ಬರಕ್ಕೆ ಸೆಡ್ಡು ಹೊಡೆದ ಕೊಪ್ಪಳದ ಹೂ ಬೇಸಾಯಗಾರ
ಕೊಪ್ಪಳದ ಹೂ ಬೇಸಾಯ ಮಾಡುವ ರೈತನೊಬ್ಬ ಬರಕ್ಕೆ ಸೆಡ್ಡು ಹೊಡೆದು ತನ್ನ ಅರ್ಧ ಎಕರೆ ಜಮೀನಿನಲ್ಲಿ ಹೂವು ಬೆಳೆದು ಲಾಭ ...

ಕೊಪ್ಪಳ: ರಾಜ್ಯದೆಲ್ಲೆಡೆ ಬರ ತಾಂಡವವಾಡುತ್ತಿದೆ. ನೀರಿಲ್ಲದೇ ಬಿತ್ತಿದ ಬೆಳೆಗಳು ಒಣಗಿ ಹೋಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಆದರೆ ಕೊಪ್ಪಳದ ಹೂ ಬೇಸಾಯ ಮಾಡುವ ರೈತನೊಬ್ಬ ಬರಕ್ಕೆ ಸೆಡ್ಡು ಹೊಡೆದು ತನ್ನ ಅರ್ಧ ಎಕರೆ ಜಮೀನಿನಲ್ಲಿ ಹೂವು ಬೆಳೆದು ಲಾಭ ಗಳಿಸುತ್ತಿದ್ದಾನೆ.
ಕೊಪ್ಪಳದ ಬೆಲೂರ್ ಗ್ರಾಮದ ದಾವಲ್ ಸಾಬ್ ಎಂಬಾತ ಅರ್ಧ ಎಕರೆ ಜಮೀನಿನಲ್ಲಿ ಸುಗಂಧರಾಜ ಹೂ ಬೇಸಾಯ ಮಾಡಿದ್ದಾನೆ. ಈ ಹೂವಿಗೆ ದಾವಣಗೆರೆ ಮತ್ತು ತುಮಕೂರಿನ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ.
ಪ್ರತಿದಿನ ಸುಮಾರು 15 ರಿಂದ 20 ಕೆಜಿ ಹೂ ಸಿಗುತ್ತದೆ. ಮಾರುಕಟ್ಟೆಯಲ್ಲಿ ಕೆಜಿಗೆ 50 ರಿಂದ 60 ರುಪಾಯಿ ಬೆಲೆ ಇರುತ್ತದೆ. ಹಬ್ಬದ ಸಮಯದಲ್ಲಿ ಪ್ರತಿ ಕೆಜಿಗೆ 150 ರು ಬೆಲೆ ಇರುತ್ತದೆ. ಸುಮಾರು 3 ದಿನಗಳ ಕಾಲ ಈ ಹೂವನ್ನು ಸಂಗ್ರಹಿಸಿಡಬಹುದಾಗಿದೆ. ಶ್ರಾವಣ ತಿಂಗಳಲ್ಲಿ ಈ ಹೂವಿಗೆ ಭಾರೀ ಬೇಡಿಕೆ ಇರುತ್ತದೆ. ವ್ಯವಸಾಯಕ್ಕೆ ಮಾಡಿದ ಖರ್ಚು ತೆಗೆದರೇ ವಾರ್ಷಿಕವಾಗಿ ಸುಮಾರು ಎರಡೂವರೆ ಲಕ್ಷ ರು ಆದಾಯ ಸಿಗುತ್ತದೆ ಎಂದು ಹೂ ಬೆಳೆದು ಬದುಕು ಕಟ್ಟಿಕೊಂಡ ದಾವಲ್ ಸಾಬ್ ಹೇಳುತ್ತಾರೆ.
ಪದವಿ ಮುಗಿದ ನಂತರ ಯಾವುದೇ ಸರ್ಕಾರಿ ಅಥವಾ ಖಾಸಗಿ ಉದ್ಯೋಗಕ್ಕೆ ಸೇರದೇ ಕೃಷಿಯನ್ನು ಆಯ್ಕೆ ಮಾಡಿಕೊಂಡೆ. ತೋಟಗಾರಿಕೆ ಇಲಾಖೆಯ ಸಹಾಯ ಪಡೆದು ಹೂ ಬೆಳೆಯಲು ಆರಂಭಿಸಿದೆ. ಇದರಿಂದ ನಾನು ಸಂತೋಷವಾಗಿ ಬದುಕುತ್ತಿದ್ದೇನೆ ಎಂದು ದಾವಲ್ ಸಾಬ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


