ಸಾಧನೆ

ನಟರಾಜ ಗಮನ

ನಟರಾಜ ಗಮನ
Published On :

ಒಬ್ಬೊಬ್ಬರಿಗೆ ಒಂದೊಂದು ಹವ್ಯಾಸ. ಈ ವೃತ್ತಿಗೂ ಪ್ರವೃತ್ತಿಗೂ ಸಂಬಂಧವೇ ಇರುವುದಿಲ್ಲ. ವೃತ್ತಿ ಯಾವುದಾದರೇನು ಮನಸ್ಸಿನ ಅಭಿರುಚಿ, ಆಸಕ್ತಿಗಳು ವಿಭಿನ್ನವಾದ ಪ್ರವೃತ್ತಿಯೆಡೆಗೆ ಸೆಳೆದುಕೊಂಡು ಹೋಗುತ್ತವೆ. ಸಮಾಜದಲ್ಲಿ ವಿಭಿನ್ನ ವ್ಯಕ್ತಿಯಾಗಿ ನಿಲ್ಲಿಸುತ್ತವೆ.
ಬೆಂಗಳೂರಿನ ವಿಜಯನಗರದ ಆಗುಂಬೆ ಎಸ್. ನಟರಾಜ್ ನಿವೃತ್ತ ಬ್ಯಾಂಕ್ ಉದ್ಯೋಗಿ. ಸರಳ, ಸಜ್ಜನ. ಇತಿಹಾಸದ ಬಗ್ಗೆ ತೀವ್ರ ಆಸಕ್ತಿ, ಕುತೂಹಲ. ಇದಕ್ಕೆ ಪೂರಕವೆಂಬಂತೆ ದೇಶ ಸುತ್ತಿದ್ದಾರೆ, ಕೋಶ ಓದಿದ್ದಾರೆ ಮತ್ತು ಅನೇಕ ಕೋಶಗಳನ್ನು ಬರೆದಿದ್ದಾರೆ. ತಮ್ಮ ಆದಾಯದ ಬಹುಪಾಲನ್ನು ದೇಶ- ಕೋಶಕ್ಕಾಗಿ ಖರ್ಚು ಮಾಡಿದ್ದಾರೆ.
ಆಗುಂಬೆ ಮನೆತನದವರಾದ ನಟರಾಜ್‌ಗೆ ಬಾಲ್ಯದಿಂದಲೆ ಬರಹದ ಕಡೆ ಒಲವು. ಇದಕ್ಕೆ ಪುಷ್ಠಿ ಎಂಬಂತೆ ಶಾಲಾ ಹಂತದಲ್ಲಿಯೇ ತಮ್ಮ ಜೀವನ ಚರಿತ್ರೆ ಬರೆದಿದ್ದನ್ನು ಮೆಲುಕು ಹಾಕಿಕೊಳ್ಳುತ್ತಾರೆ! ಈಗಾಗಲೆ ಭಾರತದ ಬಹುತೇಕ ಐತಿಹಾಸಿಕ ಸ್ಥಳಗಳನ್ನು, ಮೂರು ಬಾರಿ ಯೂರೋಪ್ ಪ್ರವಾಸ, ಹಾಗೆಯೇ ಸ್ಪೇನ್, ಗ್ರೀಸ್, ಮಸ್ಕಟ್, ಇಸ್ತಾಂಬುಲ್ ಅನ್ನು ಸಂದರ್ಶಿಸಿರುವ ಇವರು ಹನಿಗವನ, ಕಾದಂಬರಿ, ಜೀವನ ಚರಿತ್ರೆ ಮತ್ತು ಹಲವಾರು ಪ್ರವಾಸ ಕಥನಗಳನ್ನು ಬರೆದಿದ್ದಾರೆ.
ಪ್ರಶಸ್ತಿ-ಪುರಸ್ಕಾರಗಳ ಬೆನ್ನು ಹತ್ತದ ಇವರು ತಮ್ಮ ಹವ್ಯಾಸದ ಕುರಿತಾಗಿ ನಾನು ಅನ್ವೇಷಕನೂ ಅಲ್ಲ, ಇತಿಹಾಸಕಾರನೂ ಅಲ್ಲ, ನಾನೊಬ್ಬ ಪ್ರವಾಸಿಗ ಎನ್ನುತ್ತಾರೆ. ವಿದೇಶಿ ಪ್ರವಾಸಿಗರ ಜೊತೆ ಪ್ರವಾಸ ಕೈಗೊಂಡಿದ್ದು ತಮ್ಮ ಖಾಸಗಿ ಗ್ರಂಥಾಲಯದ ಒಡಲಲ್ಲಿ ಅಪರೂಪದ ಗ್ರಂಥಗಳ ದೊಡ್ಡ ಸಂಗ್ರಹವೇ ಇವರ ಬಳಿ ಇದೆ. ತಾವು ಓದಿದ ಪುಸ್ತಕಗಳಲ್ಲಿ ಮಾಡಿಕೊಂಡ ಟಿಪ್ಪಣಿಗಳು ಅಮೂಲ್ಯವಾದವುಗಳಾಗಿದ್ದು ಇವು ಲೇಖಕರಿಗೆ ಉಪಯೋಗಕಾರಿ. ಸದ್ಯ ಜಗತ್ತಿನ ಹತ್ತು ಪ್ರಮುಖ ನಗರಗಳ ಇತಿಹಾಸ ರಚನೆಯಲ್ಲಿ ಬ್ಯುಸಿಯಾಗಿರುವ ಇವರು ವಿದೇಶದ ಸ್ಮಾರಕಗಳ ಸಂರಕ್ಷಣೆ ಹೋಲಿಸಿದರೆ ನಮ್ಮ ಭವ್ಯ ಭಾರತದ ಸ್ಮಾರಕಗಳ ಸಂರಕ್ಷಣೆ ಇನ್ನೂ ಸರಿಯಾದ ರೀತಿಯಲ್ಲಿ ಆಗಬೇಕಿದೆ ಎನ್ನುತ್ತಾರೆ.



-ಈರಣ್ಣ ಬೆಂಗಾಲಿ, ರಾಯಚೂರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.