ರೈನೋ ಕೊಂಬಿಗೆ ಚಿನ್ನ ವಜ್ರಗಳಿಗಿಂತ ಹೆಚ್ಚು ಬೆಲೆ!
ಭೇಟೆಗಾರರಿಗೆ ರೈನೋಸರಸ್ ನ ಕೊಂಬು ಅಷ್ಟೇ ತೂಗುವ ಚಿನ್ನ ಅಥವಾ ವಜ್ರಕ್ಕಿಂತ ಹೆಚ್ಚಿನ ಹಣ ಗಳಿಸಿಕೊಡುತ್ತದೆ, ಇದು ರೈನೋಸರಸ್ ಅನ್ನು ಅಳಿವಿನಂಚಿಗೆ

ನ್ಯೂಯಾರ್ಕ್: ಭೇಟೆಗಾರರಿಗೆ ರೈನೋಸರಸ್ ನ ಕೊಂಬು ಅಷ್ಟೇ ತೂಗುವ ಚಿನ್ನ ಅಥವಾ ವಜ್ರಕ್ಕಿಂತ ಹೆಚ್ಚಿನ ಹಣ ಗಳಿಸಿಕೊಡುತ್ತದೆ, ಇದು ರೈನೋಸರಸ್ ಅನ್ನು ಅಳಿವಿನಂಚಿಗೆ ತಳ್ಳುತ್ತಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ಅಲ್ಲದೆ ವಿಶ್ವದ ಅತಿ ದೊಡ್ಡ ಶಾಖಾಹಾರಿ ಪ್ರಾಣಿಗಳಾದ ಆನೆಗಳು, ರೈನೋಸರಸ್ ಗಳು, ಹಿಪ್ಪಪೋಟಮಸ್ ಮತ್ತು ಗೊರಿಲ್ಲಾಗಳು ಕೂಡ ಅವುಗಳ ಮಾಂಸಕ್ಕೆ ಹಾಗು ಅವುಗಳ ಅಂಗಾಂಗಳ ಅಪಾರ ಬೇಡಿಕೆಗೆ ಅಳಿವಿನಂಚಿಗೆ ಹೋಗುವ ಸಾಧ್ಯತೆ ಇದೆ ಎಂದು ಸಂಶೋಧಕರು ತಿಳಿಸಿದ್ದಾರೆ.
"ಉದಾಹರಣೆಗೆ ರೈನೋಸರಸ್ ನ ಕೊಂಬು ಅಷ್ಟೇ ತೂಗುವ ಚಿನ್ನ, ವಜ್ರ ಅಥವಾ ಕೊಕೈನ್ ಗಿಂತ ಹೆಚ್ಚಿನ ಬೆಲೆ ಬಾಳುತ್ತದೆ" ಎಂದು ಅಧ್ಯಯನದ ಮುಖ್ಯ ಲೇಖಕ ಹಾಗು ಅಮೆರಿಕಾದ ಆರೆಗಾನ್ ಸ್ಟೇಟ್ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ಪ್ರೊಫೆಸರ್ ವಿಲಿಯಂ ರಿಪ್ಪಲ್ ತಿಳಿಸಿದ್ದಾರೆ.
೨೦೦೨ ರಿಂದ ೨೦೧೧ ರ ಮಧ್ಯದಲ್ಲಿ ಕಾಡಾನೆಗಳ ಸಂತತಿಯಲ್ಲಿ ೬೨% ಇಳಿಮುಖವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಹಾಗೆಯೇ ೨೦೦೭ ರಿಂದ ೨೦೧೩ ರ ಅವಧಿಯಲ್ಲಿ ಭೇಟೆಯಾಡಿದ ರೈನೋಸರಸ್ ಗಳ ಸಂಖ್ಯೆ ವರ್ಷಕ್ಕೆ ೧೩ ರಿಂದ ೧೦೦೪ ಏರಿದೆ ಎಂದಿದ್ದಾರೆ.
೨೦೧೦ ಮತ್ತು ೨೦೧೨ ರ ಅವಧಿಯಲ್ಲಿ ಸವನ್ನಾ ಆನೆಗಳ ಸಂತತಿಯ ಐದನೇ ಒಂದು ಭಾಗ ಅಂದರೆ ೧ ಲಕ್ಷ ಕಾಡಾನೆಗಳನ್ನು ಭೇಟೆಯಲ್ಲಿ ಕೊಲ್ಲಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
"ಈ ಭೇಟೆಗಳನ್ನು ಕೂಡಲೆ ತಪ್ಪಿಸದೇ ಹೋದರೆ ಪರಿಸರದಲ್ಲಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅಸಮತೋಲನ ಉಂಟಾಗಲಿದೆ" ಎಂದು ವರದಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


