ಸಾಧನೆ

ಕೀರ್ತನಾ ಕೈಚಳಕ

ಗಣಿತವಾಗಲಿ, ಸಂಗೀತವಾಗಲಿ, ಚಿತ್ರಕಲೆಯಾಗಲಿ ಯಾವ ಮಕ್ಕಳಿಗೆ ಅವುಗಳ ಜತೆ ಚಿಕ್ಕಂದಿನಿಂದಲೇ ಹತ್ತಿರದ...

ಕೀರ್ತನಾ ಕೈಚಳಕ
Published On :

ಗಣಿತವಾಗಲಿ, ಸಂಗೀತವಾಗಲಿ, ಚಿತ್ರಕಲೆಯಾಗಲಿ ಯಾವ ಮಕ್ಕಳಿಗೆ ಅವುಗಳ ಜತೆ ಚಿಕ್ಕಂದಿನಿಂದಲೇ ಹತ್ತಿರದ ಒಡನಾಟವಿರುತ್ತದೆಯೋ ಅಂಥವರಿಗೆ ಸಾಧನೆ ಮಾಡಲು ಹೆಚ್ಚಿನ ಅವಕಾಶವಿರುತ್ತದೆ. ಹಾಗೇ ಭಾಷೆ ಕಲಿಯುವುದರಲ್ಲಿ, ಕಂಠಪಾಠ ಮಾಡುವುದರಲ್ಲೂ ಸುತ್ತಲಿನ ವಾತಾವರಣ ಹೆಚ್ಚಿನ ಸಹಾಯ ಮಾಡುತ್ತದೆ. ಸೂಕ್ತ ತರಬೇತಿಯಿಂದ ಮಕ್ಕಳು ಪ್ರತಿಭಾವಂತರಾಗುತ್ತಾರೆ ಎಂಬುದು ಹೆಚ್ಚಿನವರ ವಾದ. ಆದರೆ ಮಕ್ಕಳು ಮಾತ್ರ ಅದೆಲ್ಲವನ್ನೂ ಮೀರಿ ನಿಲ್ಲುತ್ತಾರೆ!
ವಿಶೇಷ ಪ್ರತಿಭಾವಂತಳಾದ ಕೀರ್ತನಾ ಎರಡೂ ಕೈಗಳಿಂದ ಏಕಕಾಲಕ್ಕೆ ಬರೆಯುತ್ತಾಳೆ. ಆಕೆ ಇದಕ್ಕಾಗಿ ಯಾವುದೇ ತರಬೇತಿ ಪಡೆದಿಲ್ಲ. ಕೀರ್ತನಾ ಬರೆಯಲು ಪ್ರಾರಂಭಿಸಿದ್ದೇ ಎಡಗೈಯಿಂದ. ನಂತರ ಶಾಲೆಗೆ ಸೇರಿದಾಗ ಆಕೆಯ ಟೀಚರ್ ಬಲಗೈಯಲ್ಲಿ ಬರೆಯುವಂತೆ ಒತ್ತಾಯಿಸಿದ್ದರು. ಆಕೆಯ ತಾಯಿಯಲ್ಲೂ ಈ ವಿಷಯ ತಿಳಿಸಿ, ಆಕೆಗೆ ಮನೆಯಲ್ಲಿ ಬಲಗೈಯಲ್ಲಿ ಬರೆಸುವಂತೆ ಹೇಳಿದ್ದರು. ಆದರೆ ಕೀರ್ತನಾಗೆ ಬಲಗೈಯಲ್ಲಿ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ ಆಕೆ ಹುಟ್ಟಾ ಎಡಚಳು!
ಒಮ್ಮೆ ಆಕೆಯ ಎಡಗೈ ಮೇಲೆ ಅಕಸ್ಮಾತ್ ಬಿಸಿ ಎಣ್ಣೆ ಬಿದ್ದು ಸುಟ್ಟುಹೋಯಿತು. ಅಲ್ಲಿಂದ ಆಕೆ ಬಲಗೈಯಿಂದ ಬರೆಯಲು ಪ್ರಾರಂಭಿಸಿದಳು. ಆದರೆ ಆಕೆ ಒಬ್ಬಳೇ ಇರುವಾಗ ಎರಡೂ ಕೈಯಲ್ಲಿ ಬರೆಯುವುದನ್ನು ಅಭ್ಯಾಸ ಮಾಡುತ್ತಿದ್ದಳು. ನಂತರ ಅದೇ ಅವಳಿಗೆ ಹವ್ಯಾಸವಾಗಿಹೋಯಿತು. ಬಲಗೈಯಿಂದ ಎಲ್ಲರಂತೆ ಬರೆಯವ ಕೀರ್ತನಾ, ಎಡಗೈಯಿಂದ ರಿವರ್ಸ್(ಮಿರರ್) ಸ್ಟೈಲ್‌ನಲ್ಲಿ ಬರೆಯುತ್ತಾಳೆ. ಅಂದರೆ ಆಕೆ ಎಡಗೈಯಿಂದ ಬರೆದ ಅಕ್ಷರಗಳನ್ನು ಕನ್ನಡಿಯ ಮೂಲಕ ಓದಬೇಕು. ಎರಡೂ ಕೈಯಿಂದ ಒಂದೇ ತೆರನಾಗಿ, ಮುದ್ದಾಗಿ ಬರೆಯುತ್ತಾಳೆ. ಈ ಹವ್ಯಾಸವನ್ನು ಹಾಗೇ ಮುಂದುವರಿಸಿಕೊಂಡು ಬಂದ ಆಕೆ ಹೋಮ್‌ವರ್ಕನ್ನೂ ಎರಡೂ ಕೈಯಿಂದ ಬರೆಯಲಾರಂಭಿಸಿದಳು. ಶಾಲೆಯ ಸ್ನೇಹಿತೆಯರಿಗೆಲ್ಲ ರಿವರ್ಸ್ ಲೆಟರ್‌ನಲ್ಲಿ ಅವರ ಹೆಸರನ್ನು ಬರೆದುಕೊಡುತ್ತಿದ್ದಳು. ಈಗ ನೋಟ್ಸನ್ನು ಕೂಡ ಎರಡೂ ಕೈಯಲ್ಲಿ ನೀಟಾಗಿ ತೆಗೆದುಕೊಳ್ಳುತ್ತಾಳೆ. ಬರೀ ಅಕ್ಷರಗಳನ್ನು ಮಾತ್ರವಲ್ಲ, ಸಂಖ್ಯೆಗಳನ್ನು, ಚಿಹ್ನೆಗಳನ್ನು ಕೂಡ ಬರೆಯುತ್ತಾಳೆ!
ಮಲ್ಲೇಶ್ವರಂನ ನಿರ್ಮಲಾರಾಣಿ ಗರ್ಲ್ಸ್ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ 13 ವರ್ಷದ ಕೀರ್ತನಾ ಆರ್. ರವೀಂದ್ರನಾಥ ಪ್ರಸಾದ್ ಹಾಗೂ ಮಂಜುಳಾರ ಹಿರಿಯ ಮಗಳು. ವಿಶೇಷವೆಂದರೆ ಆಕೆ ಕನ್ನಡ, ಹಿಂದಿ, ಇಂಗ್ಲಿಷ್ ಮೂರೂ ಭಾಷೆಗಳಲ್ಲೂ ಏಕಕಾಲಕ್ಕೆ ಎರಡೂ ಕೈಯಿಂದ ಸಲೀಸಾಗಿ ಬರೆಯಬಲ್ಲಳು!


- ಶಶಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.