ಸಾಧನೆ

ಬೊಂಬಾಟ್ ಬೊಮ್ನಳ್ಳಿ!

ಪತ್ರಿಕೆಗಳನ್ನು ಓದುವಾಗ ಗಂಭೀರ ವಿಷಯಗಳ ನಡುವೆ ಕ್ಷಣ ಕಾಲವಾದರೂ ರಾಜಕೀಯ ವಿಡಂಬನೆ...

ಬೊಂಬಾಟ್ ಬೊಮ್ನಳ್ಳಿ!
Published On :

ಪತ್ರಿಕೆಗಳನ್ನು ಓದುವಾಗ ಗಂಭೀರ ವಿಷಯಗಳ ನಡುವೆ ಕ್ಷಣ ಕಾಲವಾದರೂ ರಾಜಕೀಯ ವಿಡಂಬನೆ, ನಗೆ ಹುಟ್ಟಿಸುವ ವ್ಯಂಗ್ಯಚಿತ್ರಗಳು ನಮ್ಮ ಗಮನಕ್ಕೆ ಬಂದಿರುತ್ತವೆ. ಆದರೆ ಈ ವ್ಯಂಗ್ಯಚಿತ್ರ ರಚಿಸಿದ ವ್ಯಂಗ್ಯಚಿತ್ರಕಾರರ ಕುರಿತಾಗಿ ನಾವು ಅಷ್ಟಾಗಿ ಯೋಚಿಸುವುದಿಲ್ಲ. ನಾಡಿನಲ್ಲಿ ಹತ್ತು ಹಲವಾರು ಜನ ವ್ಯಂಗ್ಯಚಿತ್ರಗಳನ್ನು ರಚಿಸುತ್ತಾರೆ. ಇವರ ಮಧ್ಯೆ ವಿಭಿನ್ನವಾಗಿ ನಿಲ್ಲುವ, ವ್ಯಂಗ್ಯಚಿತ್ರ ಲೋಕದಲ್ಲಿ ತನ್ನದೇ ಛಾಪು ಮೂಡಿಸಿರುವ ಕಲಾವಿದ ಜಿ.ಎಂ. ಬೊಮ್ನಳ್ಳಿ.
ಉತ್ತರ ಕನ್ನಡದ ಶಿರಸಿಯ ಬೊಮ್ನಳ್ಳಿ ನಿವಾಸಿಯಾದ ಇವರು, ವಿಶಿಷ್ಟವಾದ ವ್ಯಂಗ್ಯ ರೇಖೆಗಳಿಂದ ಪ್ರಸಿದ್ಧಿ. ಬಿಕಾಂ ಪದವೀಧರ ಹಾಗೂ ಧಾರವಾಡ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಚಿತ್ರಕಲಾ ಡಿಪ್ಲೊಮಾ. ಹಳ್ಳಿಗಾಡಿನ ಅಪ್ಪಟ ಕಲಾವಿದ. ಇವರ ನೇರ ಮನದ ಡೊಂಕು ರೇಖೆಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಅಲ್ಲದೆ ಹೊರ ನಾಡಿನಲ್ಲೂ ಅಚ್ಚಾಗಿವೆ. 1993ರಿಂದ ಈವರೆಗೆ ಹತ್ತು ಸಾವಿರಕ್ಕಿಂತ ಹೆಚ್ಚು ವ್ಯಂಗ್ಯಚಿತ್ರಗಳನ್ನು ರಚಿಸಿದ್ದಾರೆ! ಕೃಷಿಯ ಜೊತೆ ವ್ಯಂಗ್ಯಚಿತ್ರ ಕೃಷಿ ಮಾಡುತ್ತಿರುವ ಬೊಮ್ನಳ್ಳಿ ಸಮಾಜದ ಆಗುಹೋಗುಗಳು ಮತ್ತು ನಮ್ಮೊಳಗಿನ ಚಿಕಿತ್ಸಕ ಬುದ್ಧಿ ವ್ಯಂಗ್ಯಚಿತ್ರ ರಚನೆಗೆ ಪ್ರೇರಣೆ ಎನ್ನುತ್ತಾರೆ.
ಇವರ ವ್ಯಂಗ್ಯಚಿತ್ರಗಳು ಹೆಚ್ಚಾಗಿ ರಾಜಕೀಯ, ಕೃಷಿ, ವಾಣಿಜ್ಯ, ಸಾಮಾಜಿಕ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತವೆ. ಕಲಾವಿದನಿಗೆ ಹಣಕ್ಕಿಂತ ಓದುಗರ ಅಭಿಮಾನ, ಪ್ರೀತಿ, ಮೆಚ್ಚುಗೆ, ಮಾಧ್ಯಮದವರ ಬೆಂಬಲ, ಮನಸ್ಸಿನ ತೃಪ್ತಿ ಮುಖ್ಯ ಎಂಬುದು ಇವರ ಅಂಬೋಣ..
ಒಬ್ಬ ಭರವಸೆಯ ವ್ಯಂಗ್ಯಚಿತ್ರಕಾರರಾಗಿರುವ ಜಿ.ಎಂ. ಬೊಮ್ಮಳ್ಳಿ ಮನೆಯ ಜವಾಬ್ದಾರಿಯೊಂದಿಗೆ ಕೃಷಿ, ಚಿತ್ರಕಲೆ, ಕಲಾವಿಮರ್ಶೆ, ಲೇಖನ, ಛಾಯಾಗ್ರಹಣ, ಗಣೇಶ ಮೂರ್ತಿ ತಯಾರಿಕೆ, ಕಲಾವಿದರ- ಕಲಾಸಂಘದ ಒಡನಾಟ ಹೊಂದಿದ್ದಾರೆ. ಬೊಮ್ನಳ್ಳಿಯ ಈ ಎಲ್ಲ ಕಾರ್ಯಕ್ಕೆ ಅರ್ಧಾಂಗಿ ಅರ್ಚನಾ ಸಾಥ್ ಇದೆ. ಇವರ ಈ ಬಹುಮುಖ ಪ್ರತಿಭೆಯನ್ನು ಗುರುತಿಸಿ ಸುಳ್ಯದ ಪ್ರಥಮ ಹವ್ಯಕ ಸಮ್ಮೇಳನದಲ್ಲಿ ಸನ್ಮಾನಿಸಲಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರ ವ್ಯಂಗ್ಯಚಿತ್ರಕ್ಕೆ ಪ್ರಥಮ ಬಹುಮಾನ, ಶಿರಸಿ ಕಥಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘ ಹಾಗೂ ರಾಜ್ಯ ಸಾರಿಗೆ ಇಲಾಖೆಯ ಸಹಯೋಗದಲ್ಲಿ ನಡೆದ ವ್ಯಂಗ್ಯಚಿತ್ರ ಸ್ಪರ್ಧೆಯಲ್ಲಿ ಬಹುಮಾನ, ಮಣಿಪಾಲದಲ್ಲಿ ಕಲಾಕುಟೀರ ಸಂಸ್ಥೆ ನಡೆಸಿದ ರಾಜ್ಯ ಮಟ್ಟದ ವ್ಯಂಗ್ಯಚಿತ್ರ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ... ಇನ್ನೂ ಮುಂತಾದೆಡೆ ಇವರು ಸನ್ಮಾನಿತರು.

-ಈರಣ್ಣ ಬೆಂಗಾಲಿ ರಾಯಚೂರು


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.