದ್ಧತೆಯ ಅಂಶಗಳೇ ಹೆಚ್ಚಿದ್ದರೂ ಅಗ್ನಿ ಅದನ್ನು ಸ್ವೀಕರಿಸಿತು ಮತ್ತು ಹೋಲಿಕಾ ವ್ಯಕ್ತಿತ್ವ ಬೆಳಗುವಂತೆ ಮಾಡಿತು. ಪರಿಶುದ್ಧನಾಗಿದ್ದ ಪ್ರಹ್ಲಾದನ ರೂಪದಲ್ಲಿ ಯಾವುದೇ ವ್ಯತ್ಯಾಸ ಆಗಲಿಲ್ಲ.
ಪರಿಶುದ್ಧ ದೇಹ ಎತ್ತರದ ಲೋಕಗಳನ್ನು ಪ್ರವೇಶಿಸಬಲ್ಲದು ಹಾಗೂ ದೇವತೆಗಳೊಂದಿಗೆ ಸಂಭಾಷಿಸಬಲ್ಲದು. ಆ ದೇಹ ಸದಾ ಆನಂದದಿಂದ ಇರುತ್ತದೆ. ದೋಷ ಪರಿಮಾಣ ಅಧಿಕವಾಗಿರುವ ವ್ಯಕ್ತಿಗಳೂ ಸಂತೋಷದಿಂದ ಇರುವಂತೆ ಕಾಣುತ್ತದೆಯಾದರೂ, ತಮ್ಮ ಕರ್ಮಗಳಿಗೆ ತಕ್ಕ ಫಲವನ್ನು ಅನುಭವಿಸುತ್ತಾರೆ.
ಅಗ್ನಿಯ ನೆರವಿನಿಂದ ಪರಿಶುದ್ಧರಾಗಿ, ನಮ್ಮೆಲ್ಲ ರೋಗ-ಭೋಗಗಳಿಂದ ಮುಕ್ತರಾಗುವ ವಿಧಾನವನ್ನು ಸನಾತನ ಕ್ರಿಯೆ ವಿವರವಾಗಿ ಹೇಳುತ್ತದೆ. ಇದಕ್ಕಾಗಿ ಪರಿಶುದ್ಧ ಭಾವದೊಂದಿಗೆ ಹವನ ಮಾಡಬೇಕು. ಶುದ್ಧ ಸಾಮಗ್ರಿಗಳು, ಶುದ್ಧ ತುಪ್ಪ ಮತ್ತು ಸಮೀಧಾಗಳನ್ನು ಬಳಸುವುದು ಮಾತ್ರವಲ್ಲದೆ, ಮಂತ್ರಗಳನ್ನು ಸರಿಯಾಗಿ ಉಚ್ಛರಿಸಬೇಕು. ಆಗ ನಮ್ಮ ದೇಹದ ಜತೆಗೆ ಸುತ್ತಮುತ್ತಲಿನ ವಾತಾವರಣವೂ ಶುದ್ಧಗೊಳ್ಳುವುದಲ್ಲದೆ, ದೈವಿಶಕ್ತಿಗಳೊಂದಿಗೆ ಸಂಪರ್ಕ ಸಾಧಿಸಬಹುದು. ಅದನ್ನು ಫೌಂಡೇಷನ್‌ನ ವೆಬ್‌ಸೈಟ್‌ನಲ್ಲಿ ಲಭ್ಯವಿರುವ, ದೆಹಲಿ ಮತ್ತು ಹೈದರಾಬಾದ್‌ಗಳಲ್ಲಿ ಧ್ಯಾನ್ ಫೌಂಡೇಷನ್‌ನ ಸಾಧಕರು ನಡೆಸಿದ ಹವನಗಳ ಚಿತ್ರಗಳಲ್ಲಿ (ಢಿಢಿಢಿ.ಝಣಛಟಿಜ್ಟ್ಡಿಟಿಜಛಡ್ಝ್ಟಿಟಿ.್ಛ್ಟಟ) ನೋಡಬಹುದು. ಅವರು ಸನಾತನ ಕ್ರಿಯೆಯನ್ನು ಪರಿಪೂರ್ಣ ರೀತಿಯಲ್ಲಿ ಅಳವಡಿಸಿಕೊಂಡವರು. ಸನಾತನ ಕ್ರಿಯೆಯನ್ನು ಪರಿಪೂರ್ಣ ರೀತಿಯಲ್ಲಿ ರೂಢಿಸಿಕೊಂಡರೆ ನಿಮ್ಮಲ್ಲಿನ ಅಶುದ್ಧತೆ ತೊಲಗಿ ಹೋಗುವುದು ಮತ್ತು ದೈವಿಶಕ್ತಿಗಳೊಂದಿಗೆ ಸಂವಬನ ನಡೆಸುವ ಸಾಮರ್ಥ್ಯ ನಿಮ್ಮದಾಗುವುದು.
- ಯೋಗಿ ಅಶ್ವಿನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

