ಹೇ! ರೂಮ್

ಮನೆ ಮಾನಸಿಕ ಶಕ್ತಿಯನ್ನು ಹೆಚ್ಚಿಸುವಂತಿರಬೇಕು. ಹೀಗಾಗಿ ಒಂದು ಮನೆ ಕಟ್ಟುವಾಗ ವಾಸ್ತು ವಿನ್ಯಾಸವನ್ನು ತಾಲೆ ಹಾಕಿ ಗೃಹ ನಿರ್ಮಿಸುವುದು ಇಂದು ಎಲ್ಲೆಡೆ ಸಾಮಾನ್ಯ.
ಯಾವುದೇ ಮನೆಯಲ್ಲಿ ಒಂದು ದಿಕ್ಕಿನಲ್ಲಿ ಒಂದೇ ಕೋಣೆಯಿದ್ದು, ಅನ್ಯ ದಿಕ್ಕುಗಳಲ್ಲಿ ಯಾವುದೇ ಕೋಣೆಯಿರದೇ ಪಡಸಾಲೆ (ವರಾಂಡ) ಮಾತ್ರ ಇದ್ದರೆ ಅಂಥ ಮನೆಗೆ 'ಏಕಶಾಲಾ' ಎನ್ನುತ್ತಾರೆ.
ಯಾವ ಮನೆಯಲ್ಲಿ ಎರಡು ದಿಕ್ಕುಗಳಲ್ಲಿ ಎರಡು ಕೋಣೆಗಳಿರುತ್ತವೆಯೋ ಅದಕ್ಕೆ 'ದ್ವಿಶಾಲಾ' ಎನ್ನುತ್ತಾರೆ. ಒಂದು ವೇಳೆ ಮನೆಯಲ್ಲಿ ಮೂರು ದಿಕ್ಕಗಳಲ್ಲಿ ಕೋಣೆಗಳಿದ್ದರೆ ಅದಕ್ಕೆ 'ತ್ರಿಶಾಲಾ' ಎನ್ನುತ್ತಾರೆ. ನಾಲ್ಕು ದಿಕ್ಕುಗಳಲ್ಲಿ ಕೋಣೆಗಳಿದ್ದರೆ 'ಚತುಶ್ಯಾಲಾ' ಎನ್ನುತ್ತಾರೆ. ಈ ಪ್ರಕಾರವಾಗಿ ವಾಸ್ತು ಶಾಸ್ತ್ರದಲ್ಲಿ ಮನೆಯ ವಿವಿಧ ಪ್ರಕಾರಗಳ ಉಲ್ಲೇಖವಿದೆ.
ಏಕ ಶಾಲ
ಏಕಶಾಲಾ ಮನೆಯ ಕೋಣೆ ದಕ್ಷಿಣ ಭಾಗದಲ್ಲಿರುತ್ತದೆ ಮತ್ತು ಅದರ ದ್ವಾರ ಉತ್ತರಕ್ಕಿರುತ್ತದೆ. ಇದು ಶುಭ. ಒಂದು ವೇಳೆ ಏಕಾಶಾಲ ಮನೆಗೆ ನಾಲ್ಕು ದಿಕ್ಕುಗಳಲ್ಲಿ ದ್ವಾರಗಳಿದ್ದರೆ ಆ ಮನೆಗೆ 'ವಿಶ್ವತೋಮುಖ' ಎನ್ನುತ್ತಾರೆ ಇಂಥ ಮನೆ ಸಮಸ್ತ ಕಾಮನೆಗಳನ್ನು ಸಿದ್ಧಗೊಳಿಸುತ್ತದೆ.
ದ್ವಿಶಾಲಾ
ಒಂದು ವೇಳೆ ಪಶ್ಚಿಮ ಮತ್ತು ದಕ್ಷಿಣದಲ್ಲಿ ಎರಡು ಕೋಣೆಗಳಿದ್ದರೆ ಇಂಥ ಮನೆಗೆ 'ಸಿದ್ಧಾರ್ಥ' ಎನ್ನುತ್ತಾರೆ. ಇಂಥ ಮನೆ ಧನ, ಧಾನ್ಯ ಪುತ್ರಪ್ರದಾಯಕ ಮತ್ತು ಆರೋಗ್ಯ ವೃದ್ಧಿ ಮಾಡುತ್ತದೆ. ಒಂದು ವೇಳೆ ಪಶ್ಚಿಮ ಮತ್ತು ಉತ್ತರ ದಿಕ್ಕುಗಳಲ್ಲಿ ಎರಡು ಕೋಣೆಗಳಿದ್ದರೆ ಇಂಥ ಮನೆಗೆ 'ಯಮಸೂರ್ಯ' ಎನ್ನುತ್ತಾರೆ. ಇಂಥ ಮನೆಯು ಮನೆಯು ಯಜಮಾನನಿಗೆ ಮೃತ್ಯುದಾಯಕ. ರಾಜಾ, ಶತ್ರು, ಚೋರ ಮತ್ತು ಅಗ್ನಿ ಭಯ ನೀಡುತ್ತದೆ. ಹಾಗೂ ಕುಲದ ನಾಶ ಮಾಡುತ್ತದೆ.
ತ್ರಿಶಾಲಾ
ಮನೆಯ ಒಳಗೆ ಉತ್ತರ ದಿಕ್ಕಿನಲ್ಲಿ ಯಾವುದೇ ಕೋಣೆ ಇರದಿದ್ದರೆ ಮತ್ತು ಉಳಿದ ಮೂರು ದಿಕ್ಕುಗಳಲ್ಲಿ ಮೂರು ಕೋಣೆಗಳಿದ್ದರೆ ಇಂಥ ಮನೆ 'ಹಿರಣ್ಯ ಅಥವಾ ಧ್ಯಾನ್ಯಕ'ವಾಗಿರುತ್ತದೆ. ಈ ಮನೆ ಕ್ಷೇಮಕಾರಕ ವೃದ್ಧಕಾರ ಮತ್ತು ಪುತ್ರಕಾರಕವಾಗಿರುತ್ತದೆ.
ಒಂದು ವೇಳೆ ಪೂರ್ವ ದಿಕ್ಕಿನಲ್ಲಿ ಯಾವುದೇ ಕೋಣೆ ಇರದಿದ್ದರೆ ಆ ಮನೆಗೆ 'ಸುಕ್ಷೇತ್ರ' ಎಂದು ಕರೆಯುತ್ತಾರೆ. ಮನೆ ಧನ ಪುತ್ರ, ಯಶಸ್ಸು ಮತ್ತು ಆಯುಸ್ಸನ್ನು ನೀಡುತ್ತದೆ ಹಾಗೂ ಶೋಕ, ಮೋಹದ ನಾಶ ಮಾಡುತ್ತದೆ.
ಚತುಶ್ಯಾಲಾ
ನಿರ್ಮಿಸಿರುವ ಮನೆಯು ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಕೋಣೆಗಳು ಇದ್ದು ನಾಲ್ಕು ದ್ವಾರಗಳಿದ್ದರೆ 'ಸರ್ವತೋ ಭದ್ರ' ಎಂದು ಕರೆಯುತ್ತಾರೆ. ಇಂಥಾ ಮನೆ ರಾಜಾ ಮತ್ತು ದೇವತೆ (ಮಂದಿರ)ಗಳಿಗಾಗಿ ಶುಭವಾಗುತ್ತದೆ. ಅನ್ಯರಿಗೆ ಶುಭವಾಗುವುದಿಲ್ಲ. ಪಶ್ಚಿಮದಲ್ಲಿ ದ್ವಾರವಿರದೇ ಉಳಿದ ಮೂರು ದಿಕ್ಕುಗಳಲ್ಲಿ ದ್ವಾರವಿದ್ದರೆ ಇಂಥ ಮನೆಗೆ 'ನಂದ್ಯಾವರ್ತ' ಎಂದು ಕರೆಯುತ್ತಾರೆ. ಇದು ಸರ್ವರಿಗೆ ಶುಭದಾಯಕ.
-ಕೆ.ಎನ್. ಸಂಜೀವಮೂರ್ತಿ ಜೋಷಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


