ಖಿನ್ನ ನಿನ್ನ ಮುದ್ದಾಡಲಾರೆ...
ಆಗ ತಾನೇ ನಿವೃತ್ತಿಯಾಗಿದೆ. ಹೆಂಡತಿ ತೀರಿಕೊಂಡಿದ್ದಾಳೆ. ಆರೋಗ್ಯ ಹೇಳಿದ ಮಾತು ಕೇಳುತ್ತಿಲ್ಲ. ಮಗ ..

ಆಗ ತಾನೇ ನಿವೃತ್ತಿಯಾಗಿದೆ. ಹೆಂಡತಿ ತೀರಿಕೊಂಡಿದ್ದಾಳೆ. ಆರೋಗ್ಯ ಹೇಳಿದ ಮಾತು ಕೇಳುತ್ತಿಲ್ಲ. ಮಗ ಸೊಸೆಗೆ ತಾನು ಅಷ್ಟೇನು ಪ್ರಾಮುಖ್ಯ ವ್ಯಕ್ತಿಯಲ್ಲ. ಹಿಂದಿನಂತೆ ನೆಗೆಯಲು ದೇಹ ರೆಡಿಯಿಲ್ಲ. ಹೀಗೆ ವಯಸ್ಸಾದಂತೆ ಖಿನ್ನತೆಗೆ ಜಾರಲು ಬೇಡದ ಹಲವು ಕಾರಣಗಳು ಸಿಕ್ಕೀತು. ವಿಪರೀತ ತಿನ್ನುವ ಮಾತ್ರೆಗಳೂ ಹಲವು ಮಾನಸಿಕ ಕಾಯಿಲೆಗಳನ್ನು ತರುತ್ತವೆ. ಆದರೆ ಕುಟುಂಬಕ್ಕೆ ಇವರು ಖಿನ್ನತೆಗೆ ಜಾರಿರಬಹುದೆಂದು ತಿಳಿಯುವುದಾದರೂ ಹೇಗೆ?
ಖಿನ್ನತೆಯ ಲಕ್ಷಣಗಳು
- ಸದಾ ಬೇಜಾರು.
- ಏನೋ ಯೋಚಿಸುತ್ತಾ ಕುಳಿತಲ್ಲೇ ಕುಳಿತಿರುವುದು.
- ಎಡೆಬಿಡದ ಸುಸ್ತು.
- ತೂಕ ಇಳಿಯುವಿಕೆ, ಹಸಿವಿಲ್ಲದಿರುವುದು.
- ಹಿಂದೆ ಇಷ್ಟಪಡುತ್ತಿದ್ದ ಗೆಳೆಯರೊಂದಿಗೆ ಬೆರೆಯಲೂ ಹಿಂದೇಟು.
- ನಿದ್ದೆಯಲ್ಲಿ ಏರುಪೇರು. ವಿಪರೀತ ನಿದ್ದೆ ಮಾಡುವುದು, ಇಲ್ಲವೇ ನಿದ್ದೆಗೆಟ್ಟು ಕುಳಿತಿರುವುದು.
- ನಾನೊಬ್ಬ ನಿಮಗೆಲ್ಲ ಹೊರೆ ಎಂದು ಪದೆ ಪದೆ ಹೇಳುವುದು.
- ಆಲ್ಕೋಹಾಲ್ ಮತ್ತು ಔಷಧಿಗಳನ್ನು ಹೆಚ್ಚು ಬಳಸಲು ತೊಡಗುವುದು.
- ಆತ್ಮಹತ್ಯೆಯ ಯತ್ನಗಳು ಇಲ್ಲವೇ ಸಾವಿನ ಕುರಿತೇ ಯೋಚನೆ, ಮಾತು.
ಹೆಚ್ಚಿನ ಬಾರಿ ದೈಹಿಕ ಕಾಯಿಲೆಗಳಿಲ್ಲವೆಂದು ವೈದ್ಯರು ಹೇಳಿದ ಮೇಲೂ ತಲೆನೋವು, ಹೊಟ್ಟೆನೋವಿನ ಬಗ್ಗೆ ಪದೆ ಪದೆ ದೂರುವುದು, ನರಳುವುದು ವಯಸ್ಸಾದವರಲ್ಲಿ ಮಾನಸಿಕ ಖಿನ್ನತೆಯನ್ನು ಸೂಚಿಸುತ್ತದೆ. ಹಾಗೆಂದು ಬೇಕಂತ ಅವರು ಕಾಯಿಲೆ ಹೇಳುತ್ತಿರುವುದಿಲ್ಲ.
ಚಿಕಿತ್ಸಕ ಮಾರ್ಗಗಳು
- ಇಂಥ ಲಕ್ಷಣಗಳು ಕಂಡುಬಂದಲ್ಲಿ ಮಾನಸಿಕ ತಜ್ಞರನ್ನು ಕಾಣುವುದೊಳಿತು. ಆ್ಯಂಟಿ ಡಿಪ್ರೆಸೆಂಟ್ ಮಾತ್ರೆಗಳು ಮೂಡನ್ನು ಬದಲಿಸಿ ಖುಷಿಯಾಗಿಡುತ್ತವೆ.
- ಹಿರಿಯರನ್ನು ಅತ್ಯಂತ ಪ್ರೀತಿಯಿಂದ ಕಾಣಿರಿ.
- ಮೊಮ್ಮಕ್ಕಳೊಂದಿಗೆ ಹೆಚ್ಚು ಕಾಲ ಕಳೆಯಲು ಬಿಡಿ. ಆದಷ್ಟು ಅವರಿಗೆ ಒಂಟಿತನ ಕಾಣದಂತೆ ನೋಡಿಕೊಳ್ಳಿ.
- ಪ್ರತಿದಿನ ಬೆಳಿಗ್ಗೆ ಅವರು ವ್ಯಾಯಾಮ ಮಾಡುವಂತೆ ನೋಡಿಕೊಳ್ಳಿ. ನೀವೂ ಜೊತೆ ಸೇರಿ ಮಾಡಿದರೆ ಇನ್ನೂ ಒಳಿತು. ಇಲ್ಲವೇ ಹತ್ತಿರದ ಉದ್ಯಾನವನಕ್ಕೆ ವಾಕ್ ಹೋಗಿಬರಲಿ.
- ಮನೆಯಲ್ಲೊಂದು ಸಾಕುಪ್ರಾಣಿಯಿದ್ದರೆ ಹಿರಿಯರಿಗೆ ಅದರ ಪಾಲನೆಪೋಷಣೆಯ ಜವಾಬ್ದಾರಿ ವಹಿಸಿ.
- ಅವರ ಆಹಾರ, ನಿದ್ರೆಯ ಬಗ್ಗೆ ನಿಗಾ ವಹಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


