ಕನ್ನಡದ ತೆಲುಗು ಗೊಂಬೆ
ಕನ್ನಡದ ತಾರೆಯರ ಪರನಾಡಿನಲ್ಲಿ, ಹೊರನಾಡಿನ ನಟಿಯರು ಕನ್ನಡದ ತೆರೆಯಲ್ಲಿ ಮಿಂಚುವ ಆಮದು ಪ್ರಕ್ರಿಯೆ ಕೇವಲ ಸಿನಿಮಾಕ್ಕಷ್ಟೇ ಸೀಮಿತವಲ್ಲ. ನೃತ್ಯಕ್ಕೂ ವಿಸ್ತರಿಸಿಕೊಳ್ಳುತ್ತದೆ.

ಅಮೂಲ್ಯ ನೃತ್ಯಕಾಣಿಕೆ
ಕನ್ನಡದ ತಾರೆಯರ ಪರನಾಡಿನಲ್ಲಿ, ಹೊರನಾಡಿನ ನಟಿಯರು ಕನ್ನಡದ ತೆರೆಯಲ್ಲಿ ಮಿಂಚುವ ಆಮದು ಪ್ರಕ್ರಿಯೆ ಕೇವಲ ಸಿನಿಮಾಕ್ಕಷ್ಟೇ ಸೀಮಿತವಲ್ಲ. ನೃತ್ಯಕ್ಕೂ ವಿಸ್ತರಿಸಿಕೊಳ್ಳುತ್ತದೆ. ಇದಕ್ಕೆ ನಮ್ಮ ಅಮೂಲ್ಯಳೇ ಸಾಕ್ಷಿ...
ದಕ್ಷಿಣ ಕನ್ನಡ ಜಿಲ್ಲೆಯ ಮಾರಣಕಟ್ಟೆಯ ಕುಮಾರಿ ಅಮೂಲ್ಯ ಮಂಜ ಸಾಂಪ್ರದಾಯಿಕ ಭರತನಾಟ್ಯದಲ್ಲಿ ಗಮನಾರ್ಹ ಸಾಧನೆಗೈದು ನೆರೆರಾಜ್ಯದ ರಾಜಧಾನಿ ಹೈದರಾಬಾದ್ನಲ್ಲಿ ನಾಟ್ಯಾಸಕ್ತರ ಹುಬ್ಬೇರಿಸಿದ್ದಾರೆ. ಮಾರಣಕಟ್ಟೆಯಿಂದ ಮೂರುದಶಕಗಳ ಹಿಂದೆಯೇ ಹೈದರಾಬಾದ್ಗೆ ಬಂದು ಹೆಸರಾಂತ ಹೊಟೆಲ್ ಉದ್ಯಮಿಯೆನಿಸಿದ ತಂದೆ ಕೃಷ್ಣಮೂರ್ತಿ ಮಂಜ ಮತ್ತು ತಾಯಿ ಶಾಂತಾ ಅವರ ಪ್ರೋತ್ಸಾಹ ಮಗಳ ಹೆಜ್ಜೆಗೆ ನರ್ತನದ ಸೊಬಗು ನೀಡಿದೆ.
2004ರಲ್ಲಿ ಖ್ಯಾತ ನರ್ತಕಿ ಗೀತಾಗಣೇಶನ್ರ ಬಳಿ ಶಿಷ್ಯತ್ವ ಸ್ವೀಕರಿಸಿ, ತನ್ನ ಪ್ರೌಢಿಮೆಯಿಂದ ಕೇವಲ ಒಂದೇ ವರ್ಷದಲ್ಲಿ ಶಂಕರಮಠದಲ್ಲಿ ಸಾರ್ವಜನಿಕ ಪ್ರದರ್ಶನ ನೀಡಿದ ಅಮೂಲ್ಯ, 2011ರಲ್ಲಿ ರವೀಂದ್ರ ಭಾರತಿಯಲ್ಲಿ ಬೃಹತ್ ಕಲಾಸಕ್ತರೆದುರು ರಂಗಪ್ರವೇಶ ಮಾಡಿದರು. ಕೇವಲ 15 ವರ್ಷ ವಯಸ್ಸಿನ ಅಮೂಲ್ಯ ಮಂಜ ಬಾಲ್ಯದಿಂದಲೂ ಓದಿನಲ್ಲಿ ಮುಂದೆ. ಸಾರಥಿ ಹೈಸ್ಕೂಲಿನಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದ ಆ ಅರಳುಗಂಗಳ ಬಾಲೆ, ಪ್ರಸಕ್ತ ಜಾನ್ಸನ್ ಗ್ರಾಮರ್ ಶಾಲೆಯಲ್ಲಿ ಪಿಯುಸಿ ಅಭ್ಯಸಿಸುತ್ತಿದ್ದಾರೆ.
2009ರಲ್ಲಿ ಸುಪ್ರಸಿದ್ಧ ಯಕ್ಷಗಾನ ಕಲಾವಿದ ತೀರ್ಥಹಳ್ಳಿ ಗೋಪಾಲ ಆಚಾರ್ಯರ ಯಕ್ಷಗಾನದಲ್ಲಿ ಶಿವ ತಾಂಡವ ನೃತ್ಯ ಪ್ರದರ್ಶನದ ದಿನ ಪಾರ್ವತಿ ಪಾತ್ರಧಾರಿಗೆ ಹುಷಾರಿರಲಿಲ್ಲ. ಎಲ್ಲರೂ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದಾಗ ಆಗಿನ್ನೂ 11ರ ವಯ್ಯಸಿನ ಅಮೂಲ್ಯ ಸ್ವಯಂಸ್ಫೂರ್ತಿಯಿಂದ ಕೇವಲ ಎರಡು ಗಂಟೆ ತರಬೇತಿಯಲ್ಲಿ ಆಚಾರ್ಯರೇ ಹುಬ್ಬೇರಿಸುವಂತೆ ಕುಮ್ಚೆಟ್ಟು ಹಾಕಿ ಕುಣಿದು ಎಲ್ಲರನ್ನೂ ಅಚ್ಚರಿಗೊಳಿಸಿದ್ದರು ಎಂದು ಆಕೆಯ ತಾಯಿ ನೆನೆಯುತ್ತಾರೆ. ಇದವರೆಗೆ ಅಮೂಲ್ಯ ರವೀಂದ್ರ ಭಾರತೀಯ ಭವ್ಯ ಸಭಾಂಗಣ, ಕಾಕಿನಾಡದ ಸರಸ್ವತಿ ಗಾನ ಸಭಾದ ವಾರ್ಷಿಕೋತ್ಸವ, ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿ, ತಿರುಪತಿಯ ಬ್ರಹ್ಮೋತ್ಸವ ವೇಳೆ ವೆಂಕಟೇಶ್ವರನ ಎದುರು, ಮುಂಬೈ ಉತ್ತರ ಕಾಮಾಕ್ಷಿ ದೇಗುಲದ ಶರನ್ನವರಾತ್ರಿ ಉತ್ಸವದಲ್ಲಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ದೇಗುಲಗಳು ಹಾಗೂ ಸಂಘ ಸಂಸ್ಥೆಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಅಮೂಲ್ಯಳ ಪ್ರತಿಭೆಯನ್ನರಸಿ ಹಲವು ಪ್ರಶಸ್ತಿಗಳ ಬಂದಿವೆ.
-ಕೆ.ಶ್ರೀನಿವಾಸರಾವ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


