ವರ್ಷವಿಡೀ ಬೆಳೆಯುವ ಸಜ್ಜೆ
ಕ್ಯಾಲ್ಸಿಯಂ, ನ್ಯೂಟ್ರಿಜನ್‌ಗಳ ಆಗರವಾದ ಸಜ್ಜೆ ಅತ್ಯುತ್ತಮ ಆಹಾರವೂ ಹೌದು. ಹಲವು ಬಗೆಯ ಔಷಧಿಯ ಗುಣ ಸಜ್ಜೆಯ ಒಡಲಲ್ಲಿ ಅಡಗಿದೆ...

ಕ್ಯಾಲ್ಸಿಯಂ, ನ್ಯೂಟ್ರಿಜನ್‌ಗಳ ಆಗರವಾದ ಸಜ್ಜೆ ಅತ್ಯುತ್ತಮ ಆಹಾರವೂ ಹೌದು. ಹಲವು ಬಗೆಯ ಔಷಧಿಯ ಗುಣ ಸಜ್ಜೆಯ ಒಡಲಲ್ಲಿ ಅಡಗಿದೆ.
ಬೆಳೆಯುವ ವಿಧಾನ
ಸಜ್ಜೆಯನ್ನು ಮಳೆ ಮತ್ತು ನೀರಾವರಿ ಆಶ್ರಿತವಾಗಿಯೂ ಬೆಳೆಯಬಹುದು. ಮಳೆಯಾಶ್ರಿತವಾಗಿ ಬೆಳೆಯುವುದಾದರೆ ಜೂನ್ ತಿಂಗಳು ಸಕಾಲ. ನೀರಾವರಿ ಮೂಲಕ ವರ್ಷದ ಎಲ್ಲ ತಿಂಗಳಲ್ಲೂ ಬೆಳೆಯಬಹುದು. ಜಮೀನು ಹದ ಮಾಡಿದ ಬಳಿಕ ಸಾಲಿನಿಂದ ಸಾಲಿಗೆ 14 ಇಂಚು ಅಂತರದಲ್ಲಿ ಬೀಜ ಬಿತ್ತಬೇಕು. ಬಳಿಕ ಕನಿಷ್ಠ 2 ಬಾರಿ ಬೆಳೆಯಲು ಯಡೆ ಹೊಡೆಯಬೇಕು. ಕಳೆ ಬಾರದಂತೆ ನಿಯಂತ್ರಣ ಕೈಗೊಳ್ಳಬೇಕು. ಹೆಚ್ಚಿನ ನಿಯಂತ್ರಣ ಕ್ರಮ ಬಯಸದು. ಬಿತ್ತಿದ ಮೂರುವರೆ ತಿಂಗಳಿಂದ ನಾಲ್ಕು ತಿಂಗಳೊಳಗೆ ಫಸಲು ಕೈಗೆ ಬರುತ್ತದೆ. ಎಕರೆಗೆ 8ರಿಂದ 14 ಕ್ವಿಂಟಲ್‌ವರೆಗೆ ಇಳುವರಿ ಪಡೆಯಬಹುದು. ಸಾಮಾನ್ಯವಾಗಿ ಎಲ್ಲ ನಮೂನೆಯ, ಅದರಲ್ಲೂ ಮುಖ್ಯವಾಗಿ ಕಡಿಮೆ ಫಲವತ್ತತೆ ಇರುವ ಮಣ್ಣಲ್ಲಿ ಬೆಳೆಯಬಹುದು. ಮರಳು ಮಿಶ್ರಿತ ಕೆಂಪು ಮಣ್ಣಲ್ಲಿ ಚೆನ್ನಾಗಿ ಇಳುವರಿ ಬರುತ್ತದೆ.
ತಳಿಗಳು
ಸಜ್ಜೆಯಲ್ಲಿ ಪ್ರಮುಖವಾಗಿ ಮುಳ್ಳು ಸಜ್ಜೆ, ಕೋಣ ಸಜ್ಜೆ ಮತ್ತು ಜವಾರಿ ಸಜ್ಜೆ ಎಂಬ ತಳಿಗಳು ರಾಜ್ಯದಲ್ಲಿ ಹೆಚ್ಚು ಚಾಲ್ತಿಯಲ್ಲಿವೆ.
ರೋಗಗಳು
ಬೂದಿ ರೋಗ, ಬೆಂಕಿ ರೋಗ ಬರಬಹುದು. ಕೆಲವೊಮ್ಮೆ ಕಾಳಿನ ಹಾಲು ಸೋರುವ ರೋಗ ತಗುಲಬಹುದು. ಬೀಜೋಪಚಾರ ಮಾಡುವುದರಿಂದ ರೋಗವನ್ನು ಸಾಕಷ್ಟು ಪ್ರಮಾಣದಲ್ಲಿ ತಡೆಗಟ್ಟಬಹುದು.
ಉಪಯೋಗ
ಸಜ್ಜೆಯಲ್ಲಿ ಬಹಳಷ್ಟು ಔಷಧಿಯ ಗುಣಗಳಿವೆ. ಮುಖ್ಯವಾಗಿ ಮಲಬದ್ಧತೆ ನಿವಾರಣೆಗೆ ಸಜ್ಜೆ ಸಹಕಾರಿ. ಅಲ್ಲದೆ, ಸಕ್ಕರೆ ಕಾಯಿಲೆ, ರಕ್ತದೊತ್ತಡವನ್ನು ನಿಯಂತ್ರಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗುಂಡೇನಟ್ಟಿಯ ಶಂಕರ ಲಂಗಟಿ (9972150378) ಅವರನ್ನು ಸಂಪರ್ಕಿಸಬಹುದು.
-ಮಹೇಶ್ ಅರಳಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


