ಕೃಷಿ-ಪರಿಸರ

ಸಾಯ್ಸತ್ತೆ!

ಚೋಟುದ್ದ ಇಲ್ಲ. ಆದ್ರೆ ಭಾರಿ ಅಪಾಯಕಾರಿ. ಉದ್ದ ಅಬ್ಬಬ್ಬಾ ಅಂದರೆ ಎರಡಿಂಚು ಅರ್ಥಾತ್ ಐದು ಸೆಂಟಿ ಮೀಟರ್ ಅಷ್ಟೆ. ತಾಕತ್ತು ...

ಸಾಯ್ಸತ್ತೆ!
Published On :

ಇದರ ದೇಹದಲ್ಲಿದೆ ಕಾರ್ಕೋಟಕ ವಿಷ

ಚೋಟುದ್ದ ಇಲ್ಲ. ಆದ್ರೆ ಭಾರಿ ಅಪಾಯಕಾರಿ. ಉದ್ದ ಅಬ್ಬಬ್ಬಾ ಅಂದರೆ ಎರಡಿಂಚು ಅರ್ಥಾತ್ ಐದು ಸೆಂಟಿ ಮೀಟರ್ ಅಷ್ಟೆ. ತಾಕತ್ತು ಮಾತ್ರ ವಿಪರೀತ. ಒಮ್ಮೆಲೇ ಹತ್ತು ಮಂದಿಯನ್ನು ಕೊಲ್ಲಬಲ್ಲದು! ಇದೂ ಒಂದು ಬಗೆಯ ಕಪ್ಪೆ ಅಂದರೆ ಅಚ್ಚರಿಪಡ್ತೀರಿ.  ಈ ಕಪ್ಪೆಯ ಹೆಸರಿನಲ್ಲೇ ವಿಷವಿದೆ. ಗೋಲ್ಡನ್ ಪಾಯಿಸನ್ ಡಾರ್ಟ್ ಫ್ರಾಗ್ ಅಂತ ಅದನ್ನು ಕರೀತಾರೆ.  ಬಂಗಾರವರ್ಣದ ಈ ವಿಷಕಾರಿ ಕಪ್ಪೆಗಳು ಕೊಲಂಬಿಯಾದ ಫೆಸಿಫಿಕ್ ಮಹಾಸಾಗರದ ದಡದಲ್ಲಿ, ಅತಿ ಸಣ್ಣ ಪ್ರಮಾಣದಲ್ಲಿ ಮಳೆ ಬೀಳುವ ಕಾಡಿನಲ್ಲಿ ಕಂಡುಬರುತ್ತವೆ. ಮನುಷ್ಯರೂ ಸೇರಿದಂತೆ ಬಹಳ ಬಗೆಯ ಪ್ರಾಣಿಗಳನ್ನು ಬಲಿ ಪಡೆದಿವೆ. ಹೀಗಾಗಿ ವಿಶ್ವದ ಅತಿ ಅಪಾಯಕಾರಿ ಕಾಡುಗಳ ಪಟ್ಟಿಯಲ್ಲಿ ಈ ವಿಷಕಾರಿ ಕಪ್ಪೆಗಳು ವಾಸಿಸುವ ಕಾಡು ಕೂಡ ಎಂದು ಪರಿಗಣಿತವಾಗಿದೆ.
ಕೊಲಂಬಿಯಾದಲ್ಲಿನ ಎಂಬೆರಾ ಎಂಬ ಕಾಡು ಜನಾಂಗ ಹೆಚ್ಚು ವಾಸವಾಗಿದೆ. ಅವರು ಈ ಕಪ್ಪೆಯನ್ನು ಬೇಟೆಗಾಗಿ ಬಳಸುತ್ತಾರೆ ಎಂಬುದು ಮಾಹಿತಿ. ಈ ಬಂಗಾರವರ್ಣದ ಕಪ್ಪೆಯ ವಿಷವನ್ನು ಊದುಭರ್ಚಿ (ಬ್ಲೋಗನ್)ಯ ತುದಿಗೆ ಹಚ್ಚುತ್ತಾರೆ. ನಂತರ ತಾವು ಬೇಟೆಯಾಡಬೇಕೆಂದಿರುವ (ಮೊಲ, ಕಾಡುಹಂದಿ, ಪಕ್ಷಿಗಳು) ಪ್ರಾಣಿಗಳ ಮೈಮೇಲೆ ಬಾಣ ಹೊಡೆಯುತ್ತಾರೆ. ತಕ್ಷಣ ಆ ಪ್ರಾಣಿ ಅಲ್ಲಿಯೇ ಅಸುನೀಗುತ್ತದೆ.
ಈ ವಿಷಯುಕ್ತ ಕಪ್ಪೆಗಳಲ್ಲಿ ನೂರಕ್ಕೂ ಅಧಿಕ ಜಾತಿಗಳಿವೆ. ಅತಿ ಕಡಿಮೆ ಅಂದರೆ ಒಂದು ಇಂಚು (2.5 ಸೆಂ.ಮೀ.)ನಷ್ಟು ಉದ್ದನೆಯ ವಿಷಯುಕ್ತ ಕಪ್ಪೆಗಳಿವೆ.

ಮೈಬಣ್ಣ, ಆಹಾರ
ಬಂಗಾರವರ್ಣವೊಂದೇ ಇದರ ಮೈಬಣ್ಣವಲ್ಲ. ಕಿತ್ತಳೆ, ತಿಳಿಹಸಿರು, ತಿಳಿನೀಲಿ ಸೇರಿದಂತೆ ವಿವಿಧ ರೂಪಗಳಲ್ಲಿಯೂ ಈ ವಿಷಜಂತು ನಮಗೆ ಕಾಣಸಿಗುತ್ತದೆ. ಇದು ಪಕ್ಕಾ ಮಾಂಸಹಾರಿ. ಚಿಟ್ಟೆಗಳು, ಚಿಮ್ಮುಂಡಿ ಹುಳ, ಇರುವೆ, ಗೆದ್ದಲು ಹುಳ, ಜೀರುಂಡೆಯಂತಹ ಹುಳಗಳು ಪ್ರಮುಖ ಆಹಾರ. ಇನ್ನೊಂದು ಪ್ರಮುಖ ಅಂಶವೆಂದರೆ, ಈ ಎಲ್ಲ ಹುಳುಗಳನ್ನು ಕಪ್ಪೆಯು ತನ್ನಿಂದ ಉತ್ಪಾದನೆಯಾಗುವ ವಿಷದಿಂದಲೇ ಬೇಟೆಯಾಡುತ್ತದೆ. ಈ ವಿಷಜಂತುವಿನ ಬಗ್ಗೆ ತುಂಬಾ ಉತ್ಸುಕರಾಗಿರುವ ಕೆಲವು ವನ್ಯಜೀವಿ ಅಥವಾ ವನ್ಯಪ್ರಾಣಿ ಸಂಶೋಧಕರು ಆಶ್ಚರ್ಯವನ್ನೂ ವ್ಯಕ್ತಪಡಿಸಿದ್ದಾರೆ.

ವಿಷದಿಂದ ಜೀವ ರಸ
ಗೋಲ್ಡನ್ ಪಾಯಿಸನ್ ಡಾರ್ಟ್ ಫ್ರಾಗ್‌ಗಳು ಉತ್ಪಾದಿಸುವ ವಿಷಕಾರಿಯಿಂದ ಏನಾದರೂ ಔಷಧವನ್ನು ತಯಾರಿಸಬಹುದೇ ಎಂಬ ಬಗ್ಗೆಯೂ ಸಂಶೋಧನೆ ನಡೆಸಿದ್ದಾರೆ. ಅದರಲ್ಲಿ ಸ್ವಲ್ಪ ಪ್ರಮಾಣದ ಯಶಸ್ಸೂ ಸಿಕ್ಕಿದೆ. ನೋವು ನಿವಾರಕ ಔಷಧಕ್ಕೆ ಈ ಕಪ್ಪೆಯ ವಿಷ ಪ್ರಬಲವಾಗಿ ಕೆಲಸ ಮಾಡಬಲ್ಲದು ಎಂಬ ಅಂಶವನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

- ಬ್ರಹ್ಮಾನಂದ ಎನ್. ಹಡಗಲಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.