ಸಾಧನೆ

ಅಂಗವೈಕಲ್ಯ ಗೆದ್ದ ಗಂಗವ್ವ

ಅಂಗವೈಕಲ್ಯ ಗೆದ್ದ ಗಂಗವ್ವ
Published On :

ಅಂಗವೈಕಲ್ಯವಿದ್ದರೂ ಛಲದಿಂದ ಸ್ವಾವಲಂಬಿಯಾಗಿ ಬದುಕುತ್ತಿರುವ ಯುವತಿಯ ಯಶೋಗಾಥೆ ಇದು.
ಕಲಘಟಗಿ ತಾಲೂಕು ಮುತ್ತಗಿ ಗ್ರಾಮದ ಗಂಗವ್ವ ಲಕ್ಕಪ್ಪನವರ (26) ಎಡಗೈ, ಎಡಗಾಲು ಹಾಗೂ ಎಡ ಕುತ್ತಿಗೆಯ ಅಂಗವೈಕಲ್ಯ ಹೊಂದಿದ್ದರು. ಅವರು ಬದುಕುವುದೇ ಇಲ್ಲ ಎಂದು ವೈದ್ಯರು ಹೇಳಿದ್ದರೂ ಸಾವಿಗೇ ಸವಾಲೆಸೆದ ಈಕೆ, ಈಗ ಬಡ ಕುಟುಂಬಕ್ಕೆ ಆಧಾರವೂ ಆಗಿದ್ದಾರೆ. ಸಮರ್ಥನಂ ಅಂಗವಿಕಲ ಸಂಸ್ಥೆ ಮೂಲಕ ತರಬೇತಿ ಪಡೆದು ಬೆಂಗಳೂರಿನ ಮೆಗಾ ಮಾರ್ಟ್‌ನಲ್ಲಿ ಪ್ರತಿ ತಿಂಗಳು 10 ಸಾವಿರಕ್ಕೂ ಹೆಚ್ಚು ಸಂಬಳದ ನೌಕರಿ ಪಡೆದಿದ್ದಾರೆ.
ಗಂಗವ್ವಳ ಕಥೆ
ಹುಟ್ಟಿದ ನಾಲ್ಕು ವರ್ಷದಲ್ಲೇ ಗಂಗವ್ವಗೆ ದೈಹಿಕ ಸಮಸ್ಯೆಗಳು ಶುರುವಾದವು. ದೇಹದ ಎಡ ಭಾಗ ಶಕ್ತಿ ಕಳೆದುಕೊಂಡಿತು. ಬಡ ಕುಟುಂಬವಾದರೂ ಹೆತ್ತವರು ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು. ಆದರೆ, ಫಲ ನೀಡಲಿಲ್ಲ. ತಾನು ಅಂಗವಿಕಲೆ ಎಂದು ಮನೆಯಲ್ಲಿ ಕೂರದೇ ಸಮರ್ಥನಂ ಅಂಗವಿಕಲರ ಸಂಸ್ಥೆ ಒದಗಿಸಿದ ಅವಕಾಶ ಸದ್ಬಳಕೆ ಮಾಡಿಕೊಂಡು ಕಂಪ್ಯೂಟರ್, ಸಾಮಾನ್ಯ ಇಂಗ್ಲಿಷ್ ತರಬೇತಿ ಪಡೆದರು. ಐದು ತಿಂಗಳಿಂದ ಬೆಂಗಳೂರಿನ ಮೆಗಾಮಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.
ಏನೆಲ್ಲ ಸಾಧಿಸಬಹುದು!
'ಮೊದಲೇ ನಮ್ಮದು ಹಳ್ಳಿ ವಾತಾವರಣ. ಬಡ ಕುಟುಂಬ. ತಂದೆ ತೀರಿ ಹೋಗಿದ್ದಾರೆ. ತಾಯಿ ಹಾಗೂ ಅಣ್ಣ ಇದ್ದಾರೆ. ಅಂಗವಿಕಲತೆ ಇರುವ ಕಾರಣ ಯಾರೂ ನನಗೆ ಗೌರವ ಕೊಡುತ್ತಿರಲಿಲ್ಲ. ಬಹಳಷ್ಟು ನೊಂದಿದ್ದೆ. ಎಸ್ಸೆಸ್ಸೆಲ್ಸಿವರೆಗೆ ಶಿಕ್ಷಣ ಪಡೆದರೂ ಮನೆಯಲ್ಲಿ ಕೂರುವ ಸ್ಥಿತಿಯಿತ್ತು. ಆದರೆ, ಸಮರ್ಥನಂ ಸಂಸ್ಥೆ ಸಹಕಾರದಿಂದ ಸ್ವಾವಲಂಬಿಯಾಗಿದ್ದೇನೆ. ಕುಟುಂಬದ ಜವಾಬ್ದಾರಿ ಹೊತ್ತಿದ್ದೇನೆ. ಅಂಗವೈಕಲ್ಯಕ್ಕಾಗಿ ಮರುಗದೆ ಧೈರ್ಯದಿಂದ ಮುನ್ನುಗ್ಗಿದರೆ ಸಾಧನೆ ಅಸಾಧ್ಯವಲ್ಲ ಎಂಬುದನ್ನು ಅರಿತಿದ್ದೇನೆ' ಎನ್ನುತ್ತಾರೆ ಗಂಗವ್ವ.

= ಬಸವರಾಜ ಹಿರೇಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.