ಸಾಧನೆ

ಸಹಿಗಾಲಿ

ಸಹಿಗಾಲಿ
Published On :

ಎಲ್ಲ ಮಕ್ಕಳೂ ಪ್ರತಿಭಾವಂತರೆ, ಆದರೆ ಅವರಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಗುರುತಿಸಿ ಸೂಕ್ತ ತರಬೇತಿ ನೀಡಿದರೆ ಅವರು ಸಾಧಕರಾಗುವುದರಲ್ಲಿ ಸಂದೇಹವಿಲ್ಲ. ಈ ಮಾತಿಗೆ ಉದಾಹರಣೆ 12 ವರ್ಷದ ಸಹಿಷ್ಣು ಬಾಗ್‌ಮನೆ.
ಗೋ-ಕಾರ್ಟ್ ಅನ್ನು 7-8 ವಯಸ್ಸಿನ ಮಕ್ಕಳು ಕಂಪ್ಯೂಟರ್‌ನಲ್ಲಿ ಆಡುವುದನ್ನು ನಾವು ನೋಡುತ್ತೇವೆ. ಸಾಮಾನ್ಯವಾಗಿ ಅಮ್ಯೂಸ್‌ಮೆಂಟ್ ಪಾರ್ಕ್‌ಗಳಲ್ಲಿ ಗೋ-ಕಾರ್ಟ್‌ಗಳನ್ನು ಮಕ್ಕಳಿಗಾಗಿಯೇ ಒದಗಿಸಲಾಗುತ್ತದೆ. ಇದು ನಾಲ್ಕು ಚಿಕ್ಕದಾದ ಚಕ್ರಗಳನ್ನು ಹೊಂದಿರುವ ವಾಹನ. ಚಲಾಯಿಸುವುದು ಕಾರ್‌ನಂತೆಯೇ.
ಸಹಿಷ್ಣು ಬಾಗ್‌ಮನೆ ಕಂಪ್ಯೂಟರ್‌ನಲ್ಲಿ ಗೋ-ಕಾರ್ಟ್ ಆಡುತ್ತಲೇ ರಾಷ್ಟ್ರಮಟ್ಟದ ಟ್ರ್ಯಾಕ್‌ಗೆ ಬಂದಿದ್ದು. ಇತ್ತೀಚೆಗೆ ದಿಲ್ಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯ ಪ್ರತಿ ಸುತ್ತಿನಲ್ಲೂ 2-3ನೇ ಸ್ಥಾನ ಕಾಯ್ದುಕೊಂಡಿದ್ದ ಸಹಿಷ್ಣು ಅಂತಿಮವಾಗಿ ಮೂರನೇ ಸ್ಥಾನ ಗಳಿಸಿದ್ದಾನೆ. ಗಂಟೆಗೆ ಸರಾಸರಿ 75-80 ಕಿ.ಮೀ. ವೇಗದಲ್ಲಿ ಚಲಿಸುತ್ತಿದ್ದ ಈ  ಪೋರ ಕೆಲವು ಸಂದರ್ಭಗಳಲ್ಲಿ ನಿಪುಣ ರೇಸ್ ಸ್ಪರ್ಧಿಗಳಂತೆ ಜಂಪ್ ಕೂಡ ಮಾಡಿರುವುದು ವಿಸ್ಮಯವನ್ನುಂಟು ಮಾಡುತ್ತದೆ. ಸಮಯ ಕಳೆಯಲು ಅಭ್ಯಾಸ ಮಾಡಿಕೊಂಡ ಈ ಆಟ, ರಾಷ್ಟ್ರಮಟ್ಟದ ಚಾಂಪಿಯನ್‌ಶಿಪ್ ತಂದುಕೊಟ್ಟಿತೆಂದರೆ ಆಶ್ಚರ್ಯವಾಗದಿರದು.
ಸಹಿಷ್ಣು ಬಾಗ್‌ಮನೆ ಚಿಕ್ಕಮಗಳೂರು ಜಿಲ್ಲೆ ಕಳಸದ ಸಂದೀಪ್ ಬಿ.ವಿ. (9448016258, 9900093622) ಅವರ ಮಗ. ಬೆಂಗಳೂರಿನ ಚಿಕ್ಕನಾಯಕನಹಳ್ಳಿಯ ಪ್ರೈಮಸ್ ಪಬ್ಲಿಕ್ ಸ್ಕೂಲ್‌ನಲ್ಲಿ 6ನೇ ತರಗತಿ ಓದುತ್ತಿದ್ದಾನೆ. ಬೆಂಗಳೂರಿನ ಅಜ್ಜಿ ಮನೆಯಲ್ಲಿದ್ದು ಓದುತ್ತಿರುವ ಈ ಪುಟ್ಟ ಪೋರನಿಗೆ ಚಿಕ್ಕಂದಿನಿಂದಲೂ ಗೋ-ಕಾರ್ಟ್ ಆಡುವ ಹವ್ಯಾಸ. ಆ ಹವ್ಯಾಸದಿಂದಾಗಿಯೇ ಇಂದು ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಗಳಿಸಲು ಸಾಧ್ಯವಾಗಿದ್ದು.
ಈ ಚಿಕ್ಕ ವಯಸ್ಸಿಗೇ ಸಹಿಷ್ಣು ಸಾಧನೆ ಗಮನಾರ್ಹ ಎಂದೇ ಹೇಳಬಹುದು. ಏಕೆಂದರೆ ಬೆಂಗಳೂರಿನಲ್ಲಿ ಗೋ-ಕಾರ್ಟ್ ಆಡುವವರಿಗೆ ಉತ್ತಮವಾದ ಯಾವುದೇ ಒಳಾಂಗಣ ಕ್ರೀಡಾಂಗಣಗಳಿಲ್ಲ. ರಾಷ್ಟ್ರಮಟ್ಟದಲ್ಲಿ ಭಾಗವಹಿಸಲಿಚ್ಛಿಸುವವರು ಹೈದರಾಬಾದ್ ಅಥವಾ ದಿಲ್ಲಿಗೆ ಹೋಗಿ ಅಲ್ಲಿನ ಟ್ರ್ಯಾಕ್‌ಗಳಲ್ಲಿ ಗಂಟೆಯ ಲೆಕ್ಕದಲ್ಲಿ ಗೋ-ಕಾರ್ಟ್ ಬಾಡಿಗೆ ಪಡೆದು ಅಭ್ಯಸಿಸಬೇಕು. ಇದಕ್ಕೆ ತುಂಬಾ ಖರ್ಚು ತಗುಲುವುದರಿಂದ ಹೆಚ್ಚಿನ ಮಕ್ಕಳು ಇಂಥ ರೇಸ್‌ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ.
ಸಹಿಷ್ಣು ಕೇವಲ ಮೂರು ದಿನದ ತರಬೇತಿ ಪಡೆದು 'ನ್ಯಾಷನಲ್ ಚಾಂಪಿಯನ್ ಕಪ್‌' ಸ್ಪರ್ಧೆಯಲ್ಲಿ 3ನೇ ಬಹುಮಾನ ಪಡೆದಿದ್ದಾನೆ. 'ತಂದೆ ತಾಯಿ ಹಾಗೂ ನನ್ನ ಶಾಲೆಯ ಶಿಕ್ಷಕರ ಪ್ರೋತ್ಸಾಹದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು' ಎನ್ನುತ್ತಾನೆ ಸಹಿಷ್ಣು.
ಯಾವುದೇ ಶ್ರದ್ಧಾಯುಕ್ತ ರೇಸಿಂಗ್ ಬದುಕಿಗೆ ಗೋ-ಕಾರ್ಟಿಂಗ್ ಮೊದಲ ಹೆಜ್ಜೆಯೆಂದೇ ಪರಿಗಣಿಸಲಾಗುತ್ತದೆ.
ಮುಂದೆ ಅಂತಾರಾಷ್ಟ್ರೀಯ ಮಟ್ಟದ ರೇಸ್‌ನಲ್ಲಿ ಭಾಗವಹಿಸಿ ಚಾಂಪಿಯನ್ ಆಗುವ ಕನಸು ಕಟ್ಟಿಕೊಂಡಿರುವ ಸಹಿಷ್ಣುಗೆ ಗೆಲುವು ದೊರಕಲಿ ಎಂಬುದು ಎಲ್ಲರ ಹಾರೈಕೆ.

- ಶಶಿರೇಖಾ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.