ಪೋಷಕಾಂಶಗಳ ಆಗರ ಅಲಸಂದೆ
ಕಾಳಿನ ಬೆಳೆಗಳಲ್ಲಿ ಅಲಸಂದೆ ಪ್ರಮುಖವಾದುದದ್ದು. ಹಲವು ಪೋಷಕಾಂಶಗಳು ಇದರಲ್ಲಿ ಯಥೇಚ್ಛವಾಗಿವೆ. ಇದನ್ನು..

ಕಾಳಿನ ಬೆಳೆಗಳಲ್ಲಿ ಅಲಸಂದೆ ಪ್ರಮುಖವಾದುದದ್ದು. ಹಲವು ಪೋಷಕಾಂಶಗಳು ಇದರಲ್ಲಿ ಯಥೇಚ್ಛವಾಗಿವೆ. ಇದನ್ನು ಇದನ್ನು ವರ್ಷದ 12 ತಿಂಗಳೂ ಬೆಳೆಯಬಹುದು.
ಬೆಳೆಯುವ ವಿಧಾನ
ನೀರಾವರಿ, ಮಳೆಯಾಶ್ರಿತವಾಗಿಯೂ ಬೆಳೆಯಬಹುದು. ಜಮೀನು ಹದ ಮಾಡಿ ಕೊಟ್ಟಿಗೆ ಗೊಬ್ಬರ ಹಾಕಿದ ನಂತರ ಸಾಲಿನಿಂದ ಸಾಲಿಗೆ 14 ಇಂಚು ಅಂತರದಲ್ಲಿ ಬೀಜ ಬಿತ್ತನೆ ಮಾಡಬೇಕು. ಬೀಜದಿಂದ ಬೀಜಕ್ಕೆ 5 ಇಂಚು ಅಂತರವಿದ್ದರೆ ಸಾಕು. ಇದರ ಜತೆ ನವಣೆ, ಸಜ್ಜೆ, ಮೆಕ್ಕೆಜೋಳ, ತೊಗರಿ ಸೇರಿದಂತೆ ಇತರೆ ಬೆಳೆಗಳನ್ನು ಅಂತರ ಬೆಳೆಯಾಗಿ ಹಾಕಬಹುದು. ಬಿತ್ತಿದ 15 ದಿನದ ನಂತರ ಒಮ್ಮೆ ಯಡೆ (ಸಾಲು ಮಾಡುವುದು) ಹೊಡೆಯಬೇಕು. ಮೂರುವರೆ ತಿಂಗಳೊಳಗೆ ಫಸಲು ಕೈಗೆ ಬರುತ್ತದೆ. ಫಸಲು ಪೂರ್ತಿ ಬಂದ ನಂತರ ಗಿಡವನ್ನು ಬೇರು ಸಮೇತ ಕೀಳಬಾರದು. ಯಾಕೆಂದರೆ ಬೇರಿನಲ್ಲಿ ಭೂಮಿಗೆ ಬೇಕಾಗುವ ಹಲವು ಪೋಷಕಾಂಶಗಳು ಇರುತ್ತವೆ. ಹಾಗಾಗಿ ಬೇರನ್ನು ಕೀಳಬಾರದು ಎಂದು ಅನುಭವಿ ರೈತರು ಹೇಳುತ್ತಾರೆ. ಎಕರೆಗೆ ಬಿತ್ತಲು 5 ಕೆಜಿ ಬೀಜ ಬೇಕಾಗುತ್ತದೆ. ಇಳುವರಿ ಎಕರೆಗೆ 8ರಿಂದ 12 ಕ್ವಿಂಟಲ್‌ವರೆಗೆ ಬರುತ್ತದೆ.
ತಳಿಗಳು
ಕೆಂಪು ಅಲಸಂದೆ, ಬಿಳಿ ಅಲಸಂದೆ, ಬಿಳಿ ಮೂಗು ಮತ್ತು ಕೆಂಪು ಮೂಗು ಅಲಸಂದೆ ಎಂಬ ತಳಿಗಳು ಹೆಚ್ಚು ಬಳಕೆಯಲ್ಲಿವೆ.
ರೋಗಗಳು
ಅಲಸಂದೆಗೆ ಹವಾಮಾನಕ್ಕನುಗುಣವಾಗಿ ರೋಗಗಳು ಬರುತ್ತವೆ. ಆ ಪೈಕಿ ಎಲೆ ಮುಟುರು ರೋಗ, ಬೂದಿ ರೋಗ ಪ್ರಮುಖವಾದವುಗಳು. ಅದೇ ರೀತಿ ಜಿಗಿ ಹುಳು, ಹಸಿರು ಹುಳು ದುಪಳಿ ಮಾಡಬಹುದು.
ಮಣ್ಣು
ಸಾಮಾನ್ಯವಾಗಿ ಫಲವತ್ತತೆ ಹೆಚ್ಚು ಇರುವ ಎಲ್ಲ ನಮೂನೆಯ ಮಣ್ಣಲ್ಲಿ ಅಲಸಂದೆ ಬೆಳೆಯಬಹುದು. ಕಪ್ಪು ಮಣ್ಣಲ್ಲಿ ಇಳುವರಿ ಹೆಚ್ಚು ಬರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗುಂಡೇನಟ್ಟಿ ಗ್ರಾಮದ ಶಂಕರ ಲಂಗಟಿ(9972150378) ಅವರನ್ನು ಸಂಪರ್ಕಿಸಬಹುದು.
-ಮಹೇಶ್ ಅರಳಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


