ಸಾಧನೆ

ನಿವೃತ್ತಿ ಬದುಕಿಗಲ್ಲ..

ನಿವೃತ್ತಿ ಬದುಕಿಗಲ್ಲ..
Published On :

ಪ್ರತಿಯೊಬ್ಬರ ಜೀವನದ ಬಹುಮುಖ್ಯ ಅಧ್ಯಾಯ ಆರಂಭವಾಗುವುದೇ ನಿವೃತ್ತಿ ಬಳಿಕ. ಸರಿಯಾಗಿ ಯೋಜನೆ ಹಾಕಿಕೊಂಡರೆ ನಿವೃತ್ತಿ ಬಳಿಕ ಜೀವನವನ್ನು ಖುಷಿಯಿಂದ ಕಳೆಯುವುದು ಕಷ್ಟಸಾಧ್ಯವಲ್ಲ.
ಯೋಜನೆ ಹಾಕಿಕೊಳ್ಳಿ
ನಿವೃತ್ತಿ ಆಗುವ ಮೊದಲೇ ನಾಳೆ ಏನು ಮಾಡಬೇಕು ಎನ್ನುವ ಕುರಿತ ಯೋಜನೆಗಳಿರಲಿ. ನಿವೃತ್ತಿ ಬಳಿಕ ಮನೆಯಲ್ಲೇ ಉಳಿಯಬೇಕೇ ಅಥವಾ ಸ್ವಂತ ಉದ್ಯಮ ಆರಂಭಿಸಬೇಕೇ? ಪಾರ್ಟ್‌ಟೈಂ ಕೆಲಸ ಮಾಡಬೇಕೇ ಎನ್ನುವ ಕುರಿತು ಮೊದಲೇ ನಿರ್ಧಾರ ಮಾಡಿಕೊಳ್ಳಿ.
ಕನಸು ನನಸು ಮಾಡಿಕೊಳ್ಳಿ
ಕೆಲಸದ ಒತ್ತಡ, ಕುಟುಂಬದ ಜಂಜಾಟದ ನಡುವೆ ಪತ್ನಿಯ ಜತೆಗೆ ಹಾಯಾಗಿ ಒಂದೈದು ದಿನ ಪ್ರವಾಸಕ್ಕೆ ಹೋಗಿ ಬರಲು ಸಾಧ್ಯವಾಗಿರುವುದೇ ಇಲ್ಲ. ಈಗ ನೀವು ನಿವೃತ್ತರಾಗುತ್ತಿದ್ದೀರಿ. ನಿಮಗೆ ಕೆಲಸದ ಕಿರಿಕಿರಿಯೇನು ಇಲ್ಲ. ಒಂದಷ್ಟು ದಿನ ನಿಮ್ಮ ಇಷ್ಟದ ಸ್ಥಳದಲ್ಲಿ ಹಾಯಾಗಿ ಇದ್ದು ಬನ್ನಿ. ಮನಸ್ಸು ಉಲ್ಲಸಿತವಾಗುತ್ತದೆ.
ಸ್ವಯಂಸೇವಕರಾಗಿ
ನಿವೃತ್ತಿ ಬಳಿಕ ಹೇಗೂ ಕೆಲಸದ ಒತ್ತಡ ಇರುವುದಿಲ್ಲ. ಹೆಚ್ಚಿನ ಅವಧಿಯಲ್ಲಿ ನೀವು ಮನೆಯಲ್ಲೇ ಇರುತ್ತೀರಿ. ಈ ವೇಳೆಯನ್ನು ಸ್ವಯಂ ಸೇವೆಯಲ್ಲಿ ಕಳೆಯಿರಿ. ಎನ್‌ಜಿಒಗಳಲ್ಲಿ ತೊಡಗಿಸಿಕೊಳ್ಳಿ. ಇದರಿಂದ ಮನಸ್ಸಿಗೂ ಖುಷಿಯಾಗುತ್ತದೆ. ಇನ್ನೊಬ್ಬರಿಗೆ ಸಹಾಯ ಮಾಡಿದ ಧನ್ಯತೆಯೂ ಸಿಗುತ್ತದೆ.
ಹೊಸ ಗೆಳೆಯರನ್ನು ಸಂಪಾದಿಸಿ
ಕೆಲಸ ಇಲ್ಲ ಅಂದ ಮಾತ್ರಕ್ಕೆ ಮನೆಯೊಳಗೇ ಕೂರಬೇಕೆಂದೇನೂ ಇಲ್ಲ. ಅಕ್ಕಪಕ್ಕದ ಊರಲ್ಲಿದ್ದರೂ ನಾನಾ ಕಾರಣಗಳಿಂದ ಭೇಟಿಯಾಗಲು ಸಾಧ್ಯವಾಗದ ಗೆಳೆಯರನ್ನು ನೋಡಿಕೊಂಡು ಬನ್ನಿ. ಕ್ಲಬ್‌ಗೆ ಹೋಗಿ. ಸಾರ್ವಜನಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಿ. ಹೊಸ ಹೊಸ ಗೆಳೆಯರನ್ನು ಸಂಪಾದಿಸಿ.
ಹೂಡಿಕೆ ಕುರಿತು ಮರುಪರಿಶೀಲನೆ ನಡೆಸಿ
ಈ ಹಿಂದೆ ನೀವು ತೆಗೆದುಕೊಂಡ ಹೂಡಿಕೆ ನಿರ್ಧಾರಗಳನ್ನು ಮರುಪರಿಶೀಲಿಸಲು ಇದು ಸಕಾಲ. ನಿವೃತ್ತಿಯ ಬಳಿಕ ತುರ್ತು ಸಂದರ್ಭಗಳಿಗೆಂದೇ ಒಂದಷ್ಟು ಹಣವನ್ನು ತೆಗೆದಿಟ್ಟುಕೊಳ್ಳಿ. ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡಿ. ಹಿರಿಯ ನಾಗರಿಕರಿಗೆ ಬ್ಯಾಂಕ್‌ಗಳು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತವೆ. ಈ ಕುರಿತು ಮಾಹಿತಿ ಪಡೆದುಕೊಳ್ಳಿ.
ಆರೋಗ್ಯದ ಕಡೆ ಗಮನನೀಡಿ
ಆರೋಗ್ಯದ ಕುರಿತು ಹೆಚ್ಚಿನ ಗಮನಹರಿಸುವುದು ಅತ್ಯಗತ್ಯ. ವೈದ್ಯರನ್ನು ನಿಯಮಿತವಾಗಿ ಭೇಟಿಯಾಗುತ್ತಿರಿ. ಸಕ್ಕರೆ, ಬಿಪಿ ಪ್ರಮಾಣವನ್ನು ಪದೇ ಪದೆ ಪರೀಕ್ಷಿಸಿಕೊಳ್ಳಿ.

= ಅ.ಮ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.