ಕೃಷಿ-ಪರಿಸರ

ಪರಿಸರ ಪರಿಹಾರ

ಪರಿಸರ ಪರಿಹಾರ
Published On :

ವಿಶ್ವ ಪರಿಸರ ದಿನ ಕಳೆಯಿತು. ಹಾಗೆಂದ ಮಾತ್ರಕ್ಕೆ ಆ ದಿನ ಮಾತ್ರ ಇದನ್ನು ಆಚರಿಸಬೇಕೆಂದೇನೂ ಇಲ್ಲ. ಪ್ರತಿದಿನ ನಮಗೆ ಪರಿಸರ ಹಬ್ಬ ಆಗಬೇಕು. ಈ ನಿಟ್ಟಿನಲ್ಲಿ ನಮ್ಮ ಮನ ಮಿಡಿಯುತ್ತಿರಬೇಕು.
ಶಾಲಾ ಮಕ್ಕಳನ್ನು ನಗರದೆಲ್ಲೆಡೆ ಬಿಸಿಲಿನಲ್ಲಿ ನಡೆಸಿ ಪರಿಸರದ ಬಗ್ಗೆ ಘೋಷಣೆ ಹೇಳಿಸಬಹುದು. ಅಥವಾ ಸೆಲೆಬ್ರಿಟಿಗಳಿಂದ ಸಭೆ ಸಮಾರಂಭ ನಡೆಸಿಯೂ ಪರಿಸರ ಬಗ್ಗೆ ಭಾಷಣ ಮಾಡಿಸಬಹುದು. ಆದರೆ ಇದೇನೇ ಇರಲಿ ಜನಸಾಮಾನ್ಯರಾದ ನಾವು ಏನು ಮಾಡಬೇಕು. ಇಲ್ಲಿದೆ ನೋಡಿ ಟಿಪ್ಸ್

  •     ನಗರ ಪ್ರದೇಶದಲ್ಲಿರುವವರು ತಮ್ಮ ಕಾರು, ಬೈಕ್ ಅನ್ನು ಮನೆಯಲ್ಲೇ ನಿಲ್ಲಿಸಿ ಬಸ್ ಹತ್ತಿ. ಇದನ್ನು ಒಂದು ದಿನವಾದರೂ ಮಾಡಿ, ಈ ನಿಟ್ಟಿನಲ್ಲಿ ಇಂಧನ ಉಳಿತಾಯವಾಗಲಿ.
  •     ಆದರೆ ಈ ನಿರ್ಧಾರವನ್ನು ಎಷ್ಟು ಜನ ಕೈಗೊಂಡಾರು ಎಂಬುದೂ ಒಂದು ಪ್ರಶ್ನೆಯೇ? ಏಕೆಂದರೆ ನನ್ನೊಬ್ಬನಿಂದಲೇ ಬದಲಾವಣೆ ಅಸಾಧ್ಯ. ನಾನೊಬ್ಬ ಹೀಗೆ ಮಾಡಿದರೆ ಏನು ಮಹಾ ಸಾಧಿಸಬಹುದು ಎಂಬ ಚಿಂತನೆ ಸಾಕಷ್ಟು ಜನರಲ್ಲಿ ಇರುತ್ತದೆ. ಆದರೆ ಹನಿ ಹನಿ ಕೂಡಿದರೆ ಹಳ್ಳ ಎಂಬುದು ತಿಳಿದಿರಲಿ. ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವಕ್ಕೆ ಹೇಗೆ ಎಲ್ಲರೂ ಕಟ್ಟುನಿಟ್ಟಾಗಿ ಭಾಗವಹಿಸಬೇಕೋ ಹಾಗೇ ಪರಿಸರ ದಿನ ಅಥವಾ ಯಾವುದಾದರೂ ಒಂದು ನಿಗದಿತ ದಿನ ಬಸ್‌ನಲ್ಲೇ ಸಂಚರಿಸುವಂತೆ ಸರ್ಕಾರ ಆದೇಶಿಸಬೇಕಿದೆ.
  •     ಪ್ಲಾಸ್ಟಿಕ್ ಚೀಲ ಬೇಡ. ಇದು ಮಾತ್ರ ಒಂದು ದಿನಕ್ಕಷ್ಟೆ ಸೀಮಿತಗೊಳಿಸಬೇಡಿ. ಅನುದಿನವೂ ಈ ಬಗ್ಗೆ ಜಾಗೃತರಾಗಿರಿ. ಪ್ಲಾಸ್ಟಿಕ್ ಅನ್ನು ಬಳಸಲೇಬೇಡಿ. ಅಂಗಡಿಯಾತ ಪ್ಲಾಸ್ಟಿಕ್ ಚೀಲ ಕೊಟ್ಟರೂ ಬೇಡ ನಾನು ಬದಲಿ ಚೀಲ ತಂದಿದ್ದೇನೆ ಎಂದು ಹೇಳಿ. ಆತನಿಗೂ ಇನ್ಮುಂದೆ ಇವುಗಳನ್ನು ಯಾರಿಗೂ ಕೊಡಬೇಡ ಎಂಬುದಾಗಿ ತಿಳಿಹೇಳಿ. ಮಾರುಕಟ್ಟೆಗೆ ಹೋಗುವಾಗ ನಿಮ್ಮ ಜತೆ ಸದಾ ಒಂದು ಚೀಲವಿರಲಿ.
  •     40 ಮೈಕ್ರಾನ್‌ಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ನಿಷೇಧಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆದರೆ ಇದು ರಾಜ್ಯದ ಎಲ್ಲೆಡೆ ಸಮರ್ಪಕವಾಗಿ ಜಾರಿಯಾಗಿಲ್ಲ. ಇದರ ಕಟ್ಟುನಿಟ್ಟಿನ ಜಾರಿಗೆ ಮುಖ್ಯಮಂತ್ರಿಗಳು ಶ್ರಮಿಸಬೇಕು.
  •     ಗೃಹಿಣಿಯರು ಜಾಗೃತಿ ಹೊಂದುವ ಅಗತ್ಯವಿದೆ. ಮನೆ ಕಸದ ಜತೆ ಪ್ಲಾಸ್ಟಿಕ್ ಅನ್ನು ಸೇರಿಸದೆ, ಪ್ರತ್ಯೇಕವಾಗಿ ತೆಗೆದಿಡಬೇಕು. ಮರು ಬಳಕೆಗೆ ರದ್ದಿಯವರಿಗೆ ಕೊಡಬೇಕು. ಪ್ಲಾಸ್ಟಿಕ್ ಚೀಲಗಳಲ್ಲಿ ಅವುಗಳನ್ನು ಕಟ್ಟಿ ಬೀದಿಗೆ ಎಸೆಯಬಾರದು.
  •     ಮನೆಯಲ್ಲಿ ಅಥವಾ ಹೊರಗಡೆ ನಲ್ಲಿಗಳಿಂದ ನೀರು ಅನಗತ್ಯ ಪೋಲಾಗುತ್ತಿದ್ದರೆ ಅವುಗಳನ್ನು ತಕ್ಷಣ ಕಟ್ಟಿ. ನೀವು ಒಬ್ಬರು ಈ ರೀತಿ ಮಾಡುವುದನ್ನು ಯಾರಾದರು ಗಮನಿಸಿದಲ್ಲಿ ಅವರೂ ನಂತರದಲ್ಲಿ ನಿಮ್ಮನ್ನು ಅನುಸರಿಸಬಹುದು. ಇದರಿಂದ ಜೀವಜಲದ ರಕ್ಷಣೆಯಾಗುತ್ತದೆ. ನೀರನ್ನು ಬೇಕಾಬಿಟ್ಟಿಯಾಗಿ ಬಳಸಬೇಡಿ.
  •     ವಿದ್ಯುತ್‌ನ ಅನಗತ್ಯ ಬಳಕೆ ಬೇಡ. ಮನೆಯ ಎಲ್ಲ ಲೈಟ್‌ಗಳ ಬಳಕೆ ಬೇಡವೇ ಬೇಡ. ಹಾಲ್‌ನಲ್ಲಿ ಟಿವಿ ಹಾಕಿ ಅಡುಗೆ ಕೋಣೆಯಲ್ಲಿ ಕೂರಬೇಡಿ. ಅಗತ್ಯ ಇಲ್ಲದಿದ್ದರೆ ಬಂದ್ ಮಾಡಿ.
- ಡಾ. ರೇವತಿ ದೇಸಾಯಿ
 revatigh@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.