ಧ್ರುವ ಸಮುದ್ರ
ದೋಣಿ, ಹಡಗುಗಳು ತೇಲಿಕೊಂಡು ಹೋಗುವುದನ್ನು ನೋಡುವುದೇ ರೋಮಾಂಚನಕಾರಿ. ಅಂಥದರಲ್ಲಿ ಒಂದು ಸಣ್ಣ ಹಲಗೆಯಂಥ...

ಈ ಸಾಹಸೀ ಜಲಕ್ರೀಡೆಗೆ ಧೈರ್ಯ ಬೇಕು. ಸಮುದ್ರದ ಅಲೆಗಳ ಮೇಲೆ ದೊಡ್ಡ ದೊಡ್ಡ ದೋಣಿ, ಹಡಗುಗಳು ತೇಲಿಕೊಂಡು ಹೋಗುವುದನ್ನು ನೋಡುವುದೇ ರೋಮಾಂಚನಕಾರಿ. ಅಂಥದರಲ್ಲಿ ಒಂದು ಸಣ್ಣ ಹಲಗೆಯಂಥ ವಸ್ತುವಿನ ಮೇಲೆ ನಿಂತು ಸಮುದ್ರದ ಅಲೆಗಳನ್ನು ಭೇದಿಸುತ್ತಾ ದಡ ಸೇರುವುದು ರೋಚಕ ವಿಷಯ. ಇಂಥ ಸಾಹಸ ಕ್ರೀಡೆ ಸರ್ಫಿಂಗ್‌ನಲ್ಲಿ ಪಳಗಿದವರು ಧ್ರುವ. ಇವರು ಮುಲ್ಕಿಯ ಕರುಣಾಕರ್ ಹಾಗೂ ಪುಷ್ಪಲತ ದಂಪತಿ ಪುತ್ರ.
ಸರ್ಫಿಂಗ್ ಮಾತ್ರವಲ್ಲದೆ ಕಯಾಕಿಂಗ್, ಸ್ವಿಮ್ಮಿಂಗ್, ಯೋಗ, ಸ್ಕೇಟಿಂಗ್ ಧ್ರುವನ ಇತರೆ ಹವ್ಯಾಸಗಳು. 13ನೇ ವಯಸ್ಸಿನಲ್ಲಿ ಸರ್ಫಿಂಗ್ ಮಾಡಲು ಪ್ರಾರಂಭಿಸಿದ ಇವರಿಗೆ ಮಂತ್ರ ಸರ್ಫಿಂಗ್ ಕ್ಲಬ್‌ನ ಸ್ಥಾಪಕರಾದ ಸರ್ಫಿಂಗ್ ಸ್ವಾಮೀಜಿ ಹೆಚ್ಚಿನ ಮಾರ್ಗದರ್ಶನ ನೀಡಿದರು. ಜೊತೆಗೆ ತನ್ನ ಸರ್ಫಿಂಗ್ ಗೆಳೆಯರ ಸಲಹೆ ಹಾಗೂ ಪ್ರೋತ್ಸಾಹದೊಂದಿಗೆ ಬೆಳೆದ ಧ್ರುವ ಚೆನ್ನೈ, ಕೇರಳದ ಕೋವಲಂ ಬೀಚ್, ಒರಿಸ್ಸಾಗಳಲ್ಲಿ ನಡೆದ ರಾಷ್ಟ್ರಮಟ್ಟದ ಸರ್ಫಿಂಗ್ ಸ್ಪರ್ಧೆಗಳಲ್ಲಿ ಬೆಳ್ಳಿಯ ಪದಕಗಳು ಒಲಿದಿವೆ.
ಸರ್ಫಿಂಗ್ ದೈಹಿಕ- ಮಾನಸಿಕ ಶಿಸ್ತನ್ನು ಮತ್ತು ತಾಳ್ಮೆಯನ್ನು ವೃದ್ಧಿಸುತ್ತದೆ. ಅಂತೆಯೇ ಸಂತೋಷವನ್ನು ಕೊಡುತ್ತದೆ ಎನ್ನುವ ಧ್ರುವ, ಅನೇಕ ಆಸಕ್ತರಿಗೆ ತರಬೇತಿ ನೀಡಿದ್ದಾನೆ. ಪುತ್ತೂರು ಬಾಲವನ ಈಜುಕೊಳದ ನಿರ್ವಾಹಕರಾದ ಪಾರ್ಥ ಅವರ ಸಹಯೋಗದೊಂದಿಗೆ ಬಾಲವನದಲ್ಲಿ ಸರ್ಫಿಂಗ್ ತರಬೇತಿದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸರ್ಫಿಂಗ್ ಎಂಬ ಹೊಸ ಸಾಹಸೀ ಕ್ರೀಡೆಯನ್ನು ಭಾರತದಾದ್ಯಂತ ಹಬ್ಬಿಸಬೇಕು. ಅಂತಾರಾಷ್ಟ್ರೀಯ ಮಟ್ಟದ ಸರ್ಫಿಂಗ್ ಉತ್ಸವಗಳಲ್ಲಿ, ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದು ಇವರ ಕನಸು. ಈ ಕನಸು ನನಸಾಗಲಿ ಎಂದು ಹಾರೈಸೋಣ.
ನಿಮಗೂ ಸರ್ಫಿಂಗ್ ಕಲಿಯಬೇಕೆಂಬ ಆಸಕ್ತಿಯಿದ್ದಲ್ಲಿ ಸಂಪರ್ಕಿಸಿ ಮೊ. 9611587347.
- ಮೇಘಾ ಕುಕ್ಕುಜೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


