ವಯಸ್ಸಾದ ಮೇಲೂ ಇರಲಿ ಚಟುವಟಿಕೆ

ಜೀವನಶೈಲಿಯಲ್ಲಿ ಮಾಡಿಕೊಳ್ಳುವ ಕೆಲವೊಂದು ಸಣ್ಣ ಬದಲಾವಣೆಗಳು ದೊಡ್ಡ ಫಲಿತಾಂಶವನ್ನೇ ನೀಡಬಲ್ಲವು. ಅದರಲ್ಲೂ ವಯಸ್ಸಾದಂತೆ ಆರೋಗ್ಯ ಕಾಪಾಡಿಕೊಳ್ಳಲು ಕೆಲವೊಂದು ವಿಷಯಗಳ ಪಾಲನೆ ಅತ್ಯಗತ್ಯ.
ವಿಟಮಿನ್ 'ಡಿ'
ವಯಸ್ಸಾದ ಮೇಲೆ ಬರುವ ಹಲವು ಕಾಯಿಲೆಗಳಿಗೆ ವಿಟಮಿನ್ 'ಡಿ' ಕೊರತೆ ಕಾರಣವಾಗಬಲ್ಲದು. ಇದರ ಕೊರತೆಯಿಂದಾಗಿ ಮೂಳೆ ಮೃದುಗೊಳ್ಳುತ್ತದೆ. ಏಕೆಂದರೆ ಕ್ಯಾಲ್ಷಿಯಂ ಮತ್ತು ಫಾಸ್ಪೇಟ್‌ಗಳನ್ನು ದೇಹಕ್ಕೆ ಸೇರ್ಪಡಿಸುವಲ್ಲಿ ವಿಟಮಿನ್ 'ಡಿ' ಪ್ರಮುಖ ಪಾತ್ರ ವಹಿಸುತ್ತದೆ. ಮೊಟ್ಟೆ, ಮೀನಿನಲ್ಲಿ ವಿಟಮಿನ್ 'ಡಿ' ಹೇರಳವಾಗಿರುತ್ತದೆ. ಅಲ್ಲದೆ ಬೆಳಗಿನ ಬಿಸಿಲಿಗೆ ಮೈಯೊಡ್ಡಿದರೂ ಆದೀತು. ಈ ಸೂರ್ಯಸ್ನಾನ ವಿಟಮಿನ್ 'ಡಿ'ಯನ್ನು ದೇಹಕ್ಕೆ ಒದಗಿಸುತ್ತದೆ.
ವಾಕಿಂಗ್
ವಯಸ್ಸಾದ ಮೇಲೆ ದೇಹಕ್ಕೆ ರೆಸ್ಟ್ ಬೇಕು ಎಂದು ಹಲವರು ಸುಮ್ಮನೆ ಮಲಗಿರುತ್ತಾರೆ. ಆದರೆ ಇದರಿಂದ ಹೃದಯಸಂಬಂಧಿ ರೋಗಗಳು, ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ದೇಹ ಸದಾ ಕಾಲ ಚಟುವಟಿಕೆಯಿಂದ ಕೂಡಿರಬೇಕು. ಹೀಗೆ ಕ್ರಿಯಾಶೀಲರಾಗಿದ್ದರೆ ಬಿಪಿ ತಗ್ಗಿ, ಹೃದಯ ಗಟ್ಟಿಗೊಳ್ಳುತ್ತದೆ. ಅಲ್ಲದೆ ಇದು ಮಾನಸಿಕ ಸ್ಯಾಸ್ಥ್ಯವನ್ನೂ ಕಾಪಾಡುತ್ತದೆ. ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಒಮ್ಮೊಮ್ಮೆ ವಾಕ್ ಹೋಗಿಬನ್ನಿ. ಆರೋಗ್ಯವಂತ ವ್ಯಕ್ತಿ ದಿನಕ್ಕೆ ಕನಿಷ್ಠ 5000 ಹೆಜ್ಜೆಗಳನ್ನಾದರೂ ಪೂರೈಸಬೇಕು ಎನ್ನುತ್ತದೆ ಅಧ್ಯಯನ.
ಆಹಾರ
ಪ್ರತಿನಿತ್ಯ ಆಹಾರದಲ್ಲಿ ತರಕಾರಿ, ಕಾಳು ಬಳಸಲು ಮರೆಯದಿರಿ. ಇದರಲ್ಲಿ ದೇಹಕ್ಕೆ ಬೇಕಾಗುವ ಪೌಷ್ಟಿಕಾಂಶ, ನಾರಿನಂಶ, ಎಣ್ಣೆಯಂಶ ಎಲ್ಲವೂ ಇರುತ್ತದೆ. ಅಲ್ಲದೆ ಕೊಲೆಸ್ಟೆರಾಲ್ ಕೂಡ ಕಡಿಮೆ ಇರುತ್ತದೆ. ಎಲ್ಲದಕ್ಕಿಂತ ಮೊದಲು ನೀವು ಗಮನಿಸಿಕೊಳ್ಳಬೇಕಾದ್ದು ನಿಮ್ಮ ದೇಹದ ತೂಕವನ್ನು. ಕೊಲೆಸ್ಟೆರಾಲ್‌ಯುಕ್ತ ಆಹಾರ ಸೇವನೆ ಮಾಡದಿರಿ. ತೂಕ ಹೆಚ್ಚಾದರೆ ನೀವು ಕಾಯಿಲೆಗಳಿಗೆ ಆಹ್ವಾನ ನೀಡುತ್ತಿರುವಿರಿ ಎಂದೇ ಲೆಕ್ಕ.
- ರೇಶ್ಮಾ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


