ಶಿಕ್ಷಣ ಸೈನಿಕ
ಎಪ್ಪತ್ತರ ದಶಕದಲ್ಲಿ ಮಧ್ಯಪ್ರದೇಶವೆಂದರೆ ನೆನಪಾಗುವುದು ನಕ್ಸಲ್ ಹಾವಳಿ, ಡಕಾಯಿತಿ,

ಎಪ್ಪತ್ತರ ದಶಕದಲ್ಲಿ ಮಧ್ಯಪ್ರದೇಶವೆಂದರೆ ನೆನಪಾಗುವುದು ನಕ್ಸಲ್ ಹಾವಳಿ, ಡಕಾಯಿತಿ, ಕೊಲೆ, ಸುಲಿಗೆ. ಇಂತಹ ಪರಿಸ್ಥಿತಿಯಲ್ಲಿ ಅಲ್ಲಿ ಶಾಲೆ ಸ್ಥಾಪಿಸುವುದು, ನಾಗರಿಕತೆ ಪಾಠ ಹೇಳುವುದು, ಶಿಕ್ಷಣ ಕಲಿಸುವುದೆಲ್ಲ ಅಸಾಧ್ಯದ ಮಾತಾಗಿತ್ತು. ಆದರೆ ಈ ಎಲ್ಲ ಅಸಾಧ್ಯಗಳನೂ ಸಾಧ್ಯವಾಗಿಸಿದ ಅದ್ಭುತ ವ್ಯಕ್ತಿ, ಪದ್ಮಶ್ರೀ ಪುರಸ್ಕೃತ ಧರಮ್‌ಪಾಲ್ ಸೈನಿ.
1976ರಲ್ಲಿ ಬಸ್ತರ್‌ನ ಸಾಕ್ಷರತಾ ಪ್ರಮಾಣ ಕೇವಲ ಶೇ. 1! ಆಶ್ರಮ ಶಾಲೆ ಸ್ಥಾಪಿಸಿ ವಿಶೇಷವಾಗಿ ಹುಡುಗಿಯರಿಗೆ ಶಿಕ್ಷಣ ನೀಡಲು ಪ್ರಾರಂಭಿಸಿದಾಗ ಬಸ್ತರ್‌ನ ನಕ್ಷೆಯೇ ಬದಲಾಗಿಹೋಯಿತು. ಬಸ್ತರ್‌ನ 39,000 ಸ್ಕ್ವೇರ್ ಕಿ.ಮೀ. ವ್ಯಾಪ್ತಿಯಲ್ಲಿ 37 ಶಾಲೆಗಳನು ಸ್ಥಾಪಿಸಿದ ಆಶ್ರಮ, ಇಂದು 25 ಸಾವಿರಕ್ಕೂ ಅಧಿಕ ವಿದ್ಯಾರ್ಥಿನಿಯರಿಗೆ ಶಿಕ್ಷಣ ನೀಡುತ್ತಿದೆ.
ಧರಮ್‌ಪಾಲ್ ಸೈನಿ ಬಿಲ್ ಸೇವಾಸಂಘದಂಥ ಅನೇಕ ಬುಡಕಟ್ಟು ಸಂಸ್ಥೆಗಳಲ್ಲಿ ಗಾಂಧೀಜಿ ತತ್ತ್ವಗಳನು ಪ್ರಸಾರ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದವರು. ಒಮ್ಮೆ ಸೈನಿ ಹಿಂದಿ ದೈನಿಕವೊಂದರಲ್ಲಿ ಬಸ್ತರ್‌ನ ಪರಿಸ್ಥಿತಿಯ ಬಗ್ಗೆ ಬಂದ ವರದಿಯೊಂದನು ಓದಿ, ಬಸ್ತರನು ಉಳಿಸಬೇಕಾದರೆ ಮೊದಲು ಇಲ್ಲಿನ ಹೆಣ್ಣುಮಕ್ಕಳಿಗೆ ಶಿಕ್ಷಣ ಸಿಗಬೇಕು ಎನಿಸಿದ್ದೇ ತಮ್ಮ ಗುರುಗಳಾದ ವಿನೋಬಾ ಭಾವೆಯವರಲ್ಲಿ ಆಶ್ರಮ ಶಾಲೆ ಸ್ಥಾಪಿಸಲು ಅನುಮತಿ ಕೋರಿದರು. ವಿನೋಬಾ, ಕನಿಷ್ಠ ಹತ್ತು ವರ್ಷಗಳಾದರೂ ಈ ಆಶ್ರಮದಲ್ಲಿರಬೇಕೆಂಬ ಷರತ್ತಿನ ಮೇಲೆ 'ಭಾವೆ ಅವರ ತಾಯಿ ಮಾತಾ ರುಕ್ಮಿಣಿ ಭಾವೆ ಅವರ ಹೆಸರಿನಲ್ಲಿ ಆಶ್ರಮವೊಂದನು ಸ್ಥಾಪಿಸಲು ಅನುಮತಿ ನೀಡಿದರು.
ಧರಮ್‌ಪಾಲ್ ಸೈನಿ ಬಸ್ತರ್‌ಗೆ ಬಂದಾಗ ಅವರಿಗೆ 46 ವರ್ಷ ವಯಸ್ಸು. ಇಬ್ಬರು ಶಿಕ್ಷಕಿಯರು ಹಾಗೂ ಇಬ್ಬರು ಸಹಾಯಕರನೊಳಗೊಂಡ ಸೈನಿಯವರ ಕನಸಿನ ಯೋಜನೆ ಡಿಸೆಂಬರ್ 13, 1976ರಲ್ಲಿ ಸಾಕಾರಗೊಂಡಿತು. ಆದರೆ ಸವಾಲುಗಳು ಸಾಲುಸಾಲಾಗಿ ನಿಂತಿದ್ದವು.
ಶಾಲೆ ಪ್ರಾರಂಭಿಸಿ ಮೂರು ತಿಂಗಳ ನಂತರ ಕೇವಲ ನಾಲ್ಕು ಕುಟುಂಬಗಳು ತಮ್ಮ ಹೆಣ್ಣುಮಕ್ಕಳನು ಶಾಲೆಗೆ ಸೇರಿಸಲು ಒಪ್ಪಿಕೊಂಡರು. ಸೈನಿ ಛಲಬಿಡದೆ ಹಳ್ಳಿಹಳ್ಳಿ ತಿರುಗಿ ಅಲ್ಲಿನ ಜನರಿಗೆ ತಿಳಿವಳಿಕೆ ಹೇಳಲಾರಂಭಿಸಿದರು. ಅಂತಹ ಸಂದರ್ಭಗಳಲ್ಲಿ ಅವರನು ಅಪಹಾಸ್ಯ ಮಾಡಿದ, ಬೆದರಿಸಿದ ಘಟನೆಗಳೂ ನಡೆದವು.
ಸ್ಥಳೀಯರಿಗೆ ಸೈನಿಯವರಲ್ಲಿ ಭರವಸೆ ಮೂಡಿದಾಗ ಶಾಲೆಗೆ ಬರುವ ಮಕ್ಕಳ ಸಂಖ್ಯೆ ನಿಧಾನಕ್ಕೆ ಏರತೊಡಗಿತು. ಹಾಗೇ ಶಾಲೆಗಳ ಸಂಖ್ಯೆಯೂ ಹೆಚ್ಚಿತು. ನಕ್ಸಲ್‌ನ ತೀವ್ರ ಹಾವಳಿಯಿರುವ ಬರ್ಸೂರ್ ಕಣಿವೆ ತಪ್ಪಲಿನ ಮಾರ್ಗದಲ್ಲೂ ಶಾಲೆ ಸ್ಥಾಪಿಸಿದ ಹೆಗ್ಗಳಿಕೆ ಸೈನಿಯವರದು.
1988ರ ಸಮಯದಲ್ಲಿ ಬಸ್ತರ್‌ನ ಸುತ್ತಮುತ್ತ ನಕ್ಸಲ್ ಪ್ರಭಾವ ಅಧಿಕವಾಗಿತ್ತು. ಸರ್ಕಾರಿ ಶಾಲಾ ಶಿಕ್ಷಕರಷ್ಟೇ ಅಲ್ಲ, ಅಲ್ಲಿನ ಹೆಚ್ಚಿನ ಸರ್ಕಾರಿ ಕಚೇರಿಗಳಲ್ಲಿ ನೌಕರರೇ ಇರಲಿಲ್ಲ! ಕಾರಣ ನಕ್ಸಲ್ ಹಾವಳಿ. ಈ ಕಾರಣಕ್ಕಾಗಿಯೇ ಅನೇಕ ಸರ್ಕಾರಿ ಶಾಲೆಗಳನು ಮುಚ್ಚಲಾಗಿತ್ತು. ಆ ಸಂದರ್ಭದಲ್ಲಿ ಸೈನಿಯವರ ಕೆಲಸದಿಂದ ಪ್ರಭಾವಿತರಾದ ಅಂದಿನ ಮುಖ್ಯಮಂತ್ರಿ ಅರ್ಜುನ್ ಸಿಂಗ್ ಇನೂ ಮೂವತ್ತು ಸರ್ಕಾರಿ ಶಾಲೆಗಳನು ವಹಿಸಿಕೊಳ್ಳುವಂತೆ ಕೇಳಿಕೊಂಡರು. ಸಾಧಿಸುವ ಛಲವೊಂದಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬು ದಕ್ಕೆ ಶಾಲೆಯ ಸಾಧನೆ ಕನಡಿಹಿಡಿಯುತ್ತದೆ. ಇವರು ನಡೆಸುವ ಹೆಚ್ಚಿನ ಶಾಲೆಗಳು ಶೇ. 100ರಷ್ಟು ಫಲಿತಾಂಶ ನೀಡುತ್ತಿವೆ. ಧುರ್ಲಿ ಮತ್ತು ಚೌರ್‌ಗಾಂವ್ ಶಾಲೆಗಳು ಕಳೆದ 12 ವರ್ಷಗಳಿಂದ ಶೇ. 100 ಫಲಿತಾಂಶ ನೀಡುತ್ತಿವೆ! ಇಂದು ಸಾವಿರಾರು ಬುಡಕಟ್ಟು ಹುಡುಗಿಯರು ಶಿಕ್ಷಣ ಪಡೆದು ಸರ್ಕಾರಿ, ಖಾಸಗಿ, ಸ್ಥಳೀಯಾಡಳಿತಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಬಸ್ತರ್‌ನಲ್ಲಿ ಬದಲಾವಣೆ ತಂದ ಈ ಹುಡುಗಿಯರ ಬಗ್ಗೆ ಅಲ್ಲಿನ ಜನ ಹೆಮ್ಮೆಪಡುತ್ತಾರೆ. ಇಷ್ಟೆಲ್ಲ ಸಾಧಿಸಿದ ಧರಮ್‌ಪಾಲ್ ಸೈನಿ 83ರ ಹರೆಯದಲ್ಲೂ ವಿರಮಿಸದೆ ದುಡಿಯುತ್ತಿದ್ದಾರೆ.
ಬಸ್ತರ್‌ನಲ್ಲಿ ಹತ್ತು ವರ್ಷ ಇರುವುದಾಗಿ ವಿನೋಬಾ ಭಾವೆಯವರಿಗೆ ಮಾತುಕೊಟ್ಟಿದ್ದ ಸೈನಿಗೆ 36 ವರ್ಷಗಳನು ಪೂರೈಸಿದ ನಂತರವೂ 'ಮಾಡಬೇಕಾದ ಕೆಲಸ ಇನೂ ಮುಗಿದಿಲ್ಲ' ಎಂಬ ಭಾವನೆ.
ಪ್ರಶಸ್ತಿ ಕಟ್ಟಿಟ್ಟಬುತ್ತಿ
ಸೈನಿ ಶಾಲೆಯಲ್ಲಿ ಆಟ ಒಂದು ಜೀವನವಿಧಾನ. 'ಆಡಿ ಕಲಿ' ಶಿಕ್ಷಣ ಪದ್ಧತಿಯಲ್ಲಿ ನಂಬಿಕೆ ಇಟ್ಟವರು ಅವರು. ವಿದ್ಯಾರ್ಥಿಜೀವನದಲ್ಲಿ ಅಥ್ಲೆಟಿಕ್ ಚಾಂಪಿಯನ್ ಆಗಿದ್ದ ಸೈನಿಯವರಿಗೆ ಹೆಚ್ಚಿನ ಮಕ್ಕಳನು ಶಾಲೆಯತ್ತ ಆಕರ್ಷಿಸಲು ಆಟ ಸಹಾಯಕವಾಯಿತು. ಈಗಲೂ ಸೈನಿಯವರೇ ಕೋಚ್! ಕಳೆದ 20 ವರ್ಷಗಳಿಂದ 500ಕ್ಕೂ ಹೆಚ್ಚು ಹುಡುಗಿಯರು ರಾಷ್ಟ್ರಮಟ್ಟದ, 300ಕ್ಕೂ ಹೆಚ್ಚು ಹುಡುಗಿಯರು ರಾಜ್ಯಮಟ್ಟದ ಪ್ರಶಸ್ತಿ ತರುತ್ತಿದ್ದಾರೆ. ಬಸ್ತರ್‌ನ ಆಶ್ರಮ ಶಾಲೆಯ ಹುಡುಗಿಯರು ಸ್ಪರ್ಧಿಸಿದ್ದಾರೆಂದರೆ ಪ್ರಶಸ್ತಿ ಕಟ್ಟಿಟ್ಟ ಬುತ್ತಿ.
- ಶಶಿರೇಖಾ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


