ಇಂಟರ್ನ್ಯಾಷನಲ್ ಕೆಮಿಸ್ಟ್ರಿ ಒಲಂಪಿಯಾಡ್ ಗೆ ಬೆಂಗಳೂರು ವಿದ್ಯಾರ್ಥಿ ಆಯ್ಕೆ
ಬೆಂಗಳೂರಿನ ಎ.ಇ.ಸಿ.ಎಸ್ ಮ್ಯಾಗ್ನೋಲಿಯಾ ಮಾರುತಿ ಶಾಲೆಯ ಅಮಿತ್ ಎಸ್. ದೇಶ್‌ಪಾಂಡೆ ಇಂಟರ್ನ್ಯಾಷನಲ್ ಕೆಮಿಸ್ಟ್ರಿ ಒಲಂಪಿಯಾಡ್ ಗೆ ಆಯ್ಕೆಯಾಗಿದ್ದಾರೆ.

ಬೆಂಗಳೂರು: ಬೆಂಗಳೂರಿನ ಎ.ಇ.ಸಿ.ಎಸ್ ಮ್ಯಾಗ್ನೋಲಿಯಾ ಮಾರುತಿ ಶಾಲೆಯ ಅಮಿತ್ ಎಸ್. ದೇಶ್‌ಪಾಂಡೆ ಇಂಟರ್ನ್ಯಾಷನಲ್ ಕೆಮಿಸ್ಟ್ರಿ ಒಲಂಪಿಯಾಡ್ ಗೆ ಆಯ್ಕೆಯಾಗಿದ್ದಾರೆ.
ಇಂಟರ್ನ್ಯಾಷನಲ್ ಕೆಮಿಸ್ಟ್ರಿ ಒಲಂಪಿಯಾಡ್, ಶಾಲಾ ವಿಭಾಗದಲ್ಲಿ ರಸಾಯನ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಪ್ರತಿ ವರ್ಷವೂ ನಡೆಯುವ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಾಗಿದೆ. ಈ ಸ್ಪರ್ಧೆಗೆ ಭಾರತದಾದ್ಯಂತ ಆಯ್ಕೆಯಾಗಿರುವ 4 ವಿದ್ಯಾರ್ಥಿಗಳ ಪೈಕಿ ಅದರಲ್ಲಿ ಬೆಂಗಳೂರಿನ ಅಮಿತ್ ಎಸ್ ದೇಶ್‌ಪಾಂಡೆ ಒಬ್ಬರಾಗಿದ್ದು ಎಫ್‌ಐಐಟಿಜೆಇಇ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆಯ್ಕೆಗೂ ಮುನ್ನ ನಾಲ್ಕು ಸುತ್ತುಗಳ ಪ್ರಾಯೋಗಿಕ ಮತ್ತು ಥಿಯರಿ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಭಾಗವಹಿಸಿದ್ದ 30 ವಿದ್ಯಾರ್ಥಿಗಳ ಪೈಕಿ ಭಾರತದಿಂದ ಒಟ್ಟು 4 ವಿದ್ಯಾರ್ಥಿಗಳು ಅಂತಿಮವಾಗಿ ಆಯ್ಕೆಯಾಗಿದ್ದಾರೆ.
ಕೆಮಿಸ್ಟ್ರಿ ಒಲಂಪಿಯಾಡ್ ಗೆ ಆಯ್ಕೆಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮಿತ್, ತನಗೆ ರಸಾಯನಶಾಸ್ತ್ರ ವಿಭಾಗದಲ್ಲಿ ಅತೀವ ಆಸಕ್ತಿ ಇದ್ದು, ಎಫ್‌ಐಐಟಿಜೆಇಇ ಸಂಸ್ಥೆಯ ಪರಿಣಾಮಕಾರಿ ತರಬೇತಿ ಒಲಂಪಿಯಾಡ್ ಗೆ ಆಯ್ಕೆಯಾಗಲು ನೆರವಾಗಿದೆ ಎಂದು ತಿಳಿಸಿದ್ದಾರೆ. ಶಾಲಾ ಸಮಯದ ನಂತರ ಸಾವಯವ ರಸಾಯನಶಾಸ್ತ್ರಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಹೆಚ್ಚು ಓದುವುದಾಗಿ ಅಮಿತ್ ಮಾಹಿತಿ ನೀಡಿದ್ದಾರೆ.
ಅಮಿತ್ ಇಂಟರ್ನ್ಯಾಶನಲ್ ಕೆಮಿಸ್ಟ್ರಿ ಒಲಂಪಿಯಾಡ್ ಗೆ ಆಯ್ಕೆಯಾಗಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಎಫ್‌ಐಐಟಿಜೆಇಇ ಸಂಸ್ಥೆಯ ಮುಖ್ಯಸ್ಥ ಗೌರವ್ ಗೊಯಲ್ ಇಂಟರ್‌ನ್ಯಾಷನಲ್ ಕೆಮಿಸ್ಟ್ರಿ ಒಲಂಪಿಯಾಡ್ ನಂತಹ ಸ್ಪರ್ಧೆಗಳಿಂದ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಲಭಿಸಿದೆ. 2012ರಲ್ಲಿ ಬೆಂಗಳೂರಿನ ಅರವಿಂದಂ ಭಟ್ಟಾಚಾರ್ಯ ಕೋರಿಯಾದಲ್ಲಿ ನಡೆದ ಅಂತಾರಾಷ್ಟ್ರಿಯ ಖಗೋಳ ವಿಜ್ಞಾನ ಸ್ಪರ್ಧೆಯಲ್ಲಿ ಭಾಗಿಯಾಗಿ ಚಿನ್ನದ ಪದಕ ಗೆದಿದ್ದರು. 2013ರಲ್ಲಿ ಗ್ರಿಸ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸೀನಿಯರ್ ಒಲಿಂಪಿಯಾಡ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಇದೀಗ ಅವರಂತೆಯೇ ಅಮಿತ್ ಕೂಡ ಆಯ್ಕೆಯಾಗಿದ್ದು ಅವರಿಗೆ ಶುಭ ಕೋರುತ್ತೇವೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


