ಬಯಕೆ ಹತ್ತಿಕ್ಕದೆಯೂ ಚೈತನ್ಯ ಕಾಪಿಟ್ಟುಕೊಳ್ಳಿ!
ನಗರಗಳಲ್ಲಿ ವಾಸವಾಗಿರುವ ಯುವ ವೃತ್ತಿಪರರನ್ನು ಒಮ್ಮೆ ನೋಡಿ. ನೆರೆತ ಕೂದಲು, ಕಣ್ಣುಗಳ ಸುತ್ತ ಕಪ್ಪು ಬಳೆ, ಚರ್ಮ ಸುಕ್ಕುಗಟ್ಟುವುದು, ಸಣಕಲು ಶರೀರ, ಬಲಹೀನತೆ, ಸುಸ್ತು, ಬೇಗ ಆಯಾಸ. ಇದಕ್ಕೆ ಕಾರಣ- ಖಿನ್ನತೆ, ಒತ್ತಡ, ಆತಂಕ, ದೀರ್ಘ ಕೆಲಸದ ಅವಧಿ, ಇತರರನ್ನು ಹಿಂದಿಕ್ಕಿ ಮುನ್ನುಗ್ಗಬೇಕೆಂಬ ಹೊಟ್ಟೆಕಿಚ್ಚಿನ ಛಲ, ಮಹತ್ವಾಕಾಂಕ್ಷೆ. ಈ ಎಲ್ಲ ನಕಾರಾತ್ಮಕ ಭಾವನೆಗಳಿಂದಾಗಿ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ. ಅದು ಅಕಾಲ ವೃದ್ಧಾಪ್ಯದತ್ತ ಒಯ್ಯುತ್ತದೆ. ಇದಕ್ಕೆ ವಿರುದ್ಧವಾಗಿ ಒಬ್ಬ ಯೋಗಿ, 40 ದಾಟಿದರೂ ಇನ್ನು ಕಾಂತಿಯುಕ್ತ ತ್ವಚೆ, ಹೊಳೆಯುವ ಕಣ್ಣು, ಕಪ್ಪು ಕೂದಲು, ಸದೃಢ ಮೈಕಟ್ಟು ಹೊಂದಿರುತ್ತಾನೆ. ಇವತ್ತಿನ ಯುಗದಲ್ಲಿ ನಮ್ಮನ್ನು ಬಹುಬೇಗ ವೃದ್ಧಾಪ್ಯದತ್ತ ತಳ್ಳುವ ಮತ್ತೊಂದು ಸಂಗತಿ ಎಂದರೆ ಅತಿಯಾದ ಸಿಟ್ಟು. ಸಣ್ಣಪುಟ್ಟ ವಿಚಾರಗಳಿಗೂ ತಾಳ್ಮೆ ಕಳೆದುಕೊಂಡು ಸಿಟ್ಟಿಗೆದ್ದರೆ ಪ್ರಜ್ಞೆಗಳ ಮೇಲೆ ಹಿಡಿತ ಕಳೆದುಕೊಂಡಿದ್ದೇವೆ ಎಂದು ಅರ್ಥ. ಈ ಆಂತರಿಕ ಅಸಮತೋಲನ ದೇಹದ ಎಲ್ಲಾ ಭಾಗಗಳಿಗೂ ವ್ಯಾಪಿಸುತ್ತದೆ ಮತ್ತು ಬಾಹ್ಯ ಪರಿಸರದ ಮೇಲೆಯೂ ಪರಿಣಾಮ ಬೀರುತ್ತದೆ. ದೇಹದ ಚೈತನ್ಯ ಕಡಿಮೆಯಾಗುತ್ತಿದೆ ಎನ್ನುವುದು ಅರಿವಿಗೆ ಬರುವಷ್ಟರಲ್ಲಿ ವೃದ್ಧಾಪ್ಯವನ್ನು ಅಪ್ಪಿಕೊಂಡಿರುತ್ತೇವೆ.
ವಯಸ್ಸಾಗುವಿಕೆ ಅಥವಾ ವೃದ್ಧಾಪ್ಯ ಎನ್ನುವುದರ ಅರ್ಥ ಏನೆಂದರೆ ದೇಹದಲ್ಲಿರುವ ಶುಕ್ರ ಅಸ್ತಂಗತನಾಗುತ್ತಿದ್ದಾನೆ ಎಂದು. ಶುಕ್ರ ನಮ್ಮ ಕೂದಲು ಮತ್ತು ತ್ವಚೆಗೆ ಹೊಳಪು ನೀಡುವುದಷ್ಟೇ ಅಲ್ಲದೆ ಶರೀರಕ್ಕೆ ಬಲ ತುಂಬುತ್ತಾನೆ. ಜನ ನಮ್ಮತ್ತ ಆಕರ್ಷಿತನಾಗುತ್ತಾರೆ ಎಂದರೆ ಅದಕ್ಕೂ ಶುಕ್ರನೇ ಕಾರಣ. ಶುಕ್ರ ಎಂದರೆ ಪ್ರಾಣ. ಅತಿಯಾದ ಚಟುವಟಿಕೆ, ಅನಾರೋಗ್ಯಕರವಾದ ಜೀವನಶೈಲಿಗಳಿಂದಾಗಿ ಸಾಮಾನ್ಯ ಮನುಷ್ಯರ ದೇಹದಲ್ಲಿ ಜಲಾಂಶ ಕಡಿಮೆಯಾಗುತ್ತದೆ. ಕನಸಿನಲ್ಲಿ ಕೂಡ ಇಲ್ಲಸಲ್ಲದ ಯೋಚನೆ ಮಾಡುವುದರಿಂದ ದೇಹ ಸೊರಗುತ್ತದೆ. ಶುಕ್ರ ನಿಸ್ತೇಜನಾಗುತ್ತಿದ್ದಂತೆ ಶರೀರದ ದ್ರವ ಸಂಯೋಜನೆಯೇ ಏರುಪೇರಾಗುತ್ತದೆ. ಸನಾತನ ಕ್ರಿಯೆ ಶರೀರದ ಸಮತೋಲನ ಕಾಪಾಡಿಕೊಳ್ಳಲು ಸಹಕಾರಿ. ತ್ವರಿತವಾಗಿ ವಯಸ್ಸಾಗುವಿಕೆಗೆ ಇನ್ನೂ ನಾಲ್ಕು ಪ್ರಮುಖ ಕಾರಣಗಳನ್ನು ಪಟ್ಟಿ ಮಾಡಬಹುದು. ಭಾವನಾತ್ಮಕ ಒತ್ತಡಗಳು, ಅತಿಯಾದ ಶ್ರಮ, ಕೋಪ ಮತ್ತು ಮಿತಿಮೀರಿದ ಲೈಂಗಿಕ ಚಟುವಟಿಕೆ. ಸದಾ ಯೌವ್ವನ ಕಾಪಿಟ್ಟುಕೊಳ್ಳಲು ಬಯಸುವವರು ಈ ಸಂಗತಿಗಳತ್ತಲೂ ಗಮನ ಕೊಡುವುದು ಅಗತ್ಯವಾದುದು. ಸನಾತನ ಕ್ರಿಯೆ ಮಾಡುವವರು ತಮ್ಮ ಬಯಕೆಗಳನ್ನು ಹತ್ತಿಕ್ಕಿಕೊಳ್ಳದೆಯೂ ಚೇತನ ಉಳಿಸಿಕೊಳ್ಳಬಲ್ಲರು. ಸನಾತನ ಕ್ರಿಯೆ ಕುರಿತು ಮಾಹಿತಿಗೆ: 7406175228/ 9448335830.
- ಯೋಗಿ ಅಶ್ವಿನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

