ಕಾಶ್ಮೀರದ ಆಯೆಶಾ ಅಜೀಜ್ ಭಾರತದ ಕಿರಿಯ ಪೈಲಟ್!
ಗುರಿ ಮತ್ತು ಪರಿಶ್ರಮವಿದ್ದರೆ ಎಂತಹ ಕ್ಲಿಷ್ಠ ಗುರಿಯನ್ನು ಸಾಧಿಸಬಹುದು ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ ಕಾಶ್ಮೀರದ ಆಯೆಶಾ ಅಜೀಜ್...

ಬೆಂಗಳೂರು: ಗುರಿ ಮತ್ತು ಪರಿಶ್ರಮವಿದ್ದರೆ ಎಂತಹ ಕ್ಲಿಷ್ಠ ಗುರಿಯನ್ನು ಸಾಧಿಸಬಹುದು ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ ಕಾಶ್ಮೀರದ ಆಯೆಶಾ ಅಜೀಜ್.
ಹೌದು ಭಾರತದ ಕಿರಿಯ ಪೈಲಟ್ ಎಂಬ ಖ್ಯಾತಿಗೆ ಭಾಜನರಾಗಿರುವ ಆಯೆಶಾ ಅಜೀಜ್ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯವಳು. ಬಾಲ್ಯದಿಂದಲು ವಿಮಾನದಲ್ಲಿ ಹಾರಾಡುವ ಕನಸು ಹೊತ್ತಿದ್ದ ಆಯೆಶಾ 20ನೇ ವಯಸ್ಸಿಗೆ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾಳೆ.
ಚಿಕ್ಕ ವಯಸ್ಸಿನಿಂದಲೆ ಪೈಲಟ್ ಆಗುವ ಕನಸು ಕಾಣುತ್ತಿದ್ದ ಆಯೆಶಾ ಕಾಶ್ಮೀರದಲ್ಲಿ ಪ್ರತಿ ವರ್ಷ ಎರಡು ಅಥವಾ ಮೂರು ಬಾರಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಳಂತೆ. ಈ ವೇಳೆ ವಿಮಾನ ಟೇಕ್ ಆಫ್ ಹಾಗೂ ಲ್ಯಾಂಡ್ ಆಗುವ ಅನುಭವದ ರೋಮಾಂಚನವನ್ನು ಅನುಭವಿಸುತ್ತಿದೆ. ಆದರೆ ನನ್ನ ಸಹೋದರ ಭಯದಿಂದ ಮಲಗಿಬಿಡುತ್ತಿದ್ದ ಎಂದು ಹೇಳಿದ್ದಾರೆ.
ಇನ್ನು ತನಗೆ ನಾಸಾದಲ್ಲಿ 2 ತಿಂಗಳ ಅಡ್ವಾನ್ಸ್ ಡೇ ಸ್ಪೇಸ್ ಟ್ರೈನಿಂಗ್ ಕೋರ್ಸ್ ಮಾಡಲು ಅವಕಾಶ ಸಿಕ್ಕಿದ್ದು, ಈ ವೇಳೆ ಜಾನ್ ಮ್ಯಾಬ್ರೈಡ್ ರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ನಾನು ಪೈಲಟ್ ಆಗುವ ಕನಸಿಗೆ ಪ್ರೇರಣೆಯಾದರು ಗಗನಸಖಿ ಸುನಿತಾ ವಿಲಿಯಮ್ಸ್ ಅವರನ್ನು 2013 ಅಥವಾ 2014ರಲ್ಲಿ ಭೇಟಿಯಾಗಿ ಅವರ ಅನುಭವದ ಮಾತುಗಳನ್ನು ಕೇಳಿಸಿಕೊಂಡಿದ್ದೆ ಎಂದು ಆಯೆಶಾ ಅಜೀಜ್ ಸಂತಸದಿಂದ ಹೇಳಿಕೊಂಡಿದ್ದಾರೆ.
ಬಾಂಬೈನ ಪ್ಲೈಯಿಂಗ್ ಕ್ಲಬ್ ನ 40ನೇ ಬ್ಯಾಚ್ ನಲ್ಲಿ ಮೂರನೇ ವರ್ಷದ ವಿಮಾನಯಾನ ತರಭೇತಿ ಪಡೆಯುತ್ತಿದ್ದು, ನನ್ನೊಂದಿಗೆ ನಾಲ್ವರು ಮಹಿಳೆಯರು ಮಾತ್ರ ತರಭೇತಿ ಪಡೆಯುತ್ತಿದ್ದರು. ಮೂರನೇ ವರ್ಷದಲ್ಲಿ ಸುಮಾರು 80 ಗಂಟೆಗಳ ಕಾಲ ವಿಮಾನ ಚಾಲನೆ ಮಾಡಿದ ಬಳಿಕ ಅಂದರೆ 200 ಗಂಟೆಗಳ ವಿಮಾನ ಪ್ರಯಾಣದ ಬಳಿಕ ನನಗೆ ವಾಣಿಜ್ಯ ಪೈಲಟ್ ಪರವಾನಗಿ ದೊರಕಿದೆ ಎಂದು ಆಯೆಶಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


