ರಾಶಿ ಸ್ವರೂಪ

ಜ್ಯೋತಿಷಶಾಸ್ತ್ರದಲ್ಲಿ ಬರುವ ದ್ವಾದಶ ರಾಶಿಗಳು ತಮ್ಮದೇ ರೂಪು, ರೇಷೆ, ಪ್ರಭಾವ, ಲಕ್ಷಣವನ್ನು ಹೊಂದಿವೆ. ರಾಶಿಗಳಲ್ಲಿನ ಇಂಥ ಬದಲಾವಣೆಯೇ ಮಾನವನ ಮೇಲೆ ವಿವಿಧ ರೀತಿಯ ಪರಿಣಾಮ ಬೀರಲೂ ಕಾರಣವಾಗಿದೆ.
ಆಚಾರ್ಯ ವರಾಹಮಿಹಿರ ರಚಿಸಿದ 'ಬೃಹದ್ವಾರಾಹಿ ಸಂಹಿತಾ'ದಲ್ಲಿ ದ್ವಾದಶ ರಾಶಿಗಳ ಸ್ವರೂಪ ಗುಣಾವಗುಣಗಳ ವಿವರಣೆ ಇದೆ. ಇದನ್ನು ಜನನಕಾಲ ಲಕ್ಷಣಕ್ಕೂ, ಜಾತಕನ ಸ್ವಭಾವಕ್ಕೂ, ಚೋರಾದಿ ಪ್ರಶ್ನಲಗ್ನಕ್ಕೂ ಅನ್ವಯಿಸಿಕೊಂಡು ಪ್ರಯೋಜನವನ್ನು ಪಡೆಯಬಹುದು.
ಮೇಷ
ಈ ಮೇಷ ಕಾಲ ಪುರುಷನ ಶಿರೋಭಾಗ, ಸಮಾನ ಶರೀರ, ಪುರುಷ ರಾಶಿ, ಚರ ಸ್ವಭಾವ, ಬೆಟ್ಟ- ಪರ್ವತಗಳಲ್ಲಿ ಸಂಚಾರ, ಅಗ್ನಿ ಧಾತು, ದೃಢಾಂಗ, ರಕ್ತವರ್ಣ, ಉಷ್ಣ ಸ್ವಭಾವ, ಮಹಾಶಬ್ದ, ಉಗ್ರ ಪೀತವರ್ಣ, ದಿವಾಬಲಿ, ಪೂರ್ವದಿಕ್ಸ್ವಾಮಿ, ವಿಷಮೋದಯ, ಅಲ್ಪಸಂಗ, ಅಲ್ಪಪ್ರಜಾ, ಕ್ಷತ್ರಿಯವರ್ಣ- ಈ ಗುಣಗಳಿಂದ ಕೂಡಿರುವುದು.
ವೃಷಭ
ಇದು ಕಾಲಪುರಷನ ಮುಖ, ಕುತ್ತಿಗೆ ನೀಲವಾಗಿರುವುದು. ಸ್ಥಿರರಾಶಿ, ಸತುವಿನ ಧಾತು, ಬೆಟ್ಟ ಜರಿ, ಗೋಕುಲದಲ್ಲಿ ಸಂಚಾರ, ಭೂ ರಾಶಿ, ಸ್ತ್ರೀ, ಶೀತಸ್ವಭಾವ, ಕಾಂತಿರಹಿತ, ದಕ್ಷಿಣದಿಕ್ಸ್ವಾಮಿ, ಸುಭೂಮಿ ಸಂಚಾರಿ, ವಾಯು ಪ್ರಕೃತಿ, ರಾತ್ರಿಬಲ, ಚತುಷ್ಪಾದ, ಶುಭ್ರವರ್ಣ, ಮಹಾಶಬ್ದ, ವಿಷಮೋದಯ, ಮಧ್ಯಪ್ರಜಾಸಂಗ, ಶಿಥಿಲಾಂಗ- ಇವು ವೃಷಭ ರಾಶಿಯ ಲಕ್ಷಣಗಳು.
ಮಿಥುನ
ಇದು ದ್ವಿ ಸ್ವಭಾವ ರಾಶಿ. ಕಾಲಪುರುಷನ ಅಂಗದಲ್ಲಿ ಭುಜಗಳು. ಉಷ್ಣ ಸ್ವಭಾವ, ಮಧ್ಯ ಪ್ರಜಾಸಂಗ, ವನಚಾರೀ, ಶೂದ್ರವರ್ಣ, ಸ್ನಿಗ್ಧ, ದಿವಾಬಲೀ, ಗಾಯನ, ನೃತ್ಯ, ಶಿಲ್ಪ, ಸ್ತ್ರೀ, ಕ್ರೀಡಾರತಿ, ವಿಹಾರ ಭೂಮಿಯಲ್ಲಿ ಸಂಚರಿಸುವುದು, ದ್ಯೂತ ಸ್ವಭಾವ (ಜೂಜು), ಪಶ್ಚಿಮ ದಿಕ್ಕಿಗೆ ಅಧಿಪತಿ ಪುರುಷನು ಗದೆ ಹಿಡಿದುಕೊಂಡು, ಸ್ತ್ರೀಯು ವೀಣೆ ಹಿಡಿದುಕೊಂಡು ಏಕತ್ರ ಇರುವುದು.
ಕಟಕ
ಇದು ಕಾಲ ಪುರುಷನ ವಕ್ಷಸ್ಥಳ, ಸ್ತ್ರೀರಾಶಿ, ಹೆಂಗರುಳು, ಕಫ ಪ್ರಕೃತಿ, ಶುಭರಾಶಿ, ಪಾಟಲವರ್ಣ, ಬಹುಸಂಗ, ಬಹುಚಾರಣ, ನಿಶಬ್ಧ, ಜಲರಾಶಿ, ಬ್ರಾಹ್ಮಣ ವರ್ಣ ರಾತ್ರಿಬಲಿ, ಉತ್ತರ ದಿಕ್ಕಿಗೆ ಅಧಿಪತಿ, ಹಳ್ಳ, ಬಾವಿ, ನೀರಿರುವಲ್ಲಿ ಸಂಚರಿಸುವುದು, ದೇವತೆಗಳಿಗೆ ಯೋಗ್ಯವಾದ ರಮ್ಯ ಭೂಮಿಯಲ್ಲಿ ಸಂಚರಿಸುತ್ತದೆ.
ಸಿಂಹ
ಪುರುಷರಾಶಿ, ಸ್ಥಿರ ಸ್ವಭಾವ, ಅಗ್ನಿರಾಶಿ, ದಿತಾಬಲೀ, ಪೀತವರ್ಣ, ರೂಕ್ಷಿ, ಪಿತ್ತೋಷ್ಣಧಾತು, ದೃಢ ಶರೀರ, ದೀರ್ಘದವ, ಅಲ್ಪಸಂಗ, ಅಲ್ಪಪ್ರಜ, ಶೈಲವನ ಸಂಚಾರಿ, ಕ್ಷತ್ರಿಯವರ್ಮ, ಕಾಲಪುರುಷನ ಅಂಗಗಳಲ್ಲಿ ಹೃದಯ, ಉಗ್ರ, ಧೂಮ್ರ ಈ ಗುಣಗಳಿಂದ ಕೂಡಿರುತ್ತದೆ. ದೃಢ ಶರೀರ, ಅಡವಿ ದುರ್ಗ ಗುಹಾ ವನಾದ್ರಿಯಲ್ಲಿ ಸಂಚಾರ.
ಕನ್ಯಾ
ಸ್ತ್ರೀರಾಶಿ, ದ್ವಿಸ್ವಭಾವ, ದ್ವಿಪದ, ದಕ್ಷಿಣ ದಿಕ್ಸ್ವಾಮಿ, ರಾತ್ರಿ ಬಲಿ, ವಾಯು ಪ್ರಕೃತಿ, ಕಾಲಪುರುಷನ ಅಂಗಗಳಲ್ಲಿ ಜಠರ ಪ್ರದೇಶ, ಶೀತ ಸ್ವಭಾವ, ಸಮೋದಯ, ಭೂಮಿರಾಶಿ, ಅರ್ಧ ಶಬ್ದ, ಸುಭೂಮಿ ಸಂಚಾರಿ, ವೈಶ್ಯ ವರ್ಣ, ಕಾಂತಿರಹಿತ, ಅಲ್ಪ ಸಂಗ, ಅಲ್ಪ ಪ್ರಸವ, ಶುಭ, ಸೌಮ್ಯ ರಾಶಿ, ಕನ್ಯೆಯು ಒಂದು ಕೈಯಲ್ಲಿ ಸಸಿಯನ್ನು ಮತ್ತೊಂದು ಕೈಯಲ್ಲಿ ದೀಪವನ್ನು ಹಿಡಿದುಕೊಂಡು ನೀರಿನಲ್ಲಿ ತೆಪ್ಪದ ಮೇಲೆ ಕೂತುಕೊಂಡಿರುತ್ತದೆ. ಕಲಾರ್ಥ ತಿಳಿದಿದ್ದು, ಶಾಡ್ವಲಭೂಮಿ ಹಾಗೂ ರತಿ ಶಿಲ್ಪಭೂಮಿಯಲ್ಲಿ ಸಂಚರಿಸುತ್ತದೆ. ಸ್ತ್ರೀರಾಶಿ.
ತುಲಾ
ಚರ ರಾಶಿ, ನಾನಾವಿಧ ಚಿತ್ರವರ್ಣ, ಕಾಲಪುರುಷ ಅಂಗಗಳಲ್ಲಿ ವಸ್ತಿ ಪ್ರದೇಶ, ಪಟ್ಟಣದಲ್ಲಿ ಸಂಚರಿಸುವ ಸ್ವಭಾವ, ಸಮೋದಯ, ಉಷ್ಣ, ಪಶ್ಚಿಮ ದಿಕ್ಕಿಗೆ ಅಧಿಪತಿ, ವಾಯುರಾಶಿ, ಸ್ನಿಗ್ಧ, ನಿಶ್ಯಬ್ದ, ಸ್ವಲ್ಪ ಪ್ರಜಾಸಂಗ, ಸ್ವಲ್ಪ ಪ್ರಸವ, ಶೂದ್ರವರ್ಣ, ಕ್ರೂರ, ದಿವಾಬಲಿ, ದ್ವಿಪದ, ಸಮಾಂಗ, ಶಿಥಿಲಾಂಗ, ಉನ್ನತಾಂಗ, ಸಸ್ಯ ಭೂಮಿ ಸಂಚಾರಿ- ಈ ಗುಣಗಳಿಂದ ಕೂಡಿರುತ್ತದೆ.
ವೃಶ್ಚಿಕ
ಶುಭ ರಾಶಿ, ಸ್ತ್ರೀ ರಾಶಿ, ಜಲರಾಶಿ, ಉತ್ತರ ದಿಕ್ಕಿಗೆ ಅಧಿಪತಿ, ರಾತ್ರಿಬಲಿ, ನಿಶ್ಯಬ್ದ, ಬಹುಪದ, ಕಫ ಪ್ರಕೃತಿ ಸಮೋದಯ ವಾರಿಚಾರ, ಬಹುಸ್ತ್ರೀ ಸಂಗ, ಬಹುಪ್ರಜ, ಸೌಮ್ಯ, ಸ್ನಿಗ್ಧ ಶರೀರ, ಬ್ರಾಹ್ಮಣ ವರ್ಣ. ಚೇಳಿನ ಆಕಾರವುಳ್ಳದ್ದು ಗುಹ, ಜಲ, ತೂತು ಈ ಸ್ಥಳಗಳಲ್ಲಿ ವಾಸಿಸಿರುವುದು. ಕಾಲಪುರಷನ ಅಂಗಗಳಲ್ಲಿ ಗುದ- ಜನನೇಂದ್ರಿಯ ಪ್ರದೇಶ. ಕೀಟ ರಾಶಿ, ಹುತ್ತ, ಅಜಗರ ಸಂಚಾರವುಳ್ಳ ಭೂಮಿಯಲ್ಲಿ ಸಂಚರಿಸುವುದು.
ಧನಸ್ಸು
ಇದು ಪುರುಷ ರಾಶಿ, ಸ್ವರ್ಣಕಾಂತಿ ಪರ್ವತಚಾರಿ, ಸಮೋದಯ, ಅತಿಶಬ್ದ, ದಿವಾಬಲಿ, ಪೂರ್ವದಿಕ್ಕಿಗೆ ಅಧಿಪತಿ, ದೃಢಾಂಗ, ಪೀತವರ್ಣ, ಕ್ಷತ್ರಿಯ ವರ್ಣ, ಉಷ್ಣ ಪಿತ್ತ ಪ್ರಕೃತಿ, ಅಲ್ಪ ಸೂಕ್ತಿ, ಅಲ್ಪ ಪ್ರಜಾ, ಅಲ್ಪ ಸಂಗ, ದ್ವಿ ಸ್ವಬಾವ, ಅಗ್ನಿರಾಶಿ, ಉಗ್ರ, ದ್ವಿವರ್ಣ- ಸುವರ್ಣವರ್ಣ. ಕಾಲ ಪುರುಷನ ಅಂಗದಲ್ಲಿ ತೊಡೆಗಳು, ಕಟಿಭಾಗದಿಂದ ಕೆಳಗಡೆ ಅಶ್ವಾಕಾರವಾಗಿಯೂ, ಮೇಲ್ಭಾಗದಲ್ಲಿ ಮನುಷ್ಯಕಾರವಾಗಿಯೂ, ಧನುರ್ಬಾಣವನ್ನು ಹಿಡಿದುಕೊಂಡಿರುತ್ತದೆ. ಸಮಶರೀರ, ಯಾಜ್ಣಿ, ರಥಾಶ್ವ ಭೂಮಿಯಲ್ಲಿ ಸಂಚಾರ.
ಮಕರ
ಇದು ಚರರಾಶಿ, ಭೂಮಿರಾಶಿ, ಅರ್ಧ ಶಬ್ದ, ದಕ್ಷಿಣ ದಿಕ್ಕಿಗೆ ಅಧಿಪತಿ, ಸ್ತ್ರೀರಾಶಿ, ಪಿಂಗಳವರ್ಣ, ಕಾಂತಿರಹಿತ, ಸೌಮ್ಯ, ಭೂಮಿಚಾರಿ, ಶೀತಲ ಸ್ವಭಾವ, ಸ್ವಲ್ಪ ಪ್ರಜಾ, ಸ್ವಲ್ಪ ಸ್ತ್ರೀಲಿಂಗ, ವಾತಪ್ರಕೃತಿ, ದಾಸಿಬಲಿ, ಚತುಪ್ಪಾತ್, ಜಲಚರ, ವೈಶ್ಯವರ್ಣ, ಕಾಲಪುರುಷನ ಅಂಗದಲ್ಲಿ ಜಾನು ಪ್ರದೇಶ, ನದೀವನ, ಅರಣ್ಯ ಸಂಚಾರ ಇವು ಮಕರ ರಾಶಿಯ ಲಕ್ಷಣಗಳು.
ಕುಂಭ
ಪುರುಷರಾಶಿ, ದಿವಾಬಲೀ, ಮಧ್ಯಸಂಗ, ಮಧ್ಯ ಪ್ರಸವ, ಮಧ್ಯ ಸ್ತ್ರೀಸಂಗ, ಸ್ಥಿರರಾಶಿ, ಚಿತ್ರವರ್ಣ, ವನಚಾರಿ, ವಾಯುರಾಗ, ಸ್ನಿಗ್ಧ, ಉಷ್ಣ, ಅರ್ಧಸ್ವರ, ಸಮವಾತಪಿತ್ತಕಫ ಪ್ರಕೃತಿ, ಶೂದ್ರವರ್ಣ, ಪಶ್ಚಿಮ ದಿಕ್ಕಿಗೆ ಅಧಿಪತಿ, ವಿಷಮೋದಯ, ಕುಂಭರಾಶಿಯ ಸ್ವರೂಪ, ಕುಂಭವನ್ನು ಭುಜದ ಮೇಲೆ ಹೊತ್ತುಕೊಂಡಿರುವುದು. ಕಾಲಪುರುಷನ ಜಂಘೆ ಉದಕಾಧಾರ ಸಹಿತವಾದ್ದದು, ಕೆಗ್ಗಾಲು, ಮೀನ ಖಂಡಗಳು.
ಮೀನ
ಸ್ತ್ರೀರಾಶಿ, ಕಫ ಪ್ರಕೃತಿ, ಜಲರಾಶಿ, ರಾತ್ರಿಬಲಿ, ನಿಶ್ಯಬ್ದ, ಪಿಂಗಳವರ್ಣ, ದ್ವಿಸ್ವಭಾವ, ಜಲದಲ್ಲಿ ವಾಸ, ಸ್ನಿಗ್ಧ, ಅತಿಸಂಗ, ಅತ್ಯಂತ ಸ್ತ್ರೀ ಸಂಯೋಗ, ಬ್ರಾಹ್ಮಣ ವರ್ಣ, ಸೌಮ್ಯ, ಉತ್ತರ ದಿಕ್ಕಿಗೆ ಅಧಿಪತಿ, ಉಭಯೋದಯ, ಸ್ವರೂಪ ಹೇಗೆಂದರೆ ಎರಡು ಮೀನುಗಳು, ಒಂದರ ತಲೆ ಒಂದರ ಬಾಲ, ಒಂದೊಂದು ಕಡೆ ಸೇರುವುದು. ಇದು ಕಾಲಪುರಷನ ಪಾದ, ಪುಣ್ಯ ಸ್ಥಳ, ದೇವ ದ್ವಿಜ ತೀರ್ಥ ಈ ಸ್ಥಳಗಳಲ್ಲಿ ಸಂಚರಿಸುವುದು. ನದೀ, ಸಮುದ್ರ ಇಂಥ ಕಡೆ ವಾಸಿಸುವುದು.
-ವಿ. ಕೇಶವಮೂರ್ತಿ ಮೈಸೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


